ಮಾಜಿ ಸೈನಿಕರ ಸಂಘದ ವಾರ್ಷಿಕೋತ್ಸವ
ಲಿಂಗಸುಗೂರು : ದೇಶದಲ್ಲಿ ನೆಮ್ಮದಿ ವಾತಾವರಣ ಇದ್ದರೆ ಅದರ ಹಿಂದೆ soldiers ಸೈನಿಕರ ಶ್ರಮ ಅಡಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಸಾಯಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ soldiers ಸಂಘದ ತಾಲೂಕು ಘಟಕದ ಎರಡನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಅದಕ್ಕೆ ದೇಶದ ಗಡಿ ಕಾಯುವ ಸೈನಿಕರ ಶ್ರಮವೇ ಕಾರಣವಾಗಿದೆ. soldiers ದೇಶದ ಸೈನಿಕರಿಗೆ ದೇಶದ ಅಭಿಮಾನ ಇರುವರದಿಂದಲೇ ದೇಶದಲ್ಲಿ ಎಷ್ಟೆಲ್ಲಾ ಯುದ್ಧಗಳು ನಡೆದರೂ ದೇಶಕ್ಕಾಗಿ ತಮ್ಮ ಪ್ರಾಣಾತ್ಯಾಗ ಮಾಡಿ ದೇಶ ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಅವರ ಸೇವೆಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ.
ಪಿಓಕೆಯನ್ನೇ ವಶಪಡಿಸಿಕೊಳ್ಳುವ ಕಾಲ ಸನ್ನಿಹಿತ :
ಇತ್ತೀಚಿಗೆ ಜಮ್ಮು ಕಾಶ್ಮೀರ ನಾಯಕರೊಬ್ಬರು ಜಮ್ಮು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರ್ಪಡೆಯಾಗಲಿ ಎಂದು ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸವ ನರೇಂದ್ರ ಮೋದಿ ಸರ್ಕಾರ ಇರೋವರಿಗೂ ದೇಶದ ಒಂದು ತುಣುಕು ಜಾಗವೂ ಸಹ ಪಾಕಿಸ್ಥಾನವಾಗಲಿ ಇನ್ಯಾವುದೇ ರಾಷ್ಟçಕ್ಕೆ ಸೇರ್ಪಡೆ ಆಗೋದಿಲ್ಲ, ಇನ್ನೂ ಪಿಓಕೆಯನ್ನೇ ವಶಪಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದರು.
ಮಾಜಿ ಸೈನಿಕರ ವಸತಿ ಸೌಕರ್ಯ ನೀಡಿ :
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಚೆನ್ನಾರೆಡ್ಡಿ ಮಾತಾಡಿ, ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಮಾಜಿ ಸೈನಿಕರ ಸಂಘ ಮುನ್ನೆಡೆಯುತ್ತಿದೆ. ಜಿಲ್ಲೆಯಲ್ಲಿ 395 ಮಾಜಿ ಸೈನಿಕರಿದ್ದಾರೆ. 1961, 1965 ಹಾಗೂ 1999ರಲ್ಲಿ ನಡೆದ ಯುದ್ಧದಲ್ಲಿ ಹೋರಾಡಿದವರ ಪೈಕಿ ಜಿಲ್ಲೆಯ 21 ಸೈನಿಕರಿದ್ದಾರೆ. ಮಾಜಿ ಸೈನಿಕರ ಸಂಘಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ನಿವೇಶನಕ್ಕಾಗಿ ಸಾಕಷ್ಟು ಭಾರಿ ಮನವಿ ಸಲ್ಲಿಸಿದರೂ ಇನ್ನೂ ನಿವೇಶನ ದೊರಕಾಗಿದೆ. ತಾಲೂಕು ಕೇಂದ್ರಗಳಲ್ಲಿ ಮಾಜಿ ಸೈನಿಕರ ವಸತಿ ಸೌಕರ್ಯಕ್ಕಾಗಿ ನಿವೇಶನಗಳನ್ನು ಮಂಜೂರು ಮಾಡಬೇಕು ಹಾಗೂ ಮಾಜಿ ಸೈನಿಕರ ಆರೋಗ್ಯಕ್ಕಾಗಿ ಇರುವ ಇಸಿಹೆಚ್ ಯೋಜನೆ ಜಿಲ್ಲಾದ್ಯಂತ ಅನುಷ್ಠಾನಗೊಳಿಸುವತ್ತ ಚುನಾಯಿತ ಪ್ರತಿನಿಧಿಗಳು ಪ್ರಯತ್ನ ಮಾಡಬೇಕೆಂದರು.
ಈ ವೇಳೆ ವೀರ ನಾರಿಯರ ಸಂಘದ ರಾಜ್ಯಾಧ್ಯಕ್ಷೆ ರಜಿನಿ, ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ವೀರನಗೌಡ ಬಯ್ಯಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಮುದಗಲ್ ಮಂಡಲ ಬಿಜೆಪಿ ಅಧ್ಯಕ್ಷ ಹುಲ್ಲೇಶ ಸಾಹುಕಾರ, ನಾಗಭೂಷಣ, ಪತ್ರಕರ್ತ ಬಿ.ಎ.ನಂದಿಕೋಲಮಠ, ಎಲ್.ಆರ್.ಮೇಟಿ, ಶ್ರೀನಿವಾಸ ಕೊಲ್ಲಿ, ಗೋಪಾಲ, ಕಣುಮೇಶ ಚಿತ್ತಾಪುರ ಸೇರಿದಂತೆ ಅನೇಕರಿದ್ದರು.