ಜಿಲ್ಲಾ ಬಂದ್‌ಗೆ ಬೆಂಬಲಿಸಿ ಲಿಂಗಸುಗೂರು ಬಂದ್
ಲಿ0ಗಸುಗೂರು : ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸುವಂತೆ(implementation of internal reservation) ಒತ್ತಾಯಿಸಿ ಅಕ್ಟೋಬರ್ 3ರಂದು ನಡೆಸಿರುವ ರಾಯಚೂರು ಜಿಲ್ಲಾ ಬಂದ್‌ಗೆ ಬೆಂಬಲಿಸಿ ಲಿಂಗಸುಗೂರು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಒಳ ಮೀಸಲಾತಿ ಜಾರಿಗಾಗಿ ಐಕ್ಯತಾ ಹೋರಾಟ ಸಮಿತಿ ಮುಖಂಡ ಲಿಂಗಪ್ಪ ಪರಂಗಿ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬ0ಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ್ನು ಜಾರಿಗೊಳಿಸದ ಸರ್ಕಾರದ ವಿಳಂಭ ನೀತಿಯನ್ನು ಖಂಡಿಸಿ ಒಳ ಮೀಸಲಾತಿ ಜಾರಿಗಾಗಿ ಅ.3ರಂದು ರಾಯಚೂರು ಜಿಲ್ಲಾ ಬಂದ್‌ಗೊಳಿಸಲಾಗುತ್ತಿದ್ದರಿ0ದ ಅದಕ್ಕಾಗಿ ಲಿಂಗಸುಗೂರು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ನ 7 ಸದಸ್ಯರ ಪೀಠ ಒಳ ಮೀಸಲಾತಿ ಅನುಷ್ಠಾನಕ್ಕೆ ಸಂಬ0ಧಿಸಿದ0ತೆ ಸ್ಪಷ್ಟವಾದ ತೀರ್ಪು ನೀಡಿ ಎರಡು ತಿಂಗಳು ಕಳೆದರೂ ಇಲ್ಲಿವರಿಗೂ ಈ ಬಗ್ಗೆ ಯಾವುದೇ ಕ್ರಮಗೊಳ್ಳದ ರಾಜ್ಯ ಸರ್ಕಾರದ ನೀತಿ ಅತ್ಯಂತ ಖಂಡನೀಯವಾಗಿದ್ದು, ಅದಕ್ಕಾಗಿ ಅಕ್ಟೋಬರ್ 3 ರಂದು ಲಿಂಗಸುಗೂರು ಬಂದ್ ಮಾಡಿ ಶಾಂತಿಯುತವಾಗಿ ಹೋರಾಟ ನಡೆಯಲಿದ್ದು, ಶಾಲಾ-ಕಾಲೇಜುಗಳ ಮುಖ್ಯಸ್ಥರು ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕು. ವ್ಯಾಪಾಸ್ಥರು ವ್ಯಾಪಾರ-ವಹಿವಾಟು ಬಂದ್ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲಿಸಬೇಕೆ0ದು ಮನವಿ ಮಾಡಿದರು. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಯಲಿದ್ದು, ಅಷ್ಟರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಂದ್ ಹೋರಾಟವನ್ನು ವಿಸ್ತರಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ರಾಯಚೂರಿನಿಂದಲೇ ಒಳ ಮೀಸಲಾತಿ ಕೂಗು :
ಹಿರಿಯ ಮುಖಂಡ ಡಿ.ಬಿ.ಸೋಮನಮರಡಿ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸುವಂತೆ ಕಳೆದ 30 ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯಿಂದಲೇ ಹೂರಾಟದ ಕೂಗು ಎದ್ದಿದೆ. ಅಲ್ಲಿಂದ ಮೂರು ದಶಕಗಳ ಕಾಲ ಹೋರಾಟ ಮಾಡಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ, ನಮ್ಮ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಧ್ವನಿಯಾಗಿ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈಗಾಗಲೇ ಕೆಲವು ರಾಜ್ಯಗಳು ಒಳ ಮೀಸಲಾತಿ ಜಾರಿಗೊಳಿಸಿದೆ ಆದರೆ ಕರ್ನಾಟಕದಲ್ಲಿ ಜಾರಿಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ಜಾರಿಗೊಳಿಸಿದ್ದರೆ ಸಾಮಾಜಿಕ ನ್ಯಾಯ ಸಿಗೋದಾದರೂ ಹೇಗೆ..?
ನಾವು ಯಾವುದೇ ಸಮುದಾಯದ ವಿರುದ್ಧಾಗಲಿ ಅಥವಾ ಅವರ ಮೀಸಲಾತಿ ಕಸಿಯುವ ಕೆಲಸ ಮಾಡುತ್ತಿಲ್ಲ, ಒಳ ಮೀಸಲಾತಿ ನಮ್ಮ ಹಕ್ಕಾಗಿದೆ ಇದನ್ನು ಪಡೆಯಲು ಹೋರಾಟ ಮಾಡಲಾಗುತ್ತಿದೆ. ಅಕ್ಟೋಬರ್ 3ರಂದು ನಡೆಯುವ ಬಂದ್ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಕಾ0ಗ್ರೆಸ್ ದಲಿತರ ಪರ ಇಲ್ಲ :
ಹಿರಿಯ ಹೋರಾಟಗಾರ ಹನುಮಂತಪ್ಪ ಕುಣಿಕೆಲ್ಲೂರು ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳ ಸರ್ಕಾರ ದಲಿತರ ಬಗ್ಗೆ ಉದ್ದುದ್ದ ಭಾಷಣ ಮಾಡುವುದು ಕೇವಲ ಡೊಂಗಿತನವಾಗಿದೆ. ನಿಜಕ್ಕೂ ಯಾವ ಪಕ್ಷಕ್ಕೂ ದಲಿತರ ಬಗ್ಗೆ ಕಾಳಜಿ ಇಲ್ಲದಾಗಿದೆ. ಈ ಮೊದಲಿನಿಂದಲೂ ಕಾಂಗ್ರೆಸ್ ದಲಿತರನ್ನು ಓಟು ಬ್ಯಾಂಕ್ ಮಾಡಿಕೊಂಡು ಈಗ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಮೊಂಡುತನ ಪ್ರದರ್ಶನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ದಲಿತರ ಪರ ಇಲ್ಲ, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ 101 ಜಾತಿಗಳ ತಾಳ್ಮೆ ಪರೀಕ್ಷೆ ಮಾಡೋದು ಬಿಟ್ಟು ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದರು ಆಗ್ರಹಿಸಿದರು.
Table of Contents
ಈ ವೇಳೆ ಮುಖಂಡರಾದ ಸಂಜೀವಪ್ಪ ಹುನುಕುಂಟಿ, ಕುಪ್ಪಣ್ಣ ಹೊಸಮನಿ, ತಿಪ್ಪಣ್ಣ ಕರಡಕಲ್,ಮೋಹನ ಗೋಸ್ಲೆ, ಉಮೇಶ ಹುನುಕುಂಟಿ, ಅಂಜನೇಯ ಭಂಡಾರಿ, ನಾಗಪ್ಪ ಈಚನಾಳ, ಬಸವರಾಜ, ವಿಜಯ ಪೋಳ್ ಸೇರಿದಂತೆ ಅನೇಕರಿದ್ದರು.