ಶಾಸಕ ವಜ್ಜಲ್ ಗೆ ಮನವಿ :
ಲಿಂಗಸುಗೂರು : ಪಟ್ಟಣದ ಸಾರಿಗೆ ಘಟಕದ ಎದುರು ಹೊಸದಾಗಿ ನಿರ್ಮಾಣದ ಹಂತದಲ್ಲಿರುವ ನ್ಯಾಯಾಲಯ ಸಂಕೀರ್ಣದಲ್ಲಿ(Court complex) ವಿವಿಧ ಸೌಲಭ್ಯ ಒದಗಿಸಬೇಕೆಂದು ತಾಲೂಕು ನ್ಯಾಯವಾದಿಗಳ ಸಂಘದ(Bar Association) ಪದಾಧಿಕಾರಿಗಳು ಶಾಸಕ ಮಾನಪ್ಪ ವಜ್ಜಲ್‌ರಿಗೆ ಮನವಿ ಸಲ್ಲಿಸಿದರು.
ಹಳೆಯ ವಿಸಿಬಿ ಮಹಾವಿದ್ಯಾಲಯದ ಜಾಗದಲ್ಲಿ ಸಾರಿಗೆ ಘಟಕದ ಎದುರು ನಿರ್ಮಾಣದ ಹಂತದಲ್ಲಿರುವ ಹೊಸ ಕೋರ್ಟ್ ಸಂಕೀರ್ಣದಲ್ಲಿ ವಿವಿಧ ಸೌಲಭ್ಯಗಳಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಯಡಿಯಲ್ಲಿ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಏನೇನು ಸೌಲಭ್ಯಗಳು ..?:
ಹೊಸ ಕೋರ್ಟ್ ಸಂಕಿರ್ಣದ ಭದ್ರತೆ ದೃಷ್ಠಿಯಿಂದ ಆವಣರದಲ್ಲಿ ನಾಲ್ಕು ದಿಕ್ಕುಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲು, ಗಾರ್ಡನ್ ನಿರ್ಮಾಣ ಮಾಡಲು, ನ್ಯಾಯಾಧೀಶರಿಗೆ, ವಕೀಲರಿಗೆ ದೈಹಿಕ ಚಟುವಟಿಕೆಗಳಿಗಾಗಿ ಲಾನ್ ಟೆನ್ನಿಸ್ ಆಟದ ಮೈದಾನ ನಿರ್ಮಿಸಲು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಹೊರಾಂಗಣ ಸಭಾ ವೇದಿಕೆ ನಿರ್ಮಿಸಲು, ನ್ಯಾಯಾಲಯದ ಮುಂಭಾಗದಲ್ಲಿ ಎರಡು ಕೋರಿಕೆ ಬಸ್ ತಂಗುದಾಣ ನಿರ್ಮಿಸಲು, ವಕೀಲರ ಭವನ ಹಾಗೂ ಕ್ಯಾಂಟಿನ್‌ಲ್ಲಿ ಪೀಠೋಪಕರಣಗಳ ವ್ಯವಸ್ಥೆಗಾಗಿ ಬೇಕಾಗುವ ಅಂದಾಜು ವೆಚ್ಚವನ್ನು ತಮ್ಮ ಅಧಿಕಾರ ಬಳಿಸಿಕೊಂಡು ಅನುದಾನಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಶಿಫಾರಸ್ಸು ಮಾಡಿ ಅನುದಾನ ಬಿಡುಗಡೆಗೊಳಿಸುವ ಪ್ರಯತ್ನ ಮಾಡಬೇಕು. ಇನ್ನುಳಿದ ಸೌಲಭ್ಯಕ್ಕಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನ ಒದಗಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಪರಿಶೀಲನೆ :
ಇದಕ್ಕೂ ಮುನ್ನ ಶಾಸಕ ಮಾನಪ್ಪ ವಜ್ಜಲ್ ಹೊಸ ಕೋರ್ಟ್ ಸಂಕೀರ್ಣದ ಹಾಲ್, ವಕೀಲರ ಭವನ, ನ್ಯಾಯಾಧೀಶರ ವಸತಿ ಗ್ರಹಗಳ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಹೊಸ ನ್ಯಾಯಾಲಯದ ಸಂಕಿರ್ಣ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೂ ಭಾಕಿ ಉಳಿದಿರುವ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದಕೊಂಡು ಆದಷ್ಟು ಬೇಗ ಮುಗಿಸುವಂತೆ ಸ್ಥಳದಲ್ಲಿದ್ದ ಪಿಡಬ್ಲೂಡಿ ಜೆಇ ಲಕ್ಷ್ಮೀಕಾಂತ ಗುಂಟಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಾಲರಾಜ್ ಸಾಗರ, ಹಿರಿಯ ವಕೀಲರಾದ ನಾಗರಾಜ ಗಸ್ತಿ, ವೀರಭದ್ರಪ್ಪ ನಿಲೋಗಲ್, ಅರುಣ್, ವಿಶ್ವನಾಥ್, ದೇವೆಂದ್ರ, ಹನುಮಂತರೆಡ್ಡಿ, ಬಸವಲಿಂಗಯ್ಯ ವಸ್ತçದ್, ಗಿರೀಶ್ ಕುಲಕರ್ಣಿ, ಹಾಗೂ ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಸೇರಿದಂತೆ ಅನೇಕರಿದ್ದರು.
ಹಟ್ಟಿ ಹೊಸೂರು-ರೋಡಲಬಂಡಾ ರಸ್ತೆ ನಿರ್ಮಾಣಕ್ಕೆ ಆಗ್ರಹ :
ಲಿಂಗಸುಗೂರು ತಾಲೂಕಿನ ಕಡ್ಡೋಣಿ ಅಡ್ಡರಸ್ತೆಯಿಂದ ಹಟ್ಟಿ ಹೊಸೂರು-ರೋಡಲಬಂಡಾ(ತ) ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಶಾಸಕ ಮಾನಪ್ಪ ವಜ್ಜಲ್‌ರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕಡ್ಡೋಣಿ ಅಡ್ಡರಸ್ತೆಯಿಂದ ಹಾದು ಹೋಗುವ ಹಟ್ಟಿ ಹೊಸೂರು-ರೋಡಲಬಂಡಾ (ತವಗ) ರಸ್ತೆ ನಿರ್ಮಾಣಕ್ಕಾಗಿ ಕಳೆದ ಎಂಟು ವರ್ಷಗಳ ಹಿಂದೆ ಅನುದಾನ ಮಂಜೂರಾಗಿತ್ತು, ಆದರೆ ಇದುವರಿಗೂ ರಸ್ತೆ ನಿರ್ಮಾಣ ಮಾಡಿಲ್ಲ, ಹಟ್ಟಿಯಿಂದ ಒಂದು ಕೀ.ಮೀ ಹಾಗೂ ತವಗದಿಂದ ಒಂದು ಕಿ.ಮೀ ಹಾಗೇ ಉಳಿದಿರುತ್ತದೆ. ಎರಡು ಕಡೆ ಬಿಟ್ಟು ಮಧ್ಯದಲ್ಲಿ ರಸ್ತೆ ನಿರ್ಮಾಣ ಮಾಡಿರುತ್ತಾರೆ ಅದು ಕೂಡಾ ಮಳೆಗೆ ಕೊಚ್ಚಿ ಹೋಗಿದ್ದು, ಇದರಿಂದ ರಸ್ತೆ ಅಕ್ಷರಹಃ ಕೆಸರು ಗದ್ದೆಯಾಗಿದೆ. ಈ ರಸ್ತೆಯಲ್ಲಿ ತಿರುಗಾಡಲು ರೈತರಿಗೆ ಹಾಗೂ ಸಾರ್ವಜನಿಕರಿಗೆ ತೀರಾ ತೊಂದರೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಎರಡು ಗ್ರಾಮಗಳ ಸಂಪರ್ಕ ಒದಗಿಸುವ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆAದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಾಲರಾಜ್ ಸಾಗರ, ಹಿರಿಯ ವಕೀಲರಾದ ನಾಗರಾಜ ಗಸ್ತಿ, ವೀರಭದ್ರಪ್ಪ ನಿಲೋಗಲ್, ಅರುಣ್, ವಿಶ್ವನಾಥ್, ದೇವೆಂದ್ರ, ಹನುಮಂತರೆಡ್ಡಿ, ಬಸವಲಿಂಗಯ್ಯ ವಸ್ತçದ್, ಗಿರೀಶ್ ಕುಲಕರ್ಣಿ, ಹಾಗೂ ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಸೇರಿದಂತೆ ಅನೇಕರಿದ್ದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿವಿಧ ಕಾಮಗಾರಿಗೆ ಶಾಸಕ ವಜ್ಜಲ್ ಅಡಿಗಲ್ಲು :
ಲಿಂಗಸುಗೂರು : ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿವಿಧ ಮೂಲಸೌಕರ್ಯ ಒದಗಿಸಲು ವಿವಿಧ ಕಾಮಗಾರಿಗಳಿಗೆ ಶಾಸಕ ಮಾನಪ್ಪ ವಜ್ಜಲ್ ಅಡಿಗಲ್ಲು ನೆರವೇರಿಸಿದರು.
2022-23ನೇ ಸಾಲಿನ ನಬಾರ್ಡ್ ಯೋಜನೆಯ ಟ್ರೆಂಚ್ 28ರ ಅಡಿಯಲ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ 250 ಲಕ್ಷ ರೂಪಾಯಿಗಳ ಕಾಮಗಾರಿಗಳಿಗೆ ಶಾಸಕ ಮಾನಪ್ಪ ವಜ್ಜಲ್ ಅಡಿಗಲ್ಲು ನೆರವೇರಿಸಿ ನಂತರ ಮಾತನಾಡಿದ ಅವರು, ಯಾರೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಹಿಂದಿನಿAದಲೂ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಇದನ್ನು ಪಾಲಕರು ಸದುಪಯೋಗ ಪಡಿಸಿಕೊಂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು.
ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಠಿಯಿಂದ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗಾಗಿ ಹೊಸ ಕೊಠಡಿ, ಕಂಪ್ಯೂಟರ್, ಕಾಂಪೌಂಡ್, ಕುಡಿವ ನೀರು ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಮೂರನೇ ಭಾರಿಗೆ ಶಾಸಕನಾದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ, ಒಂದೂವರೆ ವರ್ಷದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಲ್ಲಿ ಶಾಲೆಗಳಿಗೆ ಕಂಪ್ಯೂಟರ್, ಪೀಠೋಪಕರಣ ಸೇರಿ ಇತರೆ ಸೌಲಭ್ಯಗಳಿಗಾಗಿ 10-12 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ ಎಂದರು.
ಈ ವೇಳೆ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಬಸವರಾಜ ಗುತ್ತೇದಾರ, ನಾಗಭೂಷಣ, ವೆಂಕನಗೌಡ ಐದನಾಳ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ಸರ್ಜಾಪುರ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.
Table of Contents
- Jagdish Sharma sampa : ಮಹಾಭಾರತ ಪ್ರತಿಯೊಬ್ಬ ಭಾರತೀಯನ ಚರಿತ್ರೆ
- Amit shah :ಅಂಬೇಡ್ಕರರಿಗೆ ಅವಮಾನಿಸಿದ ಅಮಿತ್ ಶಾ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
- Mahabharata :ಡಿ.21ರಿಂದ ಮಹಾಭಾರತ ಚಿಂತನ ಮಂಥನ ಕಾರ್ಯಕ್ರಮ
- Rambhapuri peetha :ಮನುಷ್ಯನಿಗೆ ಶಾಸ್ತ್ರ-ಶಸ್ತ್ರದ ಭಯವಿರಬೇಕು
- Drop Drip irrigation ಹನಿ ನೀರಾವರಿ ಬಿಟ್ಟು ಹರಿ ನೀರಾವರಿ ಜಾರಿಗೊಳಿಸಿ