suddiduniya.com

Oppose Hindu Rashtra :ಹಿಂದೂರಾಷ್ಟ್ರ ವಿರೋಧಿಸಿ ಜ.30ಕ್ಕೆ ಜನತಾ ಸಮಾವೇಶ

Oppose Hindu Rashtra

ಲಿಂಗಸುಗೂರು :ಬಹುಭಾಷಿಕ, ಬಹುಸಾಂಸ್ಕೃತಿಕ ಇಂಡಿಯಾ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದನ್ನು ವಿರೋಧಿಸಿ (Oppose Hindu Rashtra )ಜನವೆರಿ 30ರಂದು ಪಟ್ಟಣದ ಬೈಪಾಸ್ ರಸ್ತೆಯ ಆಯ್ದಕ್ಕಿ ಲಕ್ಕಮ್ಮ ಮೈದಾನದಲ್ಲಿ ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶ ಪ್ರಧಾನ ಸಂಯೋಜಕ ಆರ್.ಮಾನಸಯ್ಯ ತಿಳಿಸಿದ್ದಾರೆ.

Oppose Hindu Rashtra
Oppose Hindu Rashtra

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹುಟ್ಟಿ 100 ವರ್ಷಗಳಾದವು, ಹಾಗಾಗಿ ಆರ್‍.ಎಸ್‍.ಎಸ್‍ ಈ ವರ್ಷದುದ್ದಕ್ಕೂ ಶತ ಜಯಂತಿ ಆಚರಿಸಲು ಮುಂದಾಗಿದೆ. ಇದು ಕೇವಲ ಸಂಘದ ಆಚರಣೆಯಾಗಿ ಇರದೇ ಇಡೀ ಸರಕಾರವೇ ಈ ಆಚರಣೆಗೆ ಮುಂದಾಗಿದೆ. ಸಂಘ ಪರಿವಾರದ ಮುಂದಾಳತ್ವದಲ್ಲಿ ಕೇಂದ್ರ ಸರಕಾರ ಪ್ರಜಾಪ್ರಭುತ್ವ, ಜಾತ್ಯಾತಿತೆ ಹಾಗೂ ಗಣತಂತ್ರ ವ್ಯವಸ್ಥೆಯನ್ನು ರದ್ದು ಮಾಡುವ ಯೋಜನೆ ಹೊಂದಿದೆ. ಸಂವಿಧಾನವನ್ನು ಸ್ಮಾರಕ ಭವನದಲ್ಲಿಟ್ಟು ಪೂಜಿಸುವುದಕ್ಕೆ ಸೀಮಿತಗೊಳಿಸಿ ಇದರ ಜಾಗದಲ್ಲಿ ಹಿಂದೂ ಧರ್ಮಶಾಸ್ತ್ರವಾದ ಮನುಸೃತಿ ಜಾರಿಗೆ ತರಲು (Oppose Hindu Rashtra) ಹೊರಟಿದೆ ಎಂದರು.

ರೈತರು, ಕಾರ್ಮಿಕರು ಈ ದೇಶದ ಆರ್ಥಿಕತೆಯ ಆಧಾರ ಸ್ಥಂಭಗಳು, ದಲಿತರು, ಹಿಂದುಳಿದವರು, ಮುಸ್ಲಿಂ,ಕ್ರೈಸ್ತರು, ಬೌದ್ಧರು, ಜೈನ್,ಸಿಕ್,ಲಿಂಗಾಯತರು ಈ ದೇಶದ ನಿಜವಾದ ವಾರಸ್ಸುದಾರರು, ಮಹಿಳೆಯರು ಅರ್ಧ ಭಾರತದ ಅವಿಭಾಜ್ಯ ಅಂಗವಾಗಿದ್ದಾರೆ. ಬಹುಸಂಸ್ಕೃತಿ, ಬಹು ಜನರ,ಬಹು ಧರ್ಮದ ಭಾರತವನ್ನು ಬ್ರಾಹ್ಮಣ,ಬನಿಯಾ,ಠಾಕೋರಗಳ ದೇಶವನ್ನಾಗಿ ಬದಲಾಸುತ್ತಿದ್ದಾರೆ, ಹಿಂದೂ ರಾಷ್ಟ್ರದಲ್ಲಿ ಸಾಮಾನ್ಯ ಹಿಂದೂಗಳಿಗೆ, ಹಿಂದುಳಿದ ಹಾಗೂ ದಲಿತ ಜಾತಿಗಳಿಗೆ ಗುಲಾಮಗಿರಿಯೇ ಖಾತ್ರಿಯಾಗುತ್ತದೆ ಎಂದರು.

ನಾಗರಿಕ ತಿದ್ದುಪಡಿ(ಸಿಎಎ) ಕಾಯ್ದೆ, ತ್ರಿವಳಿ ತಲಾಕ್ ರದ್ದತಿ, ಸಮಾನ ನಾಗರಿಕ ಸಂಹಿತೆ(ಯುಸಿಸಿ) ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂರನ್ನು ಪರದೇಶಿಗಳನ್ನಾಗಿ ಫೋಷಿಸಲಾಗುತ್ತಿದೆ. ಸನಾತನ ಸಂಸ್ಕೃತಿ ಧರ್ಮವು ದೇಶದ ಧರ್ಮವಾದರೆ ಎಸ್ಸಿ,ಎಸ್ಟಿ, ಹಾಗೂ ಹಿಂದೂಳಿದ ವರ್ಗಗಳ ಸಾಮಾಜಿಕ ಮೀಸಲಾತಿ ಹಾಗೂ ಆಸ್ತಿ ಅಧಿಕಾರ ಮತ್ತು ಸಾಮಾಜಿಕ ಸಮಾನತೆ ನಿಷೇಧ ಮಾಡಲಾಗುತ್ತಿದೆ. ಒಂದೇ ದೇಶ ಒಂದು ಚುನಾವಣೆ, ತೆರಿಗೆ, ಒಂದೇ ಪೂಲೀಸ್‍ ಎಂದು ಹೇಳುತ್ತಾ ಫ್ಯಾಸಿಸ್ಟ್ ರಾಷ್ಟ್ರ ಅಸ್ಥಿತ್ವಕ್ಕೆ ಬರಲಿದೆ ಎಂದರು.

ಫ್ಯಾಸಿಸ್ಟ್ ದಾಳಿಯನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಸೋಲಿಸಲು, ನಿರ್ಮೂಲನೆಗೊಳಿಸಲು ಎದ್ದು ನಿಲ್ಲಬೇಕಾಗಿದೆ. ಈ ಮಹತ್ವದ ಉದ್ದೇಶದಿಂದ 20ಕ್ಕೂ ಹೆಚ್ಚು ಸಂಘಟನೆಗಳು ಒಗ್ಗೂಡಿ ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗ ಕಟ್ಟಿಕೊಂಡು ಜನವೆರಿ 30ರಂದು ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಸಮಾವೇಶದಲ್ಲಿ ಪ್ರಮುಖ ಚಳುವಳಿಗಾರಾದ ತಹೀನದೇವ, ಬಿ.ರುದ್ರಯ್ಯ, ನೂರ್ ಶ್ರೀಧರ್, ರವಿ ನಾಯಕ ಹಾಗೂ ಧಾರ್ಮಿಕ ಮುಖಂಡರಾದ ಧಮದೀಪ ಬೊಂತೆಜಿ, ಮಹಾಂತ ಸ್ವಾಮೀಜಿ, ಮೌಲಾನ್ ಮುಫ್ತಿ ಯೂನೂಸ್, ಫಾದರ್ ರಾಬರ್ಟ್ ಪೌಲ್ ಸೇರಿದಂತೆ ವಿವಿಧ ಮಠಾಧೀಶರು, ಮುಖಂಡರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ಮನವಿ ಮಾಡಿದರು.

ಈ ವೇಳೆ ಸಮಾವೇಶ ಸಂಯೋಜಕರಾದ ಸಿ.ದಾನಪ್ಪ ಮಸ್ಕಿ, ಎಂ.ಗಂಗಾಧರ, ವಿಜಯರಾಣಿ, ಎಂ.ಡಿ.ಅಮೀರ್ ಅಲಿ, ಖಾಲೀದ್ ಚಾವೂಸ್‍, ಬಸವರಾಜ, ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!