suddiduniya.com

Private bus :ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್ ಗಳ ಪರವಾನಿಗೆ ರದ್ದು ಮಾಡಿ

Private bus

ಲಿಂಗಸುಗೂರು : ಹಬ್ಬಗಳು ಹಾಗೂ ಸಾಲು ಸಾಲು ರಜೆ ಇರುವ ದಿನಗಳಲ್ಲಿ ಖಾಸಗಿ ಬಸ್‍ಗಳ ( Private bus ) ಟಿಕೆಟ್ ದರ ನಾಲ್ಕು ಹೆಚ್ಚಿಸಿ ವಸೂಲಿ ಮಾಡುತ್ತಿದ್ದು ಇದರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ತಾಲೂಕಾ ಕಾರ್ಯದರ್ಶಿ ರಮೇಶ ವೀರಾಪುರ ಒತ್ತಾಯಿಸಿದ್ದಾರೆ.

Private bus
Private bus

ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಸಾಲು ಸಾಲು ರಜೆಗಳಿರುವ ಹಿನ್ನಲೆಯಲ್ಲಿ  ಬೆಂಗಳೂರು, ಮಂಗಳೂರು, ಪುಣೆ ಸೇರಿ ಇತರೆ ಮಹಾನಗರಗಳಿಂದ ತಮ್ಮ ಊರುಗಳಿಗೆ ಬಂದಿದ್ದ ಪ್ರಯಾಣಿಕರಿಂದ ಖಾಸಗಿ ಬಸ್ ಗಳಲ್ಲಿ ಮೂರು ನಾಲ್ಕು ಪಟ್ಟು ಹಣ ವಸೂಲಿ ಮಾಡುತ್ತಿದ್ದು ಪ್ರಯಾಣಿಕರು ದುಬಾರಿ ಹಣ ನೀಡಿ ಮಹಾನಗರಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.  ಖಾಸಗೀ ವಾಹನಗಳ ಮೇಲೆ ಕಾನೂನು ಕಠಿಣ ಕ್ರಮ ಜರುಗಿಸಲು ಸರ್ಕಾರದ ಮುಂದಾಗಬೇಕು.

Private bus

ಖಾಸಗಿ ಬಸ್ ಗಳು ದರ ಏರಿಸಿದರೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸತ್ತಲೇ  ಆದರೂ ಆನ್ ಲೈನ್ ನಲ್ಲಿ ಬುಕ್ ಮಾಡಲು ಹೋದರೆ ನಾಲ್ಕೈದು ಪಟ್ಟು ದರ ಏರಿಸಲಾಗಿದೆ. ಇದು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಪ್ರಯಾಣಿಕರ ಅನಿವಾರ್ಯತೆಯನ್ನೇ ಬಂಡವಾಳವನ್ನಾಗಿಸಿಕೊಂಡು ದರ ಏರಿಸುತ್ತಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಆರ್ ಟಿಓ ಹಾಗೂ ಸಾರಿಗೆ ಇಲಾಖೆಯೂ ಇದರಲ್ಲಿ ಶಾಮೀಲು ಇರಬಹುದು ಅಂದು ಅನುಮಾನ ಹುಟ್ಟಿಸುತ್ತಿದೆ. ಕೂಡಲೇ ಸಾರಿಗೆ ಇಲಾಖೆ ಮಾತ್ತು ಆರ್ ಟಿಓ ಅಧಿಕಾರಿಗಳು ಹೆಚ್ಚವರಿ ಹಣ ಪಡೆಯುತ್ತಿರುವ ಖಾಸಗಿ ಬಸ್‌ಗಳ ಪರವಾನಗಿ ಮತ್ತು ನೋಂದಣಿ ಪತ್ರ ಅಮಾನತು ಮಾಡಬೇಕು. ಟಿಕೆಟ್ ವಿತರಕರ ಮತ್ತು ಆ್ಯಪ್ ಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಸರ್ಕಾರಿ ಬಸ್ ಸೇವೆ ಸಮರ್ಪಕವಾಗಿದ್ದರೆ ಜನರು ಖಾಸಗಿ ಬಸ್‌ಗಳ ಮೇಲೆ ಅವಲಂಬಿಸುವುದು ಕಡಿಮೆ ಆಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ರಾಜ್ಯ ಸಾರಿಗೆ ಇಲಾಖೆ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ ಬಿಡುವ ವ್ಯವಸ್ಥೆ ಮಾಡಬೇಕು. ಖಾಸಗೀ ಬಸ್ ಮಾಲೀಕರ ಲಾಭಿಗೆ ಸಂಬಂಧಿಸಿದ ಇಲಾಖೆಗಳು ಒಳಗಾಗಬಾರದು. ಖಾಸಗೀ ವಾಹನಗಳ ದರ್ಬಾರ್ ಗೆ ಕೂಡಲೇ ಬ್ರೇಕ್ ಹಾಕದಿದ್ದರೆ ಸಿಪಿಐ(ಎಂ) ಪಕ್ಷದಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಎಚ್ಚರಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!