suddiduniya.com

NH 150A :ಇಲ್ಲಿ ಟಾರ್ಚ್‍ ಬೆಳಕಲ್ಲೇ ತಿರುಗಾಡಬೇಕು..!!

NH 150A

ಲಿಂಗಸುಗೂರು : ಕೆಲವು ದಿನಗಳ ಹಿಂದೆ ಅಳವಡಿಸಲಾಗಿದ್ದ ಬೀದಿ ದೀಪಗಳು ಬೆಳಗದೇ ವಾಹನ ಸವಾರರು, ಪಾದಚಾರಿಗಳು ಕತ್ತಲಿನಲ್ಲಿ ಸಂಚಾರ ಮಾಡಬೇಕಾದ ದುಸ್ಥಿತಿ ಪಟ್ಟಣದ ಮೂಲಕ ಹಾದು ಹೋಗಿರುವ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150ಎ ಗೆ ಬಂದೊದಗಿದೆ.

NH 150A

ಪಟ್ಟಣದ ಮೂಲಕ ಹಾದು ಹೋಗಿರುವ ಜೇವರ್ಗಿ ಚಾಮರಾಜನಗರ ರಾಷ್ಟ್ರಿಯ ಹೆದ್ದಾರಿ-150ಎ ರಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ಭೌತಿಕವಾಗಿವಿಯೇ ಹೊರತು ರಸ್ತೆ ಸ್ಪಷ್ಟವಾಗಿ ಕಾಣುವಂತೆ ಬೆಳಕು ನೀಡುತ್ತಿಲ್ಲ. ದೀಪಗಳು ಬೆಳಗದೆ ಸೈಕಲ್ ಸವರಾರು, ಪಾದಚಾರಿಗಳು ಕತ್ತಲಿನಲ್ಲಿ ಸಂಚಾರ ಮಾಡುವಂತಾಗಿದೆ.

ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ಅಭಿವೃದ್ಧಿಗೊಳಿಸುವ ಹಿನ್ನಲೆಯಲ್ಲಿ 2022ರಲ್ಲಿ 255 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾಲೂಕಿನ ಹೊನ್ನಹಳ್ಳಿ ಗ್ರಾಮದಿಂದ ಮಸ್ಕಿ ಪಟ್ಟಣದವರಿಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಂತೆ ಲಿಂಗಸುಗೂರು ಹಾಗೂ ಮಸ್ಕಿ ಪಟ್ಟಣದಲ್ಲಿ ಹೆದ್ದಾರಿ ಎರಡು ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಬ್ಯಾರಿಕೇಡ್ ಹಾಕಲಾಗಿದೆ.

NH 150A

ಪಟ್ಟಣದ ಕಲುಬುರಗಿ ರಸ್ತೆಯಿಂದ ಬೈಪಾಸ್ ರಸ್ತೆ ವರಗಿನ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳಿಗೆ ಬೆಳಕಾಗಲಿ ಹಾಗೂ ಪಟ್ಟಣದ ಸೌಂದರ್ಯ ಹೆಚ್ಚಿಸಲು ಹಾಗೂ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಬೆಳಕಿನ ವ್ಯವಸ್ಥೆಗಾಗಿ ರಸ್ತೆ ಮಧ್ಯೆ ಲಕ್ಷಾಂತರ ಹಣ ಖರ್ಚು ಮಾಡಿ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿನ ವಿದ್ಯುತ್ ದೀಪಗಳು ಒಂದಡೆ ಬೆಳಗಿದರೆ ಮತ್ತೊಂದಡೆ ಬೆಳಗುತ್ತಿಲ್ಲ, ಇದರಿಂದ ಸಾರ್ವಜನಿಕರು ನಿತ್ಯ ಮೊಬೈಲ್ ಟಾರ್ಜ್‌ ಹಿಡಿದು ಓಡಾಡುವ ಪರಿಸ್ಥಿತಿ ಇದೆ. ಜನದಟ್ಟನೆಯ ಕೇಂದ್ರದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುವಂತಾಗಿದೆ.

NH 150A
NH 150A

ಹೆದ್ದಾರಿಗುಂಟ ಹಾಕಲಾಗಿರುವ ವಿದ್ಯುತ್ ದೀಪಗಳು ಬೆಳಗುತ್ತಿಲ್ಲವೆಂದರೆ ಅವುಗಳ ಗುಣಮಟ್ಟ ಎಷ್ಟರಮಟ್ಟಿಗೆ ಇರಬಹುದು ಎಂಬುದು ಸಾರ್ವಜನಿಕರಲ್ಲಿ ಸಂಶಯ ಮೂಡಿದೆ. ಇದನ್ನು ಪರಿಶೀಲನೆ ಮಾಡಬೇಕಾದ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಮಟ್ಟದ ಅಧಿಕಾರಿ ತಮಗೆ ಸಂಬಂಧವಿಲ್ಲದಂತೆ ಮೌನವಾಗಿದ್ದಾರೆ. ಆದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಪಟ್ಟಣದ ಜನರ ಆರೋಪವಾಗಿದೆ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ವಿದ್ಯುತ್ ದೀಪಗಳು ಹಾಕಿದರೂ ಜನರು ಕತ್ತಲಲ್ಲೇ ಸಂಚಾರ ಮಾಡಬೇಕಾದ ದುಸ್ಥಿತಿ ಬಂದೊಗಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!