suddiduniya.com

R.Manasaiah :ಆರ್. ಮಾನಸಯ್ಯರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ

R.Manasaiah

ಲಿಂಗಸುಗೂರು : ಶ್ರೀರಾಮ ಸೇನೆ (sri ramsena) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ (Pramod Mutalik) ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಟಿಯುಸಿಐ ಮುಖಂಡ ಆರ್.ಮಾನಸಯ್ಯ ಅವರನ್ನು ಕೂಡಲೇ ರಾಯಚೂರು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

R.Manasaiah

ಕಳೆದ ನವೆಂಬರ್ 15ರಂದು ಶ್ರೀರಾಮ ಸೇನೆ ತಾಲೂಕು ಘಟಕದಿಂದ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಪಥಸಂಚಲನದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು ಭಾಗವಹಿಸಿ ಹಿಂದೂತ್ವದ ಕುರಿತು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ರೈತರ ಭೂಮಿ ಕಬಳಿಸುತ್ತಿರುವ ವಕ್ಫ್ ಮಂಡಳಿ ಕುರಿತು ತಮ್ಮ ಭಾಷಣ ಮಾಡಿದ್ದಾರೆ. ಇದನ್ನು ಸಹಿಸದ ಕೆಲವರು ಪ್ರಮೋದ ಮುತಾಲಿಕ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ.

ಹಿಂದೂ ಸಮಾಜ ಹಾಗೂ ರಾಷ್ಟ್ರಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿರುವ ಪ್ರಮೋದ ಮುತಾಲಿಕ್  ಅವರ ಬಗ್ಗೆ ಟಿಯುಸಿಐನ ಆರ್.ಮಾನಸಯ್ಯ ಅವರು ಅವಹೇಳನವಾಗಿ ಮಾತನಾಡಿದ್ದಾರೆ. ಮೇಲಾಗಿ ಆರ್‍ ಎಸ್‍ ಎಸ್‍ ಬ್ಯಾನ್ ಮಾಡಬೇಕು ಎಂದು ಹೇಳಿರುವ ಆರ್‍.ಮಾನಸಯ್ಯ (R.Manasaiah )ವಿರುದ್ಧ ಅಂದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಯಂ ಪ್ರಕರಣ ದಾಖಲು ಮಾಡಬೇಕಾಗಿತ್ತು. ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಖಂಡನೀಯ. ಕೂಡಲೇ ಮಾನಸಯ್ಯನವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಇಲ್ಲದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು,   ಆರ್‍.ಎಸ್‍.ಎಸ್‍ ಬಗ್ಗೆ ಮಾತನಾಡುವ ಮುಂಚೆ ಆರ್.ಎಸ್‍.ಎಸ್‍ ಮಾಡಿದ ಕೆಲಸದಲ್ಲಿ ಶೇ.1ರಷ್ಟು ಕೆಲಸವನ್ನು ಮಾನಸಯ್ಯ (R.Manasaiah) ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

oplus_4194304

ಆರ್.ಮಾನಸಯ್ಯನವರು (R.Manasaiah )ರೈತರ ಮತ್ತು ಅರಣ್ಯ ಭೂಮಿಯನ್ನು ಖಬ್ಜ ಮಾಡಿದ್ದರೂ ಇಲ್ಲಿವರಿಗೂ ಅರಣ್ಯಾಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿಲ್ಲವೆಂದರೆ ಇದರಲ್ಲಿ ತಾಲೂಕು ಮತ್ತು ಜಿಲ್ಲೆಯ ಅರಣ್ಯ ಅಧಿಕಾರಿಗಳ ಕೈವಾಡ ಇರುವುದು ಎದ್ದು ಕಾಣುತ್ತಿದೆ. ಅಲ್ಲದೆ ಆರ್‍.ಮಾನಸಯ್ಯನವರ ಕುಟಂಬದ ಹೆಸರಿನಲ್ಲಿರುವ ಆಸ್ತಿಗಳನ್ನು ಪರಿಶೀಲಿಸಬೇಕು ಒಂದು ವೇಳೆ ಅರಣ್ಯ ಭೂಮಿ ಅಥವಾ ಕಂದಾಯ ಭೂಮಿ ಒತ್ತುವರಿ ಮಾಡಿದ್ದರೆ ತಕ್ಷಣವೇ ಸರಕಾರದ ಸುಪರ್ದಿಗೆ ಪಡೆಯಬೇಕು, ಇಲ್ಲವಾದಲ್ಲಿ ರಾಜ್ಯಾಧ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ರಘುಗೌಡ ನಾಯಕ, ಹಟ್ಟಿ ಘಟಕದ ಅಧ್ಯಕ್ಷ ರಾಜುರೆಡ್ಡಿ,ಗುರುಗುಂಟಾ ಹೋಬಳಿ ಘಟಕದ ಅಧ್ಯಕ್ಷ ಕಾಳು ನಾಯಕ, ಮುಖಂಡರಾದ ಹನುಮಂತ ಅಂಬಿಗರ, ಅಮರೇಶ ಛತ್ರಪತಿ, ಡಿ.ಕೆ.ನಾಯಕ,ಮೌನೇಶ ನಾಯಕ, ಸುರೇಶ, ಪ್ರದೀಪ್, ಪ್ರಕಾಶ, ಅಮರೇಶ ನಾಯಕ, ಟಿಪ್ಪು ನಾಯಕ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!