suddiduniya.com

Padagrahana samarambha :ಪಕ್ಷಪಾತ ವಿಲ್ಲದೆ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿ

Padagrahana samarambha

ಲಿಂಗಸುಗೂರು : ಯಾವುದೇ ಅಧಿಕಾರ ಶಾಶ್ವತವಲ್ಲ, ಆದರೆ ಅಧಿಕಾರ ಇರೋವರಿಗೂ ಜನಮೆಚ್ಚುವ ಕೆಲಸ ಮಾಡಬೇಕು, ಪಕ್ಷಪಾತವಿಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಯಚೂರು ಮಾಜಿ ಶಾಸಕ ಎ.ಪಾಪರೆಡ್ಡಿ ಕರೆ ನೀಡಿದರು.

Padagrahana samarambha
Padagrahana samarambha

ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದ ಬಳಿ (Padagrahana samarambha) ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭ( Padagrahana samarambha )ಉದ್ಘಾಟಿಸಿ ಮಾತನಾಡಿದ ಅವರು, ಇವತ್ತಿನ ರಾಜಕಾರಣ ಸುಳ್ಳಿನ ಮೇಲೆ ನಡೆದಿದೆ. ಪ್ರತಿದಿನವೂ ಸುಳ್ಳು ಹೇಳಿಕೊಂಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸುಳ್ಳಿನ ರಾಜಕಾರಣಕ್ಕೆ ಯುವ ರಾಜಕಾರಣಿಗಳು ಅಂಟಿಕೊಳ್ಳದೇ ಜನರ ಸೇವೆ ಮಾಡಲು ಮುಂದಾಗಬೇಕು. ಪುರಸಭೆ ಅಧ್ಯಕ್ಷ ಸ್ಥಾನ ದೊಡ್ಡ ಸ್ಥಾನವಾಗಿದೆ. ಪಟ್ಟಣಕ್ಕೆ ಪ್ರಥಮ ಪ್ರಜೆಯಾಗಿರುತ್ತಾರೆ. ನಿಸ್ವಾರ್ಥದಿಂದ ಸೇವೆ ಮಾಡುವ ಮನಸ್ಸು ಇರಬೇಕು. ಲಿಂಗಸುಗೂರಿನಲ್ಲಿ ಮುನ್ನೂರು ಕಾಪು ಸಮಾಜ ಅಲ್ಪಸಂಖ್ಯಾತವಾಗಿದೆ. ಅಂತಹದರಲ್ಲಿ ನಿಮ್ಮ ಮೇಲೆ ವಿಶ್ವಾಸವಿಟ್ಟು ಜನತೆ ಎರಡು ಭಾರಿ ಸದಸ್ಯರನ್ನಾಗಿ ಆಯ್ಕೆ ಮಾಡಿದೆ,ಈಗ ಪುರಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ, ಜನರು ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ತರದಂತೆ ಕೆಲಸ ಮಾಡಬೇಕು ಮಾದರಿಯಾಗುವಂತೆ ಕೆಲಸ ಮಾಡಿ ಊರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕೆಂದು ಎಂದು ನೂತನ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಅವರಿಗೆ ಸಲಹೆ ನೀಡಿದರು.

ನಾನೂ ಕೂಡಾ ರಾಯಚೂರು ನಗರಸಭೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಬೆಳಿಗ್ಗೆ 5ಗಂಟೆಯಿಂದ 9ಗಂಟೆವರಿಗೆ ಪ್ರತಿ ದಿನ ಒಂದೊಂದು ವಾರ್ಡಗಳಿಗೆ ಹೋಗಿ ಅಲ್ಲಿರುವ ಕುಡಿವ ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹರಿಸುವ ಕೆಲಸ ಮಾಡುತ್ತಿದ್ದೆ, ಇಲ್ಲೂ ಕೂಡಾ ಪ್ರತಿದಿನ ವಾರ್ಡಗಳಿಗೆ ಸಂಚಾರ ಮಾಡುವುದರಿಂದ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಸುಮಾರು 16 ವರ್ಷಗಳ ಕಾಲ ಮುನ್ನೂರು ಕಾಪು ಸಮಾಜದ ಶ್ಯಾಮಸುಂದರರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಪುರಸಭೆ ಅಧ್ಯಕ್ಷರಾಗಿ ಪಟ್ಟಣದಲ್ಲಿ ಎಲ್ಲಾ ಸಮುದಾಯದ ವಿಶ್ವಾಸಗಳಿಸಿ ಅವರು ಹೆಸರು ಅಜರಾಮರವಾಗಿರುವಂತೆ ಕೆಲಸ ಮಾಡಿದ್ದಾರೆ, ಅದೇ ಸಮುದಾಯಕ್ಕೆ 29 ವರ್ಷಗಳ ನಂತರ ಪುರಸಭೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ, ಜನರ ಮನಸ್ಸಲ್ಲಿ ಉಳಿಯುವಂತೆ ಅಭಿವೃದ್ಧಿ ಕೆಲಸ ಮಾಡಬೇಕು. ಪಕ್ಕದ ಮುದ್ದೇಬಿಹಾಳ ಪಟ್ಟಣ ಉತ್ತಮವಾಗಿ ಅಭಿವೃದ್ಧಿಗೊಳಿಸಲಾಗಿದೆ, ಅದೇ ಮಾದರಿ ಲಿಂಗಸುಗೂರನ್ನಾಗಿ ಅಭಿವೃದ್ಧಿ ಪಡಿಸಲು ಚಿಂತನೆ ಮಾಡಬೇಕೆಂದು ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಅವರಿಗೆ ಸಲಹೆ ನೀಡಿದರು.

Padagrahana samarambha

ಸಮಾರಂಭದಲ್ಲಿ ಮಾತನಾಡಿದ ಪುರಸಭೆ ನೂತನ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಲಿಂಗಸುಗೂರು ಪುರಸಭೆಯ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಕುಡಿಯುವ ನೀರಿನ ಸೌಲಭ್ಯ, ಚರಂಡಿ ಸ್ವಚ್ಚತೆ, ರಸ್ತೆ ಕಾಮಗಾರಿ, ಬೀದಿ ದೀಪಗಳ ಅಳವಡಿಕೆ ಮುಂತಾದ ಕೆಲಸಗಳನ್ನು ವಿಳಂಬ ಮಾಡದೇ ಪರಿಹರಿಸುವುದಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುವೆ, ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುವಂತೆ ಪುರಸಭೆಯ ವ್ಯಾಪ್ತಿಯ ಸುಮಾರು 7500 ಮನೆಗಳಿಗೆ ಹಸಿಕಸ ಹಾಗೂ ಒಣಕಸಕ್ಕಾಗಿ ಪ್ರತ್ಯೇಕವಾಗಿ 2 ಡಬ್ಬಿಗಳನ್ನು ವಿತರಿಸಲಾಗುವುದು. ಕಸವನ್ನು ಎಲ್ಲೆಂದರಲ್ಲಿ ಹಾಕದೇ ಪುರಸಭೆ ವಾಹನಗಳಿಗೆ ಹಾಕುವ ಮೂಲಕ ಸ್ವಚ್ಛ ಲಿಂಗಸುಗೂರಿಗೆ ಸಹಕಾರ ನೀಡಬೇಕು. ಲಿಂಗಸುಗೂರು ಅಭಿವೃದ್ಧಿ ಪಕ್ಷಭೇದ ಮರೆತು ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಹಕಾರ ನೀಡಬೇಕೆಂದರು. ಬೀದಿ ಬದಿಯ ವ್ಯಾಪಾರಿಗಳಿಗೆ ಮೂಲ ಭೂತ ಸೌಕರ್ಯಗಳ ನಿರ್ವಹಣೆಗೆ 2023-24ನೇ ಸಾಲಿನ ಬಜೆಟ್ಟಿನಲ್ಲಿ 8.00 ಲಕ್ಷಗಳ ರೂಪಾಯಿಗಳನ್ನು ಕಾಯ್ದಿರಿಸಲಾಗಿತ್ತು, ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಅವಶ್ಯ ಮೂಲ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ ಹಾಗೂ ವಿವಿಧ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಮುಂದಿನ ಬಜೆಟ್ಟಿನಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಇನ್ನೂ ಹೆಚ್ಚಿನ ಅನುದಾನವನ್ನು ಮೀಸಲಿಡಲು ಯೋಚಿಸಲಾಗಿದೆ. ಹಾಗೂ ಪೌರ ಕಾರ್ಮಿಕರಿಗೆ ವಿಶೇಷ ಸೌಲತ್ತುಗಳನ್ನು ನೀಡುವ ಕುರಿತು ಚಿಂತಿಸಲಾಗಿದೆ ಎಂದರು.

Padagrahana samarambha
Padagrahana samarambha

ಈ ವೇಳೆ ಪುರಸಭೆ ಉಪಾದ್ಯಕ್ಷೆ ಶರಣಮ್ಮ ಕೊಡ್ಲಿ, ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಹಿರಿಯ ವೈದ್ಯರಾದ ಡಾ.ಶಿವಬಸಪ್ಪ, ಡಾ.ಡಿ.ಹೆಚ್.ಕಡದಹಳ್ಳಿ, ಡಾ.ರಾಚಪ್ಪ ಬುದ್ದನ್ನಿ,ಪುರಸಭೆ ಸದಸ್ಯರಾದ ದೊಡ್ಡನಗೌಡ ಹೊಸಮನಿ, ಶರಣಪ್ಪ ಕೆಂಗೇರಿ, ಶಿವರಾಯ ದೇಗಲಮಡಿ, ಮುಖಂಡರಾದ ಸೂಗಯ್ಯ, ಪ್ರಭುಸ್ವಾಮಿ, ಜಿ.ಎನ್‍.ರೆಡ್ಡಿ, ಮಹೇಂದ್ರರೆಡ್ಡಿ, ಶಿವಾನಂದ ಐದನಾಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ವಿಜಯಲಕ್ಷ್ಮೀ ದೇಸಾಯಿ, ಪುರಸಪ್ಪ ಹುನಕುಂಟಿ, ಸಂಜೀವಪ್ಪ ಹುನಕುಂಟಿ, ಕಾಳಪ್ಪ ಬಡಿಗೇರ, ಶಿವಪ್ಪ ನಾಯಕ, ಸೇರಿದಂತೆ ಅನೇಕರಿದ್ದರು.

   


Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!