ಅಧಿಕಾರಿಗಳ ಸಂಧಾನ ಮತ್ತೆ ವಿಫಲ :
ಲಿಂಗಸುಗೂರು : 10 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾ.ಪಂ ಕಚೇರಿ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತ್ರತ್ವದಲ್ಲಿ ಕೂಲಿಕಾರರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಶುಕ್ರವಾರ ತಾ.ಪಂ ಕಚೇರಿ ಅಧಿಕಾರಿಗಳು ಭೇಟಿ ನೀಡಿ ನಡೆಸಿದ ಸಂಧಾನ ವಿಫಲವಾಗಿದ್ದರಿಂದ ನಾಳೆಯಿಂದ ಅರಬೆತ್ತಲೆ ಸತ್ಯಾಗ್ರಹ(Satyagraha) ನಡೆಸುವುದಾಗಿ ಕೂಲಿಕಾರ್ಮಿಕರು ಘೋಷಣೆ ಮಾಡಿದರು.
ತಾ.ಪಂ ಕೆಚೇರಿ ಅಧಿಕಾರಿಗಳಾದ ಮಹಿಬೂಬು, ಸುಂಕನಗೌಡ ಹಾಗೂ ಹನುಮನಗೌಡ ಧರಣಿ ಸ್ಥಳಕ್ಕೆ ಭೇಟಿ ನೀಡಿ, ನಿಮ್ಮ ಬೇಡಿಕೆ ಪ್ರಕಾರ ತೋಟಗಾರಿಕೆ ಇಲಾಖೆಯಲ್ಲಿ ನರೇಗಾದಡಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಒಂದು ವರ್ಷವಾದರೂ ವೇತನ ಪಾವತಿ ಮಾಡುವಲ್ಲಿ ವಿಳಂಭ ಮಾಡಿ ನಿರ್ಲಕ್ಷ ತೋರಿದ ಸ್ಥಳೀಯ ತೋಟಗಾರಿಕೆ ಇಲಾಖೆ ತೋಟಗಾರಿಕೆ ಅಧಿಕಾರಿ ಹಾಗೂ ಹಿರಿಯ ನಿರ್ದೇಶಕರ ವಿರುದ್ಧ ಜರಗಿಸುವಂತೆ ಮತ್ತು ಸರ್ಜಾಪುರ ಪಿಡಿಓ ಶೋಭಾರಾಣಿ ನರೇಗಾ ನಿಯಮ ಹಾಗೂ ಕಾಯ್ದೆಗಳನ್ನು ಗಾಳಿಗೆ ತೋರಿ ತಮ್ಮ ಪತಿ ಹೆಸರಿನ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿ ಬಿಲ್ ಎತ್ತಿರುವುದು ದೂರುಗಳ ಬಂದ ಮೇಲೆ ಪಾವತಿಮಾಡಿಕೊಂಡ ಬಿಲ್ ಮರಳಿ ಸರ್ಕಾರಕ್ಕೆ ಮರುಪಾವತಿ ಮಾಡಿರುವ ಬಗ್ಗೆ ಕ್ರಮ ಜರಗಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪತ್ರ ಬರೆದಿದ್ದಾರೆಂದು ಹೋರಾಟಗಾರಿಗೆ ಮನವರಿಕೆ ಮಾಡಿದರು.
ಶೋಕಿಗಾಗಿ ಸತ್ಯಾಗ್ರಹ ಮಾಡುತ್ತಿಲ್ಲ :
ಅಧಿಕಾರಿಗಳ ಮಾತಿಗೆ ಆಕ್ರೋಶಗೊಂಡ ಗ್ರಾಕೂಸ್ ಮುಖಂಡ ಗುಂಡಪ್ಪ ಯರಡೋಣಾ, ದಿನನಿತ್ಯದ ಉದ್ಯೋಗ ಬಿಟ್ಟು ಇಲ್ಲಿ ಸತ್ಯಾಗ್ರಹ (Satyagraha) ನಡೆಸುತ್ತಿರುವುದು ಶೋಕಿಗಾಗಿ ಅಲ್ಲ, ನಮ್ಮ ಸತ್ಯಾಗ್ರಹ (Satyagraha) ನೂರಾರು ಕೂಲಿಕಾರರ ಒಗ್ಗಟ್ಟಿನ ಬೇಡಿಕೆಗಳು ಅಡಗಿವೆ. ತಾ.ಪಂ ಹಾಗೂ ಜಿ.ಪಂ ಅಧಿಕಾರಿಗಳು ಪಿಡಿಓ, ಅಧಿಕಾರಿಗಳ ರಕ್ಷಣೆ ನಿಂತು ನೂರಾರು ಕಾರ್ಮಿಕರ ಹಿತ ಬಲಿ ನೀಡುತ್ತಿವೆ. ಸರ್ಜಾಪುರ ಪಿಡಿಓ ಶೋಭರಾಣಿ ಪತಿ ಸರ್ಕಾರಿ ನೌಕರರರಾಗಿದ್ದರೂ ನಿಯಮಗಳನ್ನು ಗಾಳಿತೋರಿ ಪತಿ ಹೊಲದಲ್ಲಿ ಕೃಷಿ ಹೊಂಡ ಮಾಡಿ ಹಣ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಮ್ಮ ಸಂಘಟನೆಯಿAದ ದೂರು ನೀಡಿದರೂ ಯಾವುದೇ ಕ್ರಮ ಜರಗಿಸಿಲ್ಲ, ನಾವು ಹೋರಾಟ ಆರಂಭ ಮಾಡಿದ ಮೇಲೆ ಜೊಳ್ಳು ಪತ್ರ ಹಿಡಿಕೊಂಡು ಬಂದಿರೀ ನಿಮಗೆ ಮನಷ್ಯತ್ವವನೇ ಇಲ್ವಾ ಎಂದು ಕಿಡಿಕಾರಿದರು. ಹೊನ್ನಳ್ಳಿ ಗ್ರಾಮದಲ್ಲಿ ಕಬ್ಬಿಣದ ಕಂಬ ತೆರವುಗೊಳಿಸುವಂತೆ ವಿದ್ಯುತ್ ತಂತಿಗಳು ಜೋತು ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ ಎಂದು ಈ ಬಗ್ಗೆ ಲಿಖಿತ ದೂರು ನೀಡಿದರೂ ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಮಾಡಿದ್ದರಿಂದ ನಿನ್ನೆ ದಿನ ವಿದ್ಯುತ್ ತಂತಿ ತಗುಲಿ ಓರ್ವ ವ್ಯಕ್ತಿ ಸಾವುನ್ನಪ್ಪಿದ್ದಾನೆ ಇದಕ್ಕೆ ಯಾರೂ ಹೊಣೆ ಎಂದು ಪ್ರಶ್ನಿಸಿದರು.
ಗ್ರಾಮಸಭೆ ಮಾಡದೇ ಕ್ರೀಯಾಯೋಜನೆ :
ಗ್ರಾಮ ಪಂಚಾಯಿತ ಮಟ್ಟದಲ್ಲಿ ಯಾವುದೇ ಕ್ರೀಯಾ ಯೋಜನೆ ಮತ್ತು ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯಾಗಿ ಗ್ರಾಮದಲ್ಲಿ ಸಾಕಷ್ಟು ಪ್ರಚಾರ ಮಾಡಿ ಗ್ರಾಮಸಭೆ ನಡೆಸಿ ಕ್ರೀಯಾಯೋಜನೆ ಅಥವಾ ಫಲಾನುಭವಿಗಳನ್ನು ಆಯ್ಕೆ ಮಾಡದೇ ಪಿಡಿಓ, ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರು ಒಳಒಪ್ಪಂದ ಮಾಡಿಕೊಂಡು ಗ್ರಾಮಸಭೆ ನಡೆದಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸುತ್ತಿದ್ದಾರೆ ಇಂತಹ ವ್ಯವಸ್ಥೆ ಹೋಗಲಾಡಿಸಬೇಕು. ಕಾರ್ಮಿಕರು ಮಾಡಿದ ಕೆಲಸಕ್ಕೆ ಅಳತೆ ಅಷ್ಟು ಇದೆ ಇಷ್ಟು ಇದೆ ಎಂದು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ. ಆದರೆ ಗ್ರಾ.ಪಂ ಸದಸ್ಯರು ಮಾಡಿದ ಕೆಲಸಕ್ಕೆ ಯಾವುದೇ ಅಳತೆ ಮಾಡದೇ ಅವರಿಗೆ ಪೂರ್ಣ ವೇತನ ಪಾವತಿ ಮಾಡುತ್ತಿದ್ದಾರೆ. ಪ್ರಮಾಣಿಕವಾಗಿ ಕೆಲಸ ಮಾಡಿದ ನರೇಗಾ ಕಾರ್ಮಿಕರಿಗೆ ಪೂರ್ಣ ವೇತನ ನೀಡಿದ ಇತಿಹಾಸವೇ ಇಲ್ಲ ಎಂದು ಕಮಿಷನ್ ನೀಡಿದವರಿಗೆ ವೇಗ ಹಾಗೂ ಪೂರ್ಣ ವೇತನ ನೀಡುತ್ತಿದ್ದಾರೆ. ಪೂರ್ಣ ಪ್ರಮಾಣದ ಬೇಡಿಕೆ ಈಡೇರುವವರಿಗೂ ಧರಣಿ ವಾಪಸ್ಸು ಪಡೆಯುವದಿಲ್ಲ, ಮೇಲಾಗಿ ನಾಳೆಯಿಂದ ಅರಬೆತ್ತಲೆ ಸತ್ಯಾಗಹ (Satyagraha) ನಡೆಸ ತಾ.ಪಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಕೂಸ್ ಮುಖಂಡ ಗುಂಡಪ್ಪ ಯರಡೋಣಾ ತಿಳಿಸಿದ್ದಾರೆ.
ಈ ಧರಣಿಯಲ್ಲಿ ಮೋಕ್ಷಮ್ಮ, ಹುಸೇನಭಾಷ ಯಲಗಟ್ಟ, ಆದಪ್ಪ, ಹುಲಗಪ್ಪ ಹೊನ್ನಳ್ಳಿ, ರಾಮಲಿಂಗಪ್ಪ ಹೊನ್ನಳ್ಳಿ, ಗದ್ದೆಪ್ಪ, ಬಸವರಾಜ, ಸುರೇಶ ಕಾಚಾಪುರ, ಛತ್ರಪ್ಪ ಮಾವಿನಭಾವಿ, ಹುಸೇನಸಾಬ, ಹಸನಸಾಬ, ಅಮರೇಗೌಡ, ಹುಲಗಪ್ಪ ಮಾವಿನಭಾವಿ, ಮಾಳಮ್ಮ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಭಾಗವಹಿಸಿದ್ದರು.