suddiduniya.com

Rajyotsava Award  :ಅರ್ಹರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲು ಜಿಲ್ಲಾಡಳಿತ ಮುಂದಾಗಲಿ

ಲಿಂಗಸುಗೂರು : ರಾಯಚೂರು ಜಿಲ್ಲೆಯಲ್ಲಿ (Rajyotsava Award )ರಾಜ್ಯೋತ್ಸವ ಪ್ರಶಸ್ತಿ ನೀಡುವುದನ್ನು ನಿಲ್ಲಿಸಿರುವುದು ಬಹಳ ಖೇದಕರ.ಈ ವರ್ಷದಿಂದಾದರೂ ಜಿಲ್ಲಾಮಟ್ಟದ (Rajyotsava Award )ರಾಜ್ಯೋತ್ಸವ ಪ್ರಶಸ್ತಿ ನೀಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ದಲಿತ ಸಾಹಿತ್ಯ ಪರಿಷತ್‍  ತಾಲೂಕಾಧ್ಯಕ್ಷ ಅಮರೇಶ ವೆಂಕಟಾಪುರ ಒತ್ತಾಯಿಸಿದ್ದಾರೆ.

Rajyotsava Award

ಪ್ರತಿವರ್ಷ ನವೆಂಬರ್ ಒಂದರ ಕರ್ನಾಟಕ ರಾಜ್ಯೋತ್ಸವ ದಿನದಂದು ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರ್ಹರಿಗೆ (Rajyotsava Award )ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿರುವುದು ವಾಡಿಕೆ ಆದರೆ 2017 ರಿಂದ ರಾಯಚೂರು ಜಿಲ್ಲಾ ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವುದನ್ನು ನಿಲ್ಲಿಸಿದೆ. ಜಿಲ್ಲಾಡಳಿತವು ಈ ಕೂಡಲೇ ತಾತ್ಸಾರ ಭಾವನೆಯನ್ನು ಬದಿಗಿಟ್ಟು ಸಾಹಿತ್ಯ, ಸಾಂಸ್ಕೃತಿಕ, ಸಾಧಕರ ವಲಯ ಎದ್ದು ಪ್ರತಿಭಟಿಸುವುದರೊಳಗೆ ಮೊದಲಿನಂತೆ ( Rajyotsava Award )ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಾಧಕರಿಗೆ ನೀಡಿ ಪುರಸ್ಕರಿಸುವುದನ್ನು ಅಧಿಕೃತವಾಗಿ ಘೋಷಿಸಲಿ ಇಲ್ಲದಿದ್ದರೆ ಈ ವಿಷಯದಲ್ಲಿ ಸೂತಕ ಅಂಟಿಕೊಂಡು ಏಳು ವರ್ಷಗಳಿಂದ ಸಾಗುತ್ತಿರುವ ಜಿಲ್ಲಾಡಳಿತಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಸಜ್ಜಾಗಬೇಕಾಗುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ ಲಿಂಗಸೂಗೂರು ತಾಲೂಕು ಅಧ್ಯಕ್ಷರಾದ ಅಮರೇಶ ವೆಂಕಟಾಪೂರು ಎಚ್ಚರಿಕೆ ನೀಡಿದರು.

ಸಾಧಕರಿಗೆ ಸಿಗಲಿ ರಾಜ್ಯೋತ್ಸವ ಪ್ರಶಸ್ತಿ :

ಅದಾಗ್ಯೂ ಹೋದವರ್ಷ ಅಂದರೆ 2023 ರಲ್ಲಿ ಅನೇಕರ ಒತ್ತಾಯದ ನಡುವೆಯೂ ವಿರೋಧವಿದ್ದರೂ ರಾಜ್ಯೋತ್ಸವ ಪ್ರಶಸ್ತಿ ನೀಡದೇ ಸಮಾಧಾನಕರ ಬಹುಮಾನದಂತಹ ಎಡೆದೊರೆ ನಾಡು ಪುರಸ್ಕಾರ ನೀಡಲು ಯಾವ ಸಮಿತಿ ಹೇಳಿದೆ. ನಮಗೆ ಬಂದ ಮಾಹಿತಿಯಂತೆ; ಜಿಲ್ಲೆಯ ಯಾರೊಬ್ಬರು ಕೂಡ ಇದು ಬೇಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೇ ನೀಡಬೇಕೆಂದು ಒತ್ತಾಯಪಡಿಸಿದರೂ ಕೂಡ ಪರಿಗಣನೆಗೆ ತೆಗೆದುಕೊಳ್ಳದೇ ಮುಂದುವರೆಸಿದ್ದೀರಿ. ಅದನ್ನು ಪರ್ಯಾಯವಾಗಿ ಬೇರೆಯ ದಿನ ಅಂದರೆ ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ದಿನದಂದು ಇನ್ನೂ ಮುಂದೆ ಜಿಲ್ಲಾಡಳಿತವು ಎಡೆದೊರೆ ನಾಡು ಪುರಸ್ಕಾರವನ್ನು ಒಬ್ಬರು ಅಥವಾ ಇಬ್ಬರು ಹಿರಿಯ ಜಿಲ್ಲಾ ಸಾಧಕರಿಗೆ ನೀಡುವ ಪರಿಪಾಠವನ್ನು ಅಳವಡಿಸಿಕೊಳ್ಳಲಿ. ಅಧಿಕಾರಿಗಳೇ ಕುಳಿತು ಪ್ರಶಸ್ತಿ ಆಯ್ಕೆ ಮಾಡುವುದರಿಂದ ಪ್ರಶಸ್ತಿಯ ಘನತೆ, ಗೌರವದ ಮಹತ್ವ ಕಳೆದುಕೊಳ್ಳುವ ಸಂಭವವೂ ಹೆಚ್ಚು. ಹಾಗಾಗಿ ಅಂತಃಪ್ರಜ್ಞೆಯ ಆಸ್ಥೆಯಿಂದ ಜಿಲ್ಲೆಯ ನಾನಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಲಿ ಎಂದರು.

ನಮ್ಮ ಜಿಲ್ಲೆಯಲ್ಲೇನೂ ಸಾಧಕರ ಕೊರತೆ ಇಲ್ಲ. ಅಂತಹ ಪಟ್ಟಿ ಜಿಲ್ಲಾಡಳಿತದಲ್ಲಿ ಇರದಿದ್ದರೆ ಹೇಳಲಿ ದಸಾಪ ಒದಗಿಸಲು ಸಿದ್ಧ. ಕನಿಷ್ಠ ಅಲೆಮಾರಿ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಯಶಸ್ವಿ ಸಾಧಕರಿಗಾದರೂ ಇಂತಹ ಪ್ರಶಸ್ತಿಗಳು ಸಿಗಲಿ. ನಿಲ್ಲಿಸಿದರೆ ಅವರಿಗೆ ಇಂತಹ ಗೌರವ ಸಿಗುವುದಾದರೂ ಯಾವಾಗ ಎಂದು ಪ್ರಶ್ನಿಸಿದರು. ಹಾಗೆಯೇ ಪ್ರಶಸ್ತಿಯೇ ಬೇರೆ, ಪುರಸ್ಕಾರವೇ ಬೇರೆ ಎಂದು ಅಧಿಕಾರಿಗಳಿಗೆ ತಿಳಿಯದ ಸಂಗತಿಯೇನೂ ಅಲ್ಲ. ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಪುನಃ ಆರಂಭಿಸಬೇಕು. ಒಂದು ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ( Rajyotsava Award )ಮರುಜೀವ ಬರಲಿಲ್ಲವೆಂದರೆ ಜಿಲ್ಲೆಯ ಕಲೆ, ಸಂಸ್ಕೃತಿಯ ಮಹತ್ವವೇ ಗೊತ್ತಿಲ್ಲದ ನಾಮಕಾವಸ್ಥೆ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕುಳಿತಿದ್ದಾರೆಂದು ಅವರು ತೊಲಗುವವರೆಗೂ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಅಮರೇಶ ವೆಂಕಟಾಪೂರು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ಜಿಲ್ಲಾಧಿಕಾರಿ‌ನಿತೀಶ್ ಕೆ. ದಿಢೀರ್ ಭೇಟಿ: ಪರಿಶೀಲನೆ

ರಾಯಚೂರು : ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಜಿಲ್ಲಾಧಿಕಾರಿ ನಿತೀಶ್ ಕೆ., ಅವರು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು–ಕೊರತೆಗಳ ಬಗ್ಗೆ ಪರಿಶೀಲಿಸಿದರು.

ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಿ ಕುರಿತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ವಾರ್ಡ್‌ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು. ಔಷಧ ಉಗ್ರಾಣ ಪರಿಶೀಲಿಸಿ, ಔಷಧಗಳನ್ನು ರೋಗಿಗಳಿಗೆ ಸಮರ್ಪಕವಾಗಿ ವಿತರಣೆ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ರಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ್, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಿರಿಯ ವೈದ್ಯರು ಸೇರಿದಂತೆ ಆಡಳಿತ ಮಂಡಳಿಯವರು ಇದ್ದರು.

ಕಸ್ತೂರಿಬಾ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹ :

ಲಿಂಗಸುಗೂರು : ತಾಲೂಕಿನ ಬಯ್ಯಾಪೂರು ಗ್ರಾಮದ ಕಸ್ತೂರಿಬಾ (ಬಾಲಕೀಯರ) ವಸತಿ ನಿಲಯ ಕಟ್ಟಡ ದುರಸ್ಥಿ ಮಾಡಲಾಗುತ್ತಿದೆ, ಆದರೆ ವಿದ್ಯಾರ್ಥಿನಿಯರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಕಟ್ಟಡ ಛತ್ತ ತೆಗೆಯುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮಕೈಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಗುತ್ತಿಗೆದಾರರ ಅನುಕೂಲಕ್ಕಾಗಿ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ತಾಲೂಕಿನ ಬಯ್ಯಾಪೂರು ಗ್ರಾಮದಲ್ಲಿರುವ ಕಸ್ತೂರಿಬಾ (ಬಾಲಕೀಯರ) ವಸತಿ ನಿಲಯವನ್ನು ನವೀಕರಣ ನೆಪದಲ್ಲಿ ಕಟ್ಟಡದ ಛತ್ತು ತೆರವುಗೊಳಿಸಿರುವುದನ್ನು ತೀವ್ರವಾಗಿ ಖಂಡಿಸುತ್ತದೆ. ವಿದ್ಯಾಭ್ಯಾಸದ ಸಮಯದಲ್ಲಿ ಬಾಲಕೀಯರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೇ ಏಕಾಏಕಿ ಕಟ್ಟಡದ ಛತ್ತನ್ನು ತೆರವುಗೊಳಿಸಿದೆ. ಇದರಿಂದಾಗಿ ಬಡ ವಿದ್ಯಾರ್ಥಿನಿಯರು ಎಲ್ಲಿ ವಾಸ ಮಾಡಬೇಕು ಬಾಲಕೀಯರ ಶೌಚಾಲಯ ಹಾಗೂ ಸ್ನಾನದ ಎಲ್ಲಿ ಮಾಡಬೇಕು. ವಿದ್ಯಾರ್ಥಿನಿಯರು ಊಟ ಎಲ್ಲಿ ಮಾಡಬೇಕು. ತರಾತುರಿಯಲ್ಲಿ ವಸತಿ ನಿಲಯದ ಕಟ್ಟಡದ ಛತ್ತು ತೆರವುಗೊಳಿಸಿರುವ ಉದ್ದೇಶವಾದರು ಏನು ಎಂಬುವುದು ತಿಳಿಯದಾಗಿದೆ.

ಬಡ ವಿದ್ಯಾರ್ಥಿನೀಯರು ವಿದ್ಯಾಭ್ಯಾಸ ಮಾಡುವುದಾದರು ಹೇಗೆ, ಕಾರಣ ತಕ್ಷಣವೇ ಬಯ್ಯಾಪೂರು ಗ್ರಾಮದ ಕಸ್ತೂರಿಬಾ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಹೋದರೆ ಜಿಲ್ಲಾ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡೆದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಜಾಗಿರನಂದಿಹಾಳ, ತಾಲೂಕಾಧ್ಯಕ್ಷ ದುರ್ಗಾ ಪ್ರಸಾದ, ಮುಖಂಡ ಅಮರೇಶ ಮೇಟಿ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!