ಕೊನೆಭಾಗದ ರೈತರ ಒತ್ತಾಯ
ಲಿಂಗಸುಗೂರು : ರಾಂಪೂರು ಏತ ನೀರಾವರಿ ( Rampur Project )ಯೋಜನೆಯ ಕೊನೆಭಾಗಕ್ಕೆ ನೀರು ಹರಿಯುತ್ತಿಲ್ಲ ಇದರಿಂದ ಬೆಳೆಗಳು ಒಣುಗುತ್ತಿದ್ದು ಕೂಡಲೇ ಕಾಲುವೆಗೆ ನೀರು ಹರಿಸುವಂತೆ ರೈತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ರಾಂಪೂರು ಏತ ನೀರಾವರಿ ಯೋಜನೆ ಕೊನೆ ಭಾಗಕ್ಕೆ ನೀರಿನ ಕೊರತೆಯಾಗುತ್ತಿದ್ದರಿಂದ ಕೊನೆ ಭಾಗದ ರೈತರು ಆತಂಕ ಪಡುವಂತಾಗಿದೆ. ಲಿಂಗಸುಗೂರು ಪಟ್ಟಣದ ಮುಖಾಂತರ ಹಾದು ಹೋಗಿರುವ ರಾಂಪುರ ಕಾಲುವೆಗೆ ನೀರು ಹರಿಸಬೇಕಾಗಿದೆ. ರಾಂಪೂರು ಏತ ನೀರಾವರಿ ಯೋಜನೆ ಕಾಲುವೆಯಿಂದ ಬಯ್ಯಾಪುರ ಭಾಗದ ಕಡೆಗೆ ನಿರಂತರವಾಗಿ ನೀರು ಹರಿಸಲಾಗುತ್ತಿದ್ದರಿಂದ ಇತ್ತ ಕೊನೆ ಭಾಗದ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ ಇದರಿಂದ ರೈತರು ತೊಂದರೆಗೆ ಸಿಲುಕುವಂತಾಗಿದೆ.
ನೀರಿಲ್ಲದೆ ಒಣಗುತ್ತಿವೆ ಬೆಳೆಗಳು :
ಕಾಲುವೆಯ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯದೇ ಇರುವದರಿಂದ ಕಾಲುವೆ ನೀರನ್ನೇ ನೆಚ್ಚಿಕೊಂಡೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಮಾಡಿದ ಮೆಣಸಿನಕಾಯಿ, ಹತ್ತಿ, ತೊಗತಿ ಸೇರಿ ಇನ್ನಿತರ ಬೆಳೆಗಳು ನೀರಿಲ್ಲದೆ ಬಾಡುತ್ತಿದೆ, ಇದರಿಂದ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆಯಲಾಗಿದ್ದ ಬೆಳೆಗಳು ಒಣಗುತ್ತಿದ್ದರಿಂದ ರೈತರನ್ನು ಚಿಂತೆಗೀಡು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದರು.
ವಾರದಲ್ಲಿ ನಾಲ್ಕು ದಿನ ನೀರು ಹರಿಸಿ :
ಬೆಳೆಗಳು ಒಣಗುತ್ತಿದ್ದರಿಂದ ರೈತರು ತೊಂದರೆಗೆ ಸಿಲುಕಿದ್ದರಿಂದ ಬೆಳೆಗಳ ಉಳಿವಿಗಾಗಿ ವಾರದಲ್ಲಿ ನಾಲ್ಕು ದಿನ ಕೊನೆ ಭಾಗಕ್ಕೆ ನೀರು ಹರಿಸಬೇಕು, ಈ ಬಗ್ಗೆ ಪರಿಶೀಲನೆ ರಾಂಪೂರು ಏತ ನೀರಾವರಿ ಕೊನೆ ಭಾಗದ ರೈತರಿಗೆ ನೀರು ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ರೈತರಾದ ಗದ್ದೆಪ್ಪ, ಮಲ್ಲಯ್ಯ, ಈರಪ್ಪ, ಯೋಗಪ್ಪ, ಹೀರಾರೆಡ್ಡಿ, ನಿಂಗಪ್ಪ, ಪಂಪಾಪತಿ, ನಾಗರಾಜ, ಬಸಪ್ಪ, ಶರಣಪ್ಪ, ಶ್ರೀನಿವಾಸರಾವ್, ಹನುಮಗೌಡ, ಶಿವರಾಂ, ರಮೇಶ, ಆದಪ್ಪ, ಮಾಳಪ್ಪ, ದುರಗಪ್ಪ, ಶರಣಪ್ಪ ಯಲಗಲದಿನ್ನಿ, ಚೆನ್ನಪ್ಪ ಗುಡದನಾಳ, ನಿಂಗಪ್ಪ ಗುಡದನಾಳ ಸೇರಿದಂತೆ ಇನ್ನಿತರಿದ್ದರು.