suddiduniya.com

Raichur University : ರಾಯಚೂರು ವಿವಿ ಆಡಳಿತ ವಿರುದ್ಧ ಆರೋಪ ಸರಿಯಲ್ಲ

Raichur University

ಲಿಂಗಸುಗೂರು : ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಗಾಗಿ ರಾಯಚೂರು ವಿಶ್ವ ವಿದ್ಯಾಲಯದ (Raichur University )ಕುಲಸಚಿವರ ತಂಡ ಕೆಲವು ಕಾಲೇಜಿಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆ ಕಂಡು ಬಂದಿದ್ದರಿಂದ ನೋಟಿಸ್ ನೀಡಲಾಗಿದೆ ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿಶ್ವ ವಿದ್ಯಾಲಯದ ಆಡಳಿತದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಪಟ್ಟಣದ ವೀರಶೈವ ವಿದ್ಯಾವರ್ದಕ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಯಚೂರು ವಿಶ್ವ ವಿದ್ಯಾಲಯ (Raichur University) ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹಂತ ಹಂತವಾಗಿ ಗುಣಮಟ್ಟದ ಶಿಕ್ಷಣ ನೀಡುವ ಹಿನ್ನಲೆಯಲ್ಲಿ ವಿಶ್ವ ವಿದ್ಯಾಲಯವು ಬೆಳಯಬೇಕಾಗಿದೆ. ಈ ಹಂತದಲ್ಲಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಕಾಲೇಜು ಆಡಳಿತ ಮಂಡಳಿಗಳು ಕಚ್ಚಾಡುತ್ತಿರುವುದು ವಿಷಾದನೀಯ ಎಂದರು.

ರಾಯಚೂರು ವಿಶ್ವ ವಿದ್ಯಾಲಯಗಳ ವ್ಯಾಪ್ತಿಯಲ್ಲಿ (Raichur University)  ರಾಯಚೂರು ಮತ್ತು ಯಾದಗಿರ ಜಿಲ್ಲೆಗಳ 194 ಕಾಲೇಜುಗಳಿವೆ. ಇತ್ತೀಚಿಗೆ ವಿಶ್ವ ವಿದ್ಯಾಲಯದ ಕುಲಸಚಿವರು ಹಾಗೂ ಅವರ ತಂಡ ಎರಡು ಜಿಲ್ಲೆಗಳ ಕೆಲವು ಕಾಲೇಜುಗಳಿಗೆ ಆಕಸ್ಮಿಕ ಬೇಟಿ ನೀಡಿದಾಗ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರು ಇಲ್ಲದಿರುವುದು, ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಹಾಜರಾತಿ ಪುಸ್ತಕಗಳೇ ಇಲ್ಲದಿರುವುದು ಸೇರಿದಂತೆ ಇನ್ನೂ ಅವ್ಯವಸ್ಥೆಗಳು ಕಂಡಿದ್ದರಿಂದ ಈ ಬಗ್ಗೆ ಕಾಲೇಜುಗಳಿಗೆ ನೋಟಿಸ್ ನೀಡಿದ್ದಾರೆ. ಆದರೆ ನೋಟಿಸ್‍ ನೀಡಿದ್ದಕ್ಕೆ ಶಿಕ್ಷಣ ಆಡಳಿತ ಮಂಡಳಿಯವರು ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹೇರುತ್ತಿರುವುದು ಸರಿಯಾದ ಕ್ರಮವಲ್ಲ, ನೋಟಿಸ್ ನೀಡಿರುವುದರಿಂದ ಕಾಲೇಜು ಆಡಳಿತ ಮಂಡಳಿಯವರು ತಮ್ಮ ಸಂಸ್ಥೆಯಲ್ಲಿ ನ್ಯೂನತೆಗೆಗಳನ್ನು ಸರಿಪಡಿಸಿಕೊಳ್ಳಬೇಕೇ ವಿವಿ ಆಡಳಿತದ ಆರೋಪ ಮಾಡುವುದು ಸರಿಯಲ್ಲ ಎಂದರು.

ಕಾಲೇಜುಗಳಿಗೆ ದಿಡೀರ್ ಬೇಟಿ ನೀಡಿ ನೋಟಿಸ್ ನೀಡಿದ್ದರಿಂದ ಕೆಲವು ಕಾಲೇಜು ಆಡಳಿತ ಮಂಡಳಿಗಳು (Raichur University ) ವಿಶ್ವವಿದ್ಯಾಲಯದ ಕುಲಸಚಿವರ ವಿರುದ್ಧ ಬಹಿರಂಗ ಆರೋಪ ಮಾಡಿದ್ದು, ವಿಶ್ವವಿದ್ಯಾಲಯದ ಆಡಳಿತವು ಕಾಲೇಜು ಆಡಳಿತ ಮಂಡಿಗಳ ಕಾರ್ಯವೈಖರಿಯನ್ನು ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ. ಇವೆಲ್ಲ ಸರಿಯಾದ ಕ್ರಮವಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳ ಜೊತೆಗೆ ಕಾಲೇಜು ಆಡಳಿತ ಮಂಡಳಿ ಚರ್ಚೆ ಮಾಡುವದರ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೇ ವಿನಾಃ ಬಹಿರಂಗವಾಗಿ ಕಚ್ಚಾಟ ಸರಿಯಲ್ಲ ಎಂದರು.

ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ನ್ಯೂನತೆಗಳು ಇಲ್ಲಾ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳು ಅವ್ಯವಸ್ಥೆ ಆಗರವಾಗಿದೆ. ಶೈಕ್ಷಣಿಕ ವೇಳಾಪಟ್ಟಿಯಂತೆ ಚಟುವಟಿಕೆ ನಡೆಸಬೇಕು. ಪರೀಕ್ಷೆ ಫಲಿತಾಂಶ ಸರಿಯಾದ ಸಮಯಕ್ಕೆ ಪ್ರಕಟಿಸಬೇಕು. ಎರಡು ವರ್ಷವಾದರೂ ಅಂಕಪಟ್ಟಿಗಳೇ ನೀಡುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಥೆಯ ಕಾಲೇಜಿನ 140 ವಿದ್ಯಾರ್ಥಿಗಳ ಅಂಕಪಟ್ಟಿಗಳೇ ಬಂದಿಲ್ಲ ನಾನೇ ಸ್ವತಃ ವಿವಿ ಕುಲಪತಿಗಳಿಗೆ ಮಾತನಾಡಿದ್ದೇನೆ. ಮೌಲ್ಯಮಾಪನಗಳಲ್ಲಿ ನ್ಯೂನತೆಗಳಿವೆ ಇಂತಹ ಅನೇಕ ನ್ಯೂನತೆಗಳು ವಿಶ್ವ ವಿದ್ಯಾಲಯದಲ್ಲಿವೆ ಅವುಗಳನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ವಿವಿ ಆಡಳಿತ ಮಂಡಳಿ ಮಾಡಬೇಕು ಎಂದರು.

ಶೈಕ್ಷಣಿಕವಾಗಿ ಹಿಂದುಳಿದಿರುವ ರಾಯಚೂರು ಹಾಗೂ ಯಾದಗಿರ ಜಿಲ್ಲೆಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾವಣೆ ತರುವ ನಿಟ್ಟಿನಲ್ಲಿ ರಾಯಚೂರು ವಿಶ್ವ ವಿದ್ಯಾಲಯದ ಉಪ ಕುಲಪತಿಗಳು, ಕುಲಸಚಿವರು, ಹಾಗೂ ವಿವಿ ಉನ್ನತ ಅಧಿಕಾರಿಗಳ ತಂಡ ಪ್ರತಿ ವರ್ಷ 194 ಕಾಲೇಜುಗಳಿಗೆ ಆಗಾಗ ಬೇಟಿ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಮನವರಿಕೆ ಮಾಡಿಕೊಡಬೇಕು. ಕಾಲೇಜುಗಳಲ್ಲಿ ನ್ಯೂನತೆಗಳು ಇದ್ದರೆ ಅದನ್ನು ತಿದ್ದಿಕೊಂಡು ಗುಣಮಟ್ಟದ ಶಿಕ್ಷಣ ವ್ಯವಸ್ಥೆಗಾಗಿ  ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿವಿಗೆ ಸಹಕಾರ ನೀಡಬೇಕು ಎಂದರು.

ರಾಯಚೂರು ವಿಶ್ವ ವಿದ್ಯಾಲಯದಲ್ಲಿ (Raichur University ) ಸುಮಾರು 85 ಹುದ್ದೆಗಳು ಖಾಲಿ ಇವೆ, ಇರುವ ಹುದ್ದೆಗಳನ್ನೇ ಇಟ್ಟುಕೊಂಡು ಕೆಲಸ ಹೇಗೆ ಮಾಡಬೇಕು. ಉನ್ನತ ಶಿಕ್ಷಣ ಸಚಿವರು ಕೂಡಲೇ ಪೂರ್ಣಪ್ರಮಾಣದ ಹುದ್ದೆಗಳನ್ನು ಮಂಜೂರು ಮಾಡಿ ಎರಡು ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು. ಎರಡು ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ರಾಯಚೂರು ವಿವಿ ಅಭಿವೃದ್ಧಿಗೆ ಸರಕಾರದಿಂದ ಹೆಚ್ಚುವರಿ ಅನುದಾನ ಕೊಡಿಸಲು ಪ್ರಯತ್ನಿಸಬೇಕು ಎಂದರು.

ರಾಯಚೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿರುವ ನಡೆಯುತ್ತಿರುವ ಈ ಗೊಂದಲ ಸರಿಪಡಿಸಿಲು ಸರಕಾರದ ಒಂದು ಉನ್ನತ ಮಟ್ಟದ ಸಮಿತಿ ರಚಿಸಿ ಸದರಿ ಕಾಲೇಜುಗಳನ್ನು ಪರಿಶೀಲನೆ ಮಾಡುವುದರ ಮೂಲಕ ಸುಸೂತ್ರವಾಗಿ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು ನಡೆಯುವಂತೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!