suddiduniya.com

PG Course :ಸ್ನಾತಕೋತ್ತರ ಪದವಿ ಕೋರ್ಸ್ ತರಲು ಶಕ್ತಿಮೀರಿ ಪ್ರಯತ್ನ

PG Course

ಲಿಂಗಸುಗೂರು :  ಲಿಂಗಸುಗೂರು ತಾಲೂಕು ಇತ್ತೀಚಿಗೆ ಶೈಕ್ಷಣಿಕವಾಗಿ ಪ್ರಗತಿಯಲ್ಲಿದ್ದರಿಂದ ತಾಲೂಕಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅಲೆದಾಟ ತಪ್ಪಿಸುವ ದೃಷ್ಠಿಯಿಂದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ನಾತಕೋತ್ತರ ಪದವಿ ಕೋರ್ಸ್ (PG Course) ಮಂಜೂರಾತಿ ಪಡೆಯಲು ಸರ್ಕಾರದ ಮಟ್ಟದಲ್ಲಿ ಶಕ್ತಿಮೀರಿ ಪ್ರಯತ್ನ ಮಾಡುವೆ ಎಂದು ಶಾಸಕ ಮಾನಪ್ಪ ವಜ್ಜಲ್‍  ಭರವಸೆ ನೀಡಿದರು.

PG Course

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿ.ಎ, ಬಿಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗಸುಗೂರು ಪಟ್ಟಣ ಸೇರಿ ಮುದಗಲ್ ನಲ್ಲಿ ಪದವಿ ಕಾಲೇಜುಗಳು ಹೆಚ್ಚು ಇರುವದರಿಂದ ಪದವಿ ನಂತರ ಸ್ನಾತಕೋತ್ತರ ಪದವಿ ಕೋರ್ಸ್ ಗಳ (PG Course )ಅಗತ್ಯವಿದೆ. ಈಗಾಗಿ ನಮ್ಮ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಜಿ.ಕೋರ್ಸ್‍ ಮಂಜೂರಾತಿ ಮಾಡಿಸುವಲ್ಲಿ ಪ್ರಯತ್ನ ಮಾಡುವೆ ಎಂದರು. ಕಾಲೇಜಿನ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ.  ಕಾಲೇಜಿಗೆ  ವಿಶಾಲವಾದ ಸ್ಥಳ ಒದಗಿಸಿದ್ದಲ್ಲದೇ, ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗ ಸಲ್ಲಿಸಿದ ಬೇಡಿಕೆಗಳಾದ ಪಿ.ಜಿ.ಕೋರ್ಸ್, ತಡೆಗೋಡೆ ನಿರ್ಮಾಣ, ಮುಖ್ಯ ದ್ವಾರದಲ್ಲಿ ಕಮಾನು ನಿರ್ಮಾಣ, ಹೈಮಾಸ್ ದೀಪ ಅಳವಡಿಕೆ ಸೇರಿದಂತೆ ಅವಶ್ಯಕತೆ ಇರುವ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸವೆ ಎಂದರು.

PG Course

ವಿದ್ಯಾರ್ಥಿಗಳು ತಂದೆ ತಾಯಿ ನಿಮಗಾಗಿ ಪಟ್ಟ ಶ್ರಮ , ಅವರ ತ್ಯಾಗ ಜೀವನವನ್ನು ಅರಿತು ಅವರ ಆಸೆಗಳನ್ನು ಪೂರೈಸಲು ಶ್ರಮಪಟ್ಟು ಓದಿ ಮನೆಯನ್ನು ಬೆಳಗಿ. ಆರೋಗ್ಯಕ್ಕಿಂತ ಮೇಲಾದುದು ಯಾವುದು ಇಲ್ಲ. ದುಶ್ಚಟಗಳಿಂದ ದೂರವಿರಿ. ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಿ. ಈ ಕಾಲೇಜಿನ ಪ್ರಾಂಶುಪಾಲರು , ಉಪನ್ಯಾಸಕರು ಮಾದರಿಯಾಗಿದ್ದು ಅವರ ಮಾರ್ಗದರ್ಶನ ಪಡೆದು ಮುಂದೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವರಾಜ ಕೊಪ್ಪರ ಅವರು ಸರ್ಕಾರಿ ಕಾಲೇಜುಗಳು ಹೊಂದಿರುವ ಸೌಲಭ್ಯ ಮತ್ತು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು ಆಯ್ಕೆ ಮಾಡಿಕೊಂಡು ಓದಿದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಉನ್ನತ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಹೊಸದಾಗಿ ನೇಮಕಗೊಂಡ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಿಗೆ ಸನ್ಮಾನಿಸಲಾಯಿತು. ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಹನುಮಂತಪ್ಪ ವಹಿಸಿದ್ದರು. ಪುರಸಭೆ ಸದಸ್ಯೆ ಸುನೀತಾ ಕೆಂಭಾವಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುದುಕಪ್ಪ ನಾಯಕ, ಅಮರೇಶ ಮಡ್ಡಿ, ಬಸವರಾಜ ಗುತ್ತೆದಾರ, ಅನಂತದಾಸ, ಭೀಮಸೇನ್ ಕುಲಕರ್ಣಿ,  ಹುಲಗೇಶ ನಾಯಕ, ರಾಜು ತುಂಬಾಕೆ, ಪರಶುರಾಮ ಕೆಂಭಾವಿ,  ಉಪನ್ಯಾಸಕರು ಉಪಸ್ಥಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!