suddiduniya.com

Recruitment : ಕಲ್ಯಾಣ ಕರ್ನಾಟಕ ಭಾಗಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಆಗ್ರಹ

Recruitment

ಲಿಂಗಸುಗೂರು : ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿಪಿಎಸ್‍ಟಿಆರ್ ) ಹಾಗೂ ಪ್ರೌಢಶಾಲಾ ಶಿಕ್ಷಕರ ( ಹೆಚ್‍ಎಸ್‍ಟಿಆರ್ ) (Recruitment )ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ  ರಮೇಶ ವೀರಾಪುರ ಒತ್ತಾಯಿಸಿದ್ದಾರೆ.

Recruitment

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ 5267 ಶಿಕ್ಷಕರ (Recruitment )ಹುದ್ದೆ ನೇಮಕಾತಿ ಮಾಡುತ್ತಿದ್ದು, ಇದನ್ನು ಹತ್ತು ಸಾವಿರಕ್ಕೆ ಏರಿಸಬೇಕು. 5200ರಲ್ಲಿ 4424 ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ5), ಇದರಲ್ಲಿ 78 ಪದವೀಧರ ಶಿಕ್ಷಕರ ಹುದ್ದೆ, 121 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದೆ. ಪದವೀಧರ, ಪ್ರಾಥಮಿಕ ಶಿಕ್ಷಕರ ಹುದ್ದೆಯನ್ನು 3000ಕ್ಕೆ ಏರಿಸಬೇಕು.

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹುದ್ದೆ ಹೆಚ್ಚಿಸಿ :

ಈ ಭಾಗದಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ಟಿಇಟಿ ಉತ್ತೀರ್ಣರಾಗಿ 3 ವರ್ಷಗಳು ಕಳೆದರೂ ಸರ್ಕಾರ ಕೇವಲ 78 ಪದವೀಧರ ಶಾಲಾ ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಇದರಲ್ಲಿ ವಿಷಯವಾರು ಹಂಚಿಕೆ ಮಾಡಿದರೆ ಒಂದು ವಿಷಯಕ್ಕೆ 10 ಶಿಕ್ಷಕ ಹುದ್ದೆಗಳು ಬರುತ್ತವೆ. ಶಿಕ್ಷಕರ ನೇಮಕಾತಿ 2022ರಲ್ಲಿ ನಡೆದಿದೆ. ಇಲ್ಲಿಯವರೆಗೂ (Recruitment )ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ಶೈಕ್ಷಣಿಕ ಪ್ರಗತಿ ಈ ಅಂಶ ಗಮನಿಸಿ ನೇಮಕಾತಿಯಲ್ಲಿ ಪದವೀಧರ ಶಾಲಾ ಶಿಕ್ಷಕರ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆ ಹೆಚ್ಚಿಸಬೇಕು.

ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಬಿ.ಎಡ್ ಕಾಲೇಜುಗಳು ಇಲ್ಲವಾಗಿವೆ. ಈ ಹಿನ್ನೆಲೆಯಲ್ಲಿ 48.000 ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಪೈಕಿ 22 ಸಾವಿರ ಅಂದರೆ ಶೇ.45.80ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಅರ್ಧದಷ್ಟು ಶಿಕ್ಷಕರನ್ನೂ( Recruitment )ನೇಮಕ ಮಾಡಿಕೊಂಡಿಲ್ಲ. 2024ರ ಶೈಕ್ಷಣಿಕ ಸಾಲಿನಲ್ಲಿ 25.000 ಶಾಲೆಗಳಲ್ಲಿ ಒಬ್ಬರಿಬ್ಬರು ಶಿಕ್ಷಕರಿದ್ದಾರೆ. ತಾವುಗಳು ಇದನ್ನೆಲ್ಲಾ ಪರಿಗಣಿಸಿ ಹೆಚ್ಚುವರಿಯಾಗಿ ಕನಿಷ್ಠ 10,000ಕ್ಕೂ ಅಧಿಕ ಶಿಕ್ಷಕರ ನೇಮಕ ಮಾಡಿಕೊಳ್ಳುವುದು ಅಗತ್ಯವಿದೆ. 

ನೇಮಕಾತಿ ಸಂಖ್ಯೆ ಹೆಚ್ಚಿಸಿ :

ಈಗಾಗಲೇ ಚರ್ಚೆಯಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿ, ದೈಹಿಕ ಶಿಕ್ಷಣಕರ ನೇಮಕಾತಿ(ವಿಶೇಷ ಕ್ಷೇತ್ರದ ಶಿಕ್ಷಕರ)ಯನ್ನು ಪರಿಗಣಿಸಿದಾಗ 5267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿರುವುದು ಸಂತೋಷದ ವಿಷಯವಾಗಿದೆ. ಆದರೆ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಪರಿಗಣಿಸಿದರೆ, ಈಗ ಕರೆದಿರುವ ಶಿಕ್ಷಕರ ಹುದ್ದೆಗಳ ಭರ್ತಿ ಸಾಕಾಗುವುದಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುವ ಅಂಶವಾಗಿದೆ ಹಾಗೂ ಹುದ್ದೆಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ 5 ಸಾವಿರ ಜಿಪಿಎಸ್‍ಟಿಆರ್ ಮತ್ತು ಹೆಚ್‍ಎಸ್‍ಟಿಆರ್  ಹುದ್ದೆಗಳನ್ನು ತುಂಬಿಕೊಳ್ಳುವ ಅಗತ್ಯವಿದೆ. ಹಾಗಾಗಿ ಸರ್ಕಾರ ಚರ್ಚೆಯಲ್ಲಿ ಇಟ್ಟಿರುವ 5,267 ಹುದ್ದೆಗಳ ಪೈಕಿ ಜಿಪಿಎಸ್‍ಟಿಆರ್ ನೇಮಕಾತಿ ಹುದ್ದೆಗಳನ್ನು ಇನ್ನೂ 5 ಸಾವಿರಕ್ಕೆ ಹೆಚ್ಚಿಸಿ ಒಟ್ಟು 10,267ಕ್ಕು ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಮುತುವರ್ಜಿ ವಹಿಸಬೇಕಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಪ್‌ಐ) ಕರ್ನಾಟಕ ರಾಜ್ಯ ಸಮಿತಿಗಳು ಜಂಟಿಯಾಗಿ ಒತ್ತಾಯಿಸಿವೆ.

ಬೇಡಿಕೆಗಳು :

10.000 ಅಧಿಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ನೀಮಕಾತಿಯನ್ನು ಹೆಚ್ಚಿಸಬೇಕು ಯಾಕೆಂದರೆ 2023ರಲ್ಲಿ ಬಿ.ಎಡ್ ಮತ್ತು ಟಿ.ಇ.ಟಿಯಲ್ಲಿ ಅರ್ಹತೆ ಪಡೆದವರು 70 ಸಾವಿರ ಅಭ್ಯರ್ಥಿಗಳು ಈ ಭಾಗದಲ್ಲಿದ್ದಾರೆ. ಅಲ್ಲದೆ 22 ಸಾವಿರ ಅಂದರೆ ಶೇ.45.80ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ.  ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಪಿಎಸ್‍ಟಿಆರ್ ಮತ್ತು ಹೆಚ್‍ಎಸ್‍ಟಿಆರ್  ಹುದ್ದೆಗಳನ್ನು ಹೆಚ್ಚಿಸಬೇಕು. ಅಂದರೆ ಡಿಎಡ್ ಪದವಿದರರಿಗೆ 4,500 ಹುದ್ದೆಗಳು ಅಗತ್ಯವಿವಿದ್ದರೆ, ಜಿಪಿಟಿ ಕೇವಲ 78 ಹುದ್ದೆಗಳ ನೇಮಕ ಅವೈಜ್ಞಾನಿಕವಾಗಿದೆ. ಆದ್ದರಿಂದ ಇದನ್ನೂ ಸಹ 5 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಮತ್ತು ಶೀಘ್ರಗತಿಯಲ್ಲಿ ನೇಮಕಾತಿ ನಡೆಸಬೇಕು. ಶಿಕ್ಷಕ ನೇಮಕಾತಿ 2022ರಲ್ಲಿ ನಡೆದಿದ್ದು ಇಲ್ಲಿಯವರೆಗೆ ಯಾವುದೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯದಿರುವುದರಿಂದ ಈ ಭಾಗದ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಈ ಅಂಶವನ್ನು ಗಮನಿಸಿ ನೇಮಕಾತಿಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿಪಿಎಸ್‍ಟಿಆರ್) ಹಾಗೂ ಪ್ರೌಢ ಶಾಲಾ ಶಿಕ್ಷಕರು(ಹೆಚ್‍ಎಸ್‍ಟಿಆರ್) ಹುದ್ದೆಗಳನ್ನು ಹೆಚ್ಚಿಸಬೇಕಿದೆ.  ಡಿ.ಎಡ್ ಮತ್ತು ಬಿ.ಎಡ್ ಅಂಕಗಳನ್ನು ಕೈ ಬಿಟ್ಟು ಸಿಇಟಿ ಮತ್ತು ಟಿಇಟಿ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಬೇಕೆಂದು ಆಗ್ರಹಿಸಿದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!