suddiduniya.com

RDCC BANK Corruption :ಆರ್ ಡಿಸಿಸಿ ಬ್ಯಾಂಕ್‍ನಲ್ಲಿ ಹಗಲು ದರೋಡೆ..!

: RDCC BANK Corruption

ಲಿಂಗಸುಗೂರು :ರಾಯಚೂರು ಡಿಸಿಸಿ ಬ್ಯಾಂಕ್‍ನಲ್ಲಿ ಹಗಲು ದರೋಡೆ ನಡೆದಿದೆ,( RDCC BANK Corruption )232 ಕೋಟಿ ಅವ್ಯವಹಾರ ಆಗಿದ್ದು, ಕೂಡಲೇ ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಒತ್ತಾಯಿಸಿದ್ದಾರೆ.

RDCC BANK Corruption

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಇದು ರೈತರ ಬ್ಯಾಂಕ್ ಆಗಿದೆ. ರಾಯಚೂರು ಜಿಲ್ಲೆಯಲ್ಲಿ 39 ಸಹಕಾರಿ ಸಂಘಗಳಿವೆ. 520 ವ್ಯವಸಾಯ ಸೇವಾ ಸಂಘಗಳಿವೆ. ರಾಯಚೂರು-ಕೊಪ್ಪಳ ಜಿಲ್ಲೆಗಳ ನಡುವೆ 1 ಲಕ್ಷದ 14 ಸಾವಿರ ಗ್ರಾಹಕರಿದ್ದಾರೆ. ಈ 1.14 ಲಕ್ಷ ಖಾತೆಗಳಿಗೆ ಕನ್ನ ಹಾಕಲಾಗಿದೆ.

ಬ್ಯಾಂಕ್ ನ ಮುಖ್ಯ ಖಾತೆಯಿಂದ ರೈತರ ಖಾತೆಗಳಿಗೆ ಒಂದು ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿವರಿಗೆ ಹಣ ಜಮಾ ಮಾಡಿ ಮತ್ತು ಹಣ ಡ್ರಾ ಮಾಡಿಕೊಳ್ಳಲಾಗಿದೆ, ಹಣ ಜಮಾ ಮತ್ತು ಡ್ರಾ ಮಾಡಿರುವ ಬಗ್ಗೆ ರೈತರಿಗೆ ಯಾವುದೇ ಮಾಹಿತಿಯೇ ಇಲ್ಲದಾಗಿದೆ, ಇದು ರೈತರಿಗೆ ಮಾಡಿದ ವಂಚನೆಯಾಗಿದೆ. ಮೇಲಾಗಿ ಸಾಲಕ್ಕೆ ಅರ್ಜಿ ಹಾಕದ ಮತ್ತು ಸಾಲವೇ ತೆಗೆದುಕೊಳ್ಳದ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‍ನೋಟಿಸ್‍ನೀಡಿ ರೈತರ ಹೊಲ ಹಾಗೂ ಮನೆ ಆಸ್ತಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

: RDCC BANK Corruption

2017,2018, 2019, 2020,2021ರಲ್ಲಿ ರೈತರ ಬ್ಯಾಂಕ್ ಖಾತೆಗೆ ಆಕ್ರಮವಾಗಿ ಹಣ ಜಮಾ ಮತ್ತು ವಿತ್ ಡ್ರಾ ಮಾಡಿದ್ದು ಒಟ್ಟು 232 ಕೋಟಿ ರೂಪಾಯಿ ಇದಕ್ಕೆ ಪೂರಕ ಸಾಕ್ಷಿ ನಮ್ಮಲ್ಲಿದೆ. ( RDCC BANK Corruption )2024 ಸೆಪ್ಟೆಂಬರ ತಿಂಗಳಲ್ಲಿ ರೈತರಿಗೆ ನೋಟಿಸ್ ನೀಡಿದಾಗಲೇ ರೈತರಿಗೆ ಗೊತ್ತಾಗಿದ್ದು, ಅಲ್ಲಿವರಿಗೂ ರೈತರ ಖಾತೆಯಲ್ಲಿ ಈ ರೀತಿಯಾಗಿ ಹಣ ವ್ಯವಹಾರ ನಡೆದಿರುವುದು ರೈತರ ಅರಿವಿಗೆ ಬಂದಿರಲಿಲ್ಲ, ನೋಟಿಸ್‍ನೋಡಿ ಆತಂಕಗೊಂಡ ರೈತರು ನಾವು ಆರ್‍ಡಿಸಿಸಿ ಬ್ಯಾಂಕ್ ನಿಂದ ಒಂದು ರೂಪಾಯಿಯೂ ಸಾಲವೇ ಪಡೆದಿಲ್ಲ, ಸಾಲಕ್ಕೆ ಅರ್ಜಿ ಕೂಡಾ ಹಾಕಿಲ್ಲ, ಮೇಲಾಗಿ 8 ಲಕ್ಷ, 10 ಲಕ್ಷ ಸಾಲ ಇದೆ ಮರುಪಾವತಿ ಮಾಡುವಂತೆ ನೋಟಿಸ್ ನೀಡಿದ್ದರಿಂದ ರೈತರಾದ ಶರಣಬಸವ ತಂದೆ ಬಸವರಾಜ, ಬಸವರಾಜ್ ತಂದೆ ಸಂಗಪ್ಪ, ರೈತ ಲಾಲ್ ಸಾಬ್ ತಂದೆ ಇಮಾಮ್ ಸಾಬ್ ಹಾಗೂ ರೈತ ಶರಣಪ್ಪ ತಂದೆ ಅಮರಪ್ಪ ಇವರು ನೀಡಿದ ದೂರು ನೀಡಿದ ರೈತರು. ಶರಣಪ್ಪ ತಂದೆ ಅಮರಪ್ಪ ಕುರುಬರ ಎಂಬ ರೈತರು ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ವಿರುದ್ದ ದೂರು ನೀಡಿದ್ದಾರೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ( RDCC BANK Corruption )ರೈತರ ಖಾತೆಗೆ ಹಣ ಹಾಕಿ ನಂತರ ಅದನ್ನು ಖಾತೆಯಿಂದ ತೆಗೆಯುವ ಮೂಲಕ ರೈತರಿಗೆ ಸಾಲ ನೀಡಿದೇ ಎಂದು ತೋರಿಸಿ ಇದೀಗ ಸುಲಿಗೆ ಮಾಡುತ್ತಿದ್ದು, ಎಂಡಿ, ನಿರ್ದೇಶಕರಿಂದ ಕ್ಯಾಶಿಯರ್ ವರಿಗೆ ಒಂದು ಗ್ಯಾಂಗ್ ನಿಂದ ಈ ರೀತಿಯಾಗಿ ಆಕ್ರಮವಾಗಿ ಹಣದ ವ್ಯವಹಾರ ನಡೆದಿದೆ.( RDCC BANK Corruption )ಈ ಬಗ್ಗೆ ಸಮಗ್ರ ಸಾಕ್ಷಿ ಸಮೇತ ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪಕರು ಸೇರಿ 14 ಜನರು ವಿರುದ್ದ ಮುದಗಲ್ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಮತ್ತು ಲಿಂಗಸೂಗುರು ಪೋಲಿಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಒಟ್ಟು ಐದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಆಡಳಿತ ಮಂಡಳಿ ನಿರ್ದೇಶಕರು, ಸಹಾಯಕ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನೂರಾಡು ಕೋಟಿಗೂ ಹೆಚ್ಚು ಸಹಕಾರಿ ಇಲಾಖೆಯ ಸಬ್ಸಿಡಿ ಅನುದಾನ ಕೊಳ್ಳೆ ಹೊಡೆದ ಸಾಧ್ಯತೆ ಇದ್ದು, ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ರಿಜಿಸ್ಟರ್ ಮತ್ತು ಪ್ರಧಾನ ಕಾರ್ಯದರ್ಶಿಯವರು ಕೂಡಲೇ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯನ್ನು ರದ್ದುಪಡಿಸುವ ಹಾಗೂ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸುವ ಕಾನೂನುಕ್ರಮ ಜರುಗಿಸಬೇಕು. (RDCC BANK Corruption)ಈ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಹೈಕೋರ್ಟ್ ನ್ಯಾಯಾಧೀಶರ ನೇತ್ರತ್ವದಲ್ಲಿ ತಂಡ ರಚಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ 1.14 ಲಕ್ಷ ಖಾತೆಗಳಿವೆ, ಖಾತೆ ಹೊಂದಿದ ರೈತರು ಹಾಗೂ ಗ್ರಾಹಕರು ಬ್ಯಾಂಕ್ ಖಾತೆಯ ವಹಿವಾಟನ್ನು ಚೆಕ್ ಮಾಡಿಕೊಳ್ಳಬೇಕು. ತಮ್ಮ ಖಾತೆಯಲ್ಲಿ ತಮಗೆ ತಿಳಿಯದಂತೆ ಜಮೆ ಹಾಗೂ ಖರ್ಚು ಆಗಿದ್ದರೆ ಕೂಡಲೇ ಬ್ಯಾಂಕ್ ಲಿಖಿತ ಸ್ಟೇಟ್‌ಮೆಂಟ್ ಪಡೆದು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು, ರೈತರು ಎಚ್ಚತ್ತಗೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಖಾಜಾಹುಸೇನ್ ಪೂಲವಾಲೆ ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!