ಸ್ವಾಲಿಡಾರಿಟಿ ಯುವ ಸಂಘಟನೆಯಿಂದ ಎಸಿಗೆ ಮನವಿ :
ಲಿಂಗಸುಗೂರು : ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿನ ರಸ್ತೆಗಳು ಹದಗೆಟ್ಟು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ ಕೂಡಲೇ ರಸ್ತೆ ದುರಸ್ಥಿಗೊಳಿಸುವಂತೆ (Repair of roads )ಆಗ್ರಹಿಸಿ ಸ್ವಾಲಿಡಾರಿಟಿ ಯುವ ಸಂಘಟನೆ ಪದಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ತೆಗ್ಗು ಬಿದ್ದು ಅಪಘಾತಕ್ಕೆ ಆಹ್ವಾನ :
ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯ ಮುಖಾಂತರ ನಿತ್ಯವೂ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಅಲ್ಲಿ ನಾಲ್ಕೈದು ಅಡಿಗಳಷ್ಟು ತೆಗ್ಗು ಬಿದ್ದು ಅಪಘಾತಕ್ಕೆ ಆಹ್ವಾನ ನೀಡುವಂಥಾಗಿದೆ. ಈ ಹೆದ್ದಾರಿ ಅಕ್ಕಪಕ್ಕದಲ್ಲಿ ಹತ್ತಾರು ಶಾಲಾ-ಕಾಲೇಜುಗಳಿವೆ, ವಿದ್ಯಾರ್ಥಿಗಳನ್ನು ಹೊತ್ತಕೊಂಡು ಸಾಗುವ ಶಾಲಾ ವಾಹನಗಳು ಮಕ್ಕಳ ಜೀವವನ್ನೇ ಕೈಯಲ್ಲಿಟ್ಟುಕೊಂಡು ಸಾಗಿಸಬೇಕಾದ ದುಸ್ಥಿತಿ ಬಂದೊಗಿದೆ. ಸುಮಾರು ಎರಡು ವರ್ಷಗಳಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಮಳೆ ಬಂದಾಗ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ವಾಹನ ಚಾಲಕರಿಗೆ ತಿಳಿಯದೇ ವಾಹನಗಳು ಗುಂಡಿಯಲ್ಲಿ ಬಿದ್ದ ಘಟನೆಗಳು ನಿರ್ದಶನವಾಗಿದೆ.
ಇಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಕನಿಷ್ಠ ಪಕ್ಷ ಈ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸವನ್ನಾದರೂ ಮಾಡಬೇಕು. ಪಟ್ಟಣದ ಪಶು ಆಸ್ಪತ್ರೆ ಮುಂಭಾಗದಲ್ಲಿ ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರು ಅನೇಕ ತಾಪತ್ರಯ ಎದುರಿಸುತ್ತಿದ್ದಾರೆ ಗುಂಡಿಗಳನ್ನು ಮುಚ್ಚಲು ಪುರಸಭೆ ಆಡಳಿತ ವಿಫಲವಾಗಿದೆ. ತಾಲೂಕಿನ ಮುದಗಲ್,ಗುರುಗುಂಟಾ ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದ ರಸ್ತೆಗಳ ಸಂಪೂರ್ಣವಾಗಿ ಹದಗೆಟ್ಟಿವೆ ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು. ( Repair of roads )ಮುಖ್ಯ ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಲೋಕೋಪಯೋಗಿ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಅಮ್ಜದ್ ಅಲಿ, ಡಾ.ಜಾವೀದ್,ಖಾಲಿದ್, ಮಹಾಂತೇಶ ಗೌಡರ್ ಸೇರಿದಂತೆ ಅನೇಕರಿದ್ದರು.