ರೇಷ್ಮೆ ಬೆಳೆಗಾರರಲ್ಲಿ ಆತಂಕ
ಲಿಂಗಸುಗೂರು : ತಾಲೂಕಿನ ರೇಷ್ಮೆ ಬೆಳೆಗಾರರಿಗೆ (Sericulture )ರೇಷ್ಮೆ ಹುಳುಗಳ ಚಾಕಿ ಸಹಾಯಧನ ಬಿಡುಗಡೆ ಮಾಡುವಂತೆ ತಾಲೂಕಿನ ಭೂಪುರ (ರಾಂಪೂರು) ಗ್ರಾಮದ ರೇಷ್ಮೆ ಬೆಳೆಗಾರರು ರೇಷ್ಮೆ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ರೇಷ್ಮೆ ಬೆಳೆಗಾರರರಿಗೆ ರೇಷ್ಮೆ ಹುಳುಗಳ ಚಾಕಿಗಾಗಿ ರೇಷ್ಮೆ ಇಲಾಖೆಯಿಂದ ಬಿಡುಗಡೆ ಯಾಗಬೇಕಾದ ಸಹಾಯಧನ 2022ರಿಂದ ಬಿಡುಗಡೆಯಾಗಿಲ್ಲ, ಎರಡು ವರ್ಷ ಕಳೆಯುತ್ತಾ ಬಂದರೂ ರೇಷ್ಮೆ ಬೆಳೆಗಾರರಿಗೆ (Sericulture )ಸಹಾಯಧನ ಮತ್ತು ಸಾಗಾಣಿಕೆ ವೆಚ್ಚ ನೀಡಿಲ್ಲ ಇದರಿಂದ ರೈತರು ಕಚೇರಿಗೆ (Sericulture )ಅಲೆದಾಡುವಂತಾಗಿದೆ.
ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ :
ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ರೇಷ್ಮೆ ಉತ್ಪಾದನೆಯಲ್ಲಿ ಹಿನ್ನಡೆ ಉಂಟಾಗುತ್ತಿದೆ. ಇದರಿಂದ ರೇಷ್ಮೆ ಬೆಳೆಗಾರರು ತೊಂದರೆ ಎದುರಿಸುವಂತಾಗಿದೆ. ರೇಷ್ಮೆ ಬೆಳೆ ಹಾಗೂ ಬೆಳೆಗಾರರಿಗೆ ಮತ್ತುಷ್ಟು ಉತ್ತೇಜನ ನೀಡುವ ಹಿನ್ನಲೆಯಲ್ಲಿ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆ ಈಡೇರಿಸಿ :
ರೇಷ್ಮೆ ಹೊಸ ಮನೆ ನಿರ್ಮಾಣ ಮಾಡುವ ರೈತರಿಗೆ ಮನೆ ನಿರ್ಮಾಣ ಪೂರ್ತಿ ಮುಗಿದ ಮೇಲೆ ಸಹಾಯಧನ ನೀಡುವ ಬದಲು ಹಂತ ಹಂತವಾಗಿ ಬಿಲ್ ಪಾವತಿ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಹೊಸದಾಗಿ ನಾಟಿ ಮಾಡಿಕೊಳ್ಳುವ ರೈತರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 3*3 ಕ್ರಮದಲ್ಲಿ ನಾಟಿಗೆ ಅವಕಾಶ ಮಾಡಿಕೊಡಬೇಕು. ರೈತರಿಗೆ ಉಚಿತವಾಗಿ ವಿತರಿಸುವ ಔಷಧೀಯ ಕಿಟ್ ಗಳನ್ನು ಕೊನೆ ತಿಂಗಳಲ್ಲಿ ವಿತರಿಸಲಾಗುತ್ತಿದ್ದರಿಂದ ರೈತರು ಔಷಧಿಗಾಗಿ ಖಾಸಗಿ ಅಂಗಡಿ ಅಥವಾ ಬೇರೆ ಊರುಗಳಲ್ಲಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತೆ ಈಗಾಗಿ ಮೇ ಅಥವಾ ಜೂನ್ ತಿಂಗಳಲ್ಲಿ ಔಷಧೀಯ ಕಿಟ್‍ಗಳನ್ನು ವಿತರಿಸಬೇಕು ಹಾಗೂ ಈ ಎಲ್ಲಾ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ವೇಳೆ ರೇಷ್ಮೆ ಬೆಳೆಗಾರರಾದ ಮಲ್ಲಿಕಾರ್ಜುನಗೌಡ ಪಾಟೀಲ್, ಅಮರೇಗೌಡ, ಶರಣಪ್ಪ, ವೆಂಕಪ್ಪ,ಶರಣಯ್ಯ, ಅಮೃತಪ್ಪ, ಮುತ್ತಪ್ಪ ಕುರಿ, ಗದ್ದೆಪ್ಪ, ಅಮರಪ್ಪ, ಶರಣಪ್ಪ, ಅಮರೇಗೌಡ, ನಿಂಗಪ್ಪ, ಸಣ್ಣಬಸಪ್ಪ, ಶಿವಪ್ಪ, ಹಿರಿಬಸಪ್ಪ, ನಾಗಪ್ಪ, ದ್ಯಾಮಪ್ಪ, ಹನುಮಪ್ಪ ಜಗ್ಗಲ್, ಹುಸೇನಪ್ಪ, ಹನುಮಪ್ಪ, ಬಸವರಾಜ, ನಾಗನಗೌಡ ಸೇರಿದಂತೆ ಅನೇಕರಿದ್ದರು.
ಈ ಸುದ್ದಿನು ಓದಿ https://suddiduniya.com/flow-irrigation/ ನಂದವಾಡಗಿ ಹನಿ ಬದಲು ಹರಿ ನೀರಾವರಿ ಜಾರಿಗೆ ತನ್ನಿ