ವಿಜಯದಶಮಿ ಪಥಸಂಚಲನ
ಲಿಂಗಸುಗೂರು : ದೇಶದಲ್ಲಿ ಏನೇ ಪ್ರಕೃತಿ ವಿಕೋಪಗಳು(Natural disasters) ಎದುರಾದಾಗ ರಾಷ್ಟ್ರದಲ್ಲಿ ಏನೇ ಸವಾಲು ಬಂದಾಗ ಮೊದಲು ನಿಲ್ಲುವುದೇ RSS PARADE ಆರ್ ಎಸ್ ಎಸ್ ಕಾರ್ಯಕರ್ತರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(Rashtriya Swayamsevak Sangh) ಬಳ್ಳಾರಿ ವಿಭಾಗೀಯ ಮುಖ್ಯ ಕಾರ್ಯ ವಾ ದಾಮೋದರ ಕಾಸರಗೋಡು ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆರ್ ಎಸ್ ಎಸ್ ಹಮ್ಮಿಕೊಂಡಿದ್ದ( RSS PARADE )ವಿಜಯದಶಮಿ ಅಂಗವಾಗಿ( RSS PARADE )ಪಥಸಂಚಲನ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಜಯದಶಮಿಯಂದೇ ಮಹಾರಾಷ್ಟ್ರದ ನಾಗಪುರದಲ್ಲಿ 1925ರಲ್ಲಿ ಡಾ.ಕೇಶವ ಹೆಡಗೆವಾರ್ ಅವರು ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ ಎಸ್ ಎಸ್) ನೂರು ವರ್ಷ ತುಂಬುತ್ತಿದೆ. ಆರ್ ಎಸ್ ಎಸ್ ಮುಂದಿನ ವರ್ಷವರಿಗೆ ಶತ್ಭಾಧಿ ವರ್ಷವಾಗಿದೆ. ದೇಶದಲ್ಲಿ ಪ್ರವಾಹ, ರೈಲು ದುರಂತ, ಚಂಡಮಾರುತ, ಭೂಕಂಪ, ಕೊರೊನಾದಂತಹ ವಿಕೋಪಗಳು ಎದುರಾದಾಗ ಅದರ ಪರಿಹಾರ ಕಾರ್ಯಕ್ಕಾಗಿ ನಿಸ್ವಾರ್ಥದಿಂದ ತಟ್ಟನೆ ನಿಲ್ಲವುದೇ ಆರ್ ಎಸ್ ಎಸ್ ರಾಷ್ಟ್ರಕ್ಕೆ ಏನೇ ಸವಾಲು ಸಂಕಷ್ಟ ಬಂದಾಗ ಮೊದಲು ನಿಲ್ಲುವುದೇ ಆರ್ ಎಸ್ ಎಸ್ ಎಂದರು. ಇಲ್ಲಿವರಿಗೂ ಸಂಘದ ಕಾರ್ಯಕರ್ತರು ದೇಶದಲ್ಲಿ 1.50 ಲಕ್ಷಕ್ಕೂ ಅಧಿಕ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಆರ್‍ಎಸ್‍ಎಸ್ ಅಂದರೆ ಭಯೋತ್ಪಾದಕರಿಗೆ, ಕಮ್ಯೂನಿಷ್ಟರಿಗೆ ಭಯ. ದೇಶದ ಮಹಿಳೆಯರಿಗೆ ಆರ್‍ಎಸ್‍ಎಸ್ ಎಂದರೆ ಭಕ್ತಿ ಭಾವನೆ ಇದೆ. ರಾಷ್ಟ್ರದಲ್ಲಿ ಏನೇ ಸವಾಲು ಬಂದಾಗ ಮೊದಲು ನಿಲ್ಲುವುದೇ ಆರ್ ಎಸ್ ಎಸ್ ಎಂದರು.
ಈ ಸುದ್ದಿನ್ನು ಓದಿ :
- Jagdish Sharma sampa : ಮಹಾಭಾರತ ಪ್ರತಿಯೊಬ್ಬ ಭಾರತೀಯನ ಚರಿತ್ರೆ
- Amit shah :ಅಂಬೇಡ್ಕರರಿಗೆ ಅವಮಾನಿಸಿದ ಅಮಿತ್ ಶಾ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
- Mahabharata :ಡಿ.21ರಿಂದ ಮಹಾಭಾರತ ಚಿಂತನ ಮಂಥನ ಕಾರ್ಯಕ್ರಮ
- Rambhapuri peetha :ಮನುಷ್ಯನಿಗೆ ಶಾಸ್ತ್ರ-ಶಸ್ತ್ರದ ಭಯವಿರಬೇಕು
- Drop Drip irrigation ಹನಿ ನೀರಾವರಿ ಬಿಟ್ಟು ಹರಿ ನೀರಾವರಿ ಜಾರಿಗೊಳಿಸಿ
ಗರ್ವದಿಂದ ಹಿಂದೂ ಎಂದು ಹೇಳಿ :
ದೇಶದ ವೈಭವಕ್ಕೆ ಹಿಂದೂಗಳು ಕಾರಣರಾಗಿದ್ದಾರೆ. ದೇಶದಲ್ಲಿ ಪರಿವರ್ತನೆ ತರಬೇಕಾಗಿದ್ದರೆ ಅದು ಹಿಂದೂಗಳಿಂದ ಮಾತ್ರ. ಈ ಹಿಂದೆ ಹಿಂದೂ ಎಂದು ಹೇಳಲು ಹೆದರಿಕೆ ಪಡುತ್ತಿದ್ದ ಕಾಲಗಳು ಇದ್ದವು ಒಗ್ಗಟ್ಟು ಮೂಡಿದ್ದರಿಂದ ಈಗ ಹಿಂದೂ ಹೇಳಲು ಗರ್ವ ಪಡಬೇಕಾಗಿದೆ ಎಂದರು.
ಪರಿಸರ ಸಂರಕ್ಷಣೆಯ ಸಂಕಲ್ಪ ಅಗತ್ಯ :
ನೈಸರ್ಗಿಕ ಸಂಪನ್ಮೂಲಗಳ ವಿವೇಚನಾರಹಿತ ಶೋಷಣೆಯ ಪರಿಣಾಮವಾಗಿ ಮಾಲಿನ್ಯ, ಜಾಗತಿಕ ತಾಪಮಾನ, ಋತುಮಾನದ ಚಕ್ರಗಳಲ್ಲಿ ಅಸಮತೋಲನ ಮತ್ತು ಪರಿಣಾಮವಾಗಿ ನೈಸರ್ಗಿಕ ವಿಕೋಪಗಳು ಪ್ರತಿ ವರ್ಷ ಹೆಚ್ಚುತ್ತಿವೆ. ಕಳೆದ ಅನೇಕ ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ದೇಶದ ಮುಂದಿನ ದಿನಗಳಲ್ಲಿ ನೀರನ್ನು ಖರೀದಿಸಿ ಕುಡಿಯುವ ಸ್ಥಿತಿ ಬರುತ್ತೆ ಎಂದು ಭವಿಷ್ಯ ನುಡಿದ್ದರು ಅವರ ಭವಿಷ್ಯ ನಿಜವಾಗಿದೆ. ನಾವೆಲ್ಲರೂ ಪ್ಲಾಸ್ಟಿಕ್‍ಬಾಟಲ್‍ನಲ್ಲಿ ನೀರನ್ನು ಖರೀದಿಸುತ್ತಿದ್ದೇವೆ. ಪ್ಲಾಸ್ಟಿಕ್‍ಬಳಕೆ ಅಧಿಕವಾಗಿದ್ದರಿಂದ ಜಾನುವಾರುಗಳ ಪ್ಲಾಸ್ಟಿಕ್‍ತಿಂದು ಸಾಯುತ್ತಿವೆ. ಪರಿಸರವೂ ಹಾಳಾಗುತ್ತಿದೆ. ಈಗ ಪರಿಸರ ಸಂರಕ್ಷಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್‍ಸಾಮಾಗ್ರಿಗಳಿಂದ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಒಂದು ಗಿಡ ಕಡಿದರೆ ಹತ್ತು ಗಿಡ ನೆಡಬೇಕೆಂಬ ಚಿಂತನೆ ಈ ಹಿಂದಿನಿಂದಲೂ ನಡೆದಿತ್ತು, ಆದರೆ ಹತ್ತು ಗಿಡ ಕಡಿದು ಒಂದು ಗಿಡ ನೆಡುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾರಿ ವಿಜಯದಶಮಿ ಅಂಗವಾಗಿ ಪರಿಸರ ಸಂರಕ್ಷಣೆ, ಗಿಡಗಳ ಬೆಳೆಸುವ, ಪ್ಲಾಸ್ಟಿಕ್‍ಬಳಕೆ ಕಡಿಮೆ ಮಾಡುವ ಬಗ್ಗೆ ದೇಶದ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ ಎಂದರು.
ಶತಮಾನಗಳ ಬಿಕ್ಕಟ್ಟುಗಳ ಹೋರಾಟದ ನಂತರ ಭಾರತವು ಪ್ರಬಲವಾಗಿ ಹೊರಹೊಮ್ಮಿದೆ ಮತ್ತು ನಮ್ಮ ರಾಷ್ಟ್ರವು ಈಗ ಖಂಡಿತವಾಗಿಯೂ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ನಾವು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಪೂರ್ಣಗೊಳಿಸುತ್ತಿದ್ದೇವೆ. ಭಯೋತ್ಪಾದನೆ, ಶೋಷಣೆ ಮತ್ತು ನಿರಂಕುಶವಾದವು ವಿನಾಶ ಉಂಟುಮಾಡಲು ಹೊರಟಿದೆ. ಭಾರತದ ಅಭಿವೃದ್ಧಿ ಬಯಸದ ಕೆಲವು ಜನರು ಈ ಜಗತ್ತಿನಲ್ಲಿ ಮತ್ತು ಭಾರತದಲ್ಲಿಯೂ ಇದ್ದಾರೆ. ಅಂತವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಕೆಲವೊಮ್ಮೆ ಅನಗತ್ಯ ಅವಾಂತರಗಳು ಸೃಷ್ಟಿಯಾಗುತ್ತವೆ. ಕೆಲವು ದೇಶಗಳು ಭಾರತ ಮುಂದುವರೆದರೆ ಅವರ ಆಟ ನಡೆಯುವುದಿಲ್ಲ. ಈಗಾಗಿ ಪರೋಕ್ಷವಾಗಿ ವಿರೋಧವಾಗಿದ್ದಾರೆ ಎಂದರು.
ಆಕರ್ಷಕ ಪಥ ಸಂಚಲನ :
ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಗಣವೇಷಧಾರಿಗಳಾಗಿ ಪಥ ಸಂಚಲನ ನಡೆಸಿದರು. ವಿಜಯದಶಮಿ ಅಂಗವಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಆರಂಭಗೊಂಡ ಆರ್‌ಎಸ್‌ಎಸ್ ಕಾರ್ಯಕರ್ತರ ಪಥಸಂಚಲನ, ಪಟ್ಟಣದ ಬಸ್ ನಿಲ್ದಾಣ ವೃತ್ತ, ಬೆಂಗಳೂರು ಬೈಪಾಸ್ ರಸ್ತೆ, ಐಎಂಎ ಹಾಲ್, ಕೋರ್ಟ್, ರೇಣುಕಾ ನಗರ, ಮದರ್ ಥೇರೆಸಾ ಶಾಲೆ, ಜಿ.ಪಂ ಕಚೇರಿ, ಸ್ವಾಮಿ ವಿವೇಕಾನಂದ ನಗರ, ರಾಘವೇಂದ್ರ ದೇವಸ್ಥಾನ, ಪಿಂಚಣಿಪುರ, ನಗರೇಶ್ವರ ದೇವಸ್ಥಾನ, ಹನುಮಾನ್ ಚೌಕ್,ಮೇನ್ ಬಜಾರ್, ಗಡಿಯಾರ ವೃತ್ತ, ಅಂಚೆ ಕಚೇರಿ ವೃತ್ತದ ಮೂಲಕ ವಾಪಸ್ಸು ಸರ್ಕಾರಿ ಪಿಯು ಕಾಲೇಜು ಮೈದಾನಕ್ಕೆ ಬಂದು ತಲುಪಿತು.
ಪಥ ಸಂಚಲನ ನಡೆಯುವ ಮಾರ್ಗಗಳಲ್ಲಿ ಸಾರ್ವಜನಿಕರು, ಆರ್ ಎಸ್‍ಎಸ್‍ನ ಅಭಿಮಾನಿಗಳು ಸಂಘದ ಕಾರ್ಯಕರ್ತರ ಮೇಲೆ ಪುಷ್ಟವೃಷ್ಠಿಸಿ ತಮ್ಮ ಅಭಿಮಾನ ಮೆರೆದರು.ಗಡಿಯಾರ ವೃತ್ತದ ಬಳಿ ಜೆಸಿಬಿ ಮೂಲಕ ಪಥ ಸಂಚಲನದ ಮೇಲೆ ಪುಷ್ಟ ವೃಷ್ಠಿ ಮಾಡಲಾಯಿತು.
ಪಥಸಂಚಲನ ತೆರಳುವು ಪಟ್ಟಣದ ಗಡಿಯಾರದ ವೃತ್ತದ ಬಳಿ ಭಾರತ ಮಾತೆ, ಸ್ವಾಮಿ ವಿವೇಕಾನಂದ, ಸುಭಾಶ್ ಚಂದ್ರಭೋಸ್, ವೀರರಾಣಿ ಕಿತ್ತೂರು ಚೆನ್ನಮ್ಮ, ಭಗತ್‍ಸಿಂಗ್,ಬೆಳವಡಿ ಮಲ್ಲಮ್ಮ ಹಾಗೂ ದೇಶದ ಸೈನಿಕರ ವೇಷಧರಿಸಿದ ಚಿಣ್ಣರು ಭಾರತ ಬಾವುಟ ಹಿಡಿದು ನಿಂತಿರುವುದು ವಿಶೇಷವಾಗಿತ್ತು.