suddiduniya.com

Rajyotsava :ಗಡಿನಾಡಿನಲ್ಲಿ ಕನ್ನಡ ಭಾಷೆ ಉಳುವಿಗೆ ಕಠಿಣ ಕಾನೂನು ಅಗತ್ಯ

Rajyotsava

ಲಿಂಗಸುಗೂರು : ರಾಜ್ಯದ ಗಡಿಭಾಗಗಳಲ್ಲಿ ಅನ್ಯಭಾಷಿಕರ ಹಾವಳಿಗೆ ಕನ್ನಡ ಭಾಷೆ ಅಳುವಿನಂಚಿನಲ್ಲಿದೆ, ಕನ್ನಡ ಉಳುವಿಗಾಗಿ ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣದ) ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್ ಒತ್ತಾಯಿಸಿದ್ದಾರೆ.

Rajyotsava

ಪಟ್ಟಣದ ಪ್ರವಾಸಿಮಂದಿರದಲ್ಲಿ ಕರವೇ ತಾಲೂಕು ಘಟಕ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಅಂಗವಾಗಿ ಸರಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ, ಎಂಟು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಭಾಷೆ ಇಂದು ಉಳುಸಿ ಬೆಳೆಸಿ ಎಂದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ನಮ್ಮೆಲ್ಲರ ದುರಂತವಾಗಿದೆ. ಕನ್ನಡ ಭಾಷೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕನ್ನಡಿಗರ ಕರ್ತವ್ಯವಾಗಿದೆ ವಿನಾಃ ಅನ್ಯಭಾಷಿಕರದಲ್ಲ ಇದು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡುವ ಕೆಲಸವಾಗಬೇಕಾಗಿದೆ. ಕನ್ನಡ ಭಾಷೆ, ನೆಲಕ್ಕೆ ದಕ್ಕೆ ಬಂದಾಗ ಕೂಡಲೇ ಹೋರಾಟ ನಡೆಸುವಲ್ಲಿ ಕರವೇ ಸಂಘಟನೆ ಮುಂದಾಗಿದೆ. ಅನ್ಯಭಾಷೆಯಲ್ಲಿ ನಾಮಫಲಕವನ್ನು ತೆರವುಗೊಳಿಸಿ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಿಸುವಲ್ಲಿ ಕರವೇ ಹೋರಾಟ ನಡೆಸಿದೆ ಎಂದರು.

Rajyotsava

ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಅಮರೇಶ ವೆಂಕಟಾಪುರ, ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಹಿಂದಿ, ಇಂಗ್ಲೀಷ್ ಜತೆಗೆ ಕನ್ನಡ ನಾಮಫಲಕವೂ ಹಾಕುವಂತಾಗಬೇಕು. ಕನ್ನಡ ಭಾಷೆಯಲ್ಲ ಪ್ರತಿಯೊಬ್ಬ ಕನ್ನಡಿಗರ ಅಸ್ಮೀತೆಯಾಗಿದೆ. ಕನ್ನಡ ನಾಡಿನಲ್ಲಿ ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಸಲ್ಲದು. ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆಯಾದಾಗ ಕನ್ನಡ ಪರ ಸಂಘಟನೆಗಳ ಹೋರಾಟದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಬ್ರಿಟೀಷರ ಆಳ್ವಿಕೆಯಲ್ಲಿ ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದು ಗೂಡಿಸುವಲ್ಲಿ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಹೋರಾಟಗಾರರ ಪರಿಶ್ರಮವಿದೆ.

Rajyotsava

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಬಿಜೆಪಿ ತಾಲೂಕು ಅಧ್ಯಕ್ಷ ಅಯ್ಯಪ್ಪ ವಕೀಲ, ಸಿಪಿಐ ಪುಂಡಲೀಕ ಪಟಾತ್ತಾರ್, ಲಕ್ಷ್ಮೀದೇವಿ ಹೂಲಗೇರಿ, ಕರವೇ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ, ಉಪಾಧ್ಯಕ್ಷ ಬಸವರಾಜ ಪೇರಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಮುತ್ತಣ್ಣ ಗುಡಿಹಾಳ, ವಿನಯ ಕುಮಾರ, ರಾಜಶೇಖರ ಪೇರಿ, ರಾಜೇಶ ಮಾಣಿಕ್, ಅಮರೇಶ ನಾಯಕ, ಶಿವಪ್ಪ ನಾಯಕ ಸೇರಿದಂತೆ ಇತರರು ಇದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!