ಆರು ಕೋಟಿ ಆಂಜನೇಯ ದೇವಸ್ಥಾನದಲ್ಲಿ ಸಸಿ ನೆಡುವ ಕಾರ್ಯ
ಲಿಂಗಸೂಗೂರು : ಪರಿಸರ ಸಂರಕ್ಷಣೆ (Save the environment )ದೇಶದ ಪ್ರತಿಯೊಬ್ಬ ಪ್ರಜೆ ಜವಬ್ದಾರಿ ಮತ್ತು ಆದ್ಯ ಕರ್ತವ್ಯವಾಗಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಬನ್ನೆಪ್ಪ ಕರಿಬಂಟನಾಳ ಹೇಳಿದರು.
ಪಟ್ಟಣದ ಕೆಪಿಟಿಸಿಎಲ್ ಕಚೇರಿ ಆವರಣದ ಆರು ಕೋಟಿ ಆಂಜನೇಯ ದೇವಸ್ಥಾನದ ಹತ್ತಿರ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚನ್ನಪ್ಪ ಹೊಸಹಳ್ಳಿ ಅವರ ಮೌನೇಶ ಸುಪುತ್ರನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು 10 ಸಸಿಗಳನ್ನು ನೆಡುವ ಮೂಲಕ ವಿಶೇಷವಾಗಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕಾಡು ಬೆಳೆಸಿ ನಾಡು ಉಳಿಸಿ ಇದು ಕನ್ನಡ ನಾಡಿನ ಹೆಮ್ಮೆಯ ಘೋಷವಾಕ್ಯವಾಗಿದೆ. ಹವಮಾನ ವೈಪರಿತ್ಯಗಳು ಪರಿಸರದ ಅಸಮತೋಲನ ಇನ್ನಿತರ ಹಲವು ಸಮಸ್ಯೆಗಳಿಗೆ ನಮ್ಮ ಪರಿಸರದ ಸುತ್ತಲೂ ಹಲವು ಸಸಿಗಳನ್ನು ನೆಡುವುದೊಂದೆ ಪರಿಹಾರವಾಗಿದೆ. ಹುಟ್ಟಹಬ್ಬದಂದು ದುಂದು ಖರ್ಚು ಮಾಡುವ ಬದಲು ಅದೇ ಖರ್ಚಿನಲ್ಲಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಮಾಡುವ ಕೆಲಸ ಮಾಡುವುದು ಉತ್ತಮ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಮೌನೇಶ ಹುಟ್ಟು ಹಬ್ಬ ಇರರರಿಗೆ ನಿದರ್ಶನವಾಗಿದೆ. ಪ್ರತಿಯೊಬ್ಬರೂ ಇದೇರೀತಿ ತಮ್ಮ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು ಎಂದರು.
ಹುಟ್ಟಹಬ್ಬದಂದು ಗಿಡ ನೆಡಿ :
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಪರಿಸರವನ್ನು ನಾವು ಸಂರಕ್ಷಣೆ ಪರಿಸರ ನಮ್ಮನ್ನು ಸಂರಕ್ಷಣೆ ಮಾಡುತ್ತದೆ.ನಮ್ಮ ಸಂಸ್ಥೆಯ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ಅವರ ಪುತ್ರನ ಹುಟ್ಟು ಹಬ್ಬವನ್ನು 10ಸಸಿಗಳನ್ನು ನೆಡುವ ಮೂಲಕ ಆಚರಿಸಿರುವುದು ತುಂಬಾ ಸಂತೋಷದಾಯಕ ವಿಷಯ.ಪ್ರತಿಯೊಬ್ಬರೂ ಇದೇ ರೀತಿ ಹುಟ್ಟು ಹಬ್ಬಗಳ ಅಂಗವಾಗಿ ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಈರಮ್ಮ, ಚನ್ನಪ್ಪ ಕೆ.ಹೊಸಹಳ್ಳಿ,ರಾಜು ಬಳಗಾನೂರು, ಮಂಜುಳಾ ಬಡಿಗೇರ,ರಂಜಾನ್ ಸಾಬ್,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಜೆಸ್ಕಾಂ ಸಿಬ್ಬಂದಿಗಳಾದ ಮಂಜುನಾಥ, ಸುರೇಶ,ಹನುಮನಗೌಡ, ಸೋಮಣ್ಣ,ಅಂಬಣ್ಣ ಬಸವರಾಜ ಚಿಲ್ಕರಾಗಿ,ರಮೇಶ ತೋಟದ್,ವೀರೇಶ,ಆದಪ್ಪ, ಶಿಕ್ಷಕರಾದ ನಾಗರಾಜ ಮಾಂಡ್ರೆ,ಹುಸೇನ್ ಸಾಬ್ ಹಾಗೂ ಕುಟುಂಬ ವರ್ಗದವರು ಜೆಸ್ಕಾಂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗುತ್ತಿಗೆದಾರರು ಇದ್ದರು.