suddiduniya.com

Solid waste unit :ಕಸವಿಲೇವಾರಿ ಘಟಕದಿಂದ ದುರ್ವಾಸನೆಯಿಂದ ಆರೋಗ್ಯದಲ್ಲಿ ಏರುಪೇರು

Solid waste unit

ಲಿಂಗಸುಗೂರು : ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್ ಹೊರಭಾಗದಲ್ಲಿರುವ ಕಸವಿಲೇವಾರಿ (Solid waste )ಘಟಕದಿಂದ ದುರ್ವಾಸನೆಯಿಂದ ಅಕ್ಕಪಕ್ಕದಲ್ಲಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಈ ಘಟಕವನ್ನು ಬೇರಡೆ ಸ್ಥಳಾಂತರ ಮಾಡುವಂತೆ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Solid waste unit
oplus_4194304

ಪುರಸಭೆ ವ್ಯಾಪ್ತಿಯಲ್ಲಿ ಮನೆಗಳ, ಅಂಗಡಿ,ಹೋಟೆಲ್‍ ಗಳ ಘನ ತ್ಯಾಜ್ಯಗಳನ್ನು ಸಂಗ್ರಹಿಸಿ ಕರಡಕಲ್ ಗ್ರಾಮದ ಬಳಿಯಿರುವ (Solid waste unit )ಕಸ ವಿಲೇವಾರಿ ಘಟಕದಲ್ಲಿ ತಂದು ಹಾಕಲಾಗುತ್ತಿದೆ. ಘಟಕದ ಅಕ್ಕಪಕ್ಕದಲ್ಲಿ ಅಂಬೇಡ್ಕರ್ ವಸತಿ ನಿಲಯ, ಪರಿಶಿಷ್ಟ ಪಂಗಡ, ಬಿಸಿಎಂ ಹಾಗೂ ಮೈನಾರಟಿ ವಸತಿ ನಿಲಯಗಳು ಇವೆ, ಇದಲ್ಲದೆ ಉಮಾಮಹೇಶ್ವರಿ ಕಾಲೇಜು, ಸ್ವಾಮಿ ವಿವೇಕಾನಂದ ಪ್ಯಾರಮೆಡಿಕಲ್ ಕಾಲೇಜುಗಳು ಇವೆ, ಇಲ್ಲಿಗೆ ಸಾವಿರಾರು ವಿದ್ಯಾರ್ಥಿಗಳು ನಿತ್ಯವೂ ಕಸ ವಿಲೇವಾರಿ ಘಟಕದ ದುರ್ವಾಸನೆಯಿಂದ ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಕಸ ವಿಲೇವಾರಿ ಘಟಕಕ್ಕೆ (Solid waste unit )ಸಮೀಪವೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡ ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದ್ದು, ಉದ್ಘಾಟನೆಯಾದಾಗ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೂ ಘಟಕದ ದುರ್ವಾಸನೆಯ ದುಷ್ಟಪರಿಣಾಮ ಬೀರಲಿದೆ. ಕೂಡಲೇ ಅಧಿಕಾರಿಗಳು ಎಚ್ಚತ್ತಗೊಳ್ಳಬೇಕಾಗಿದೆ.ಘಟಕದ ಹರಡುವ ದುರ್ವಾಸನೆಯಿಂದ ಘಟಕದ ಸನಿಹ ಇರುವ ನಾಲ್ಕು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟ ಮಾಡಲು ಆಗದೇ ವಸತಿ ನಿಲಯದಲ್ಲಿ ಇರಲು ಆಗದಷ್ಟು ದುಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

Solid waste unit

ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಲು ಕಾರಣವಾಗಿರುವ (Solid waste unit )ಕಸ ವಿಲೇವಾರಿ ಘಟಕವನ್ನು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಕೂಡಲೇ ಬೇರೆಡೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.

ಈ ವೇಳೆ ಪುರಷೋತ್ತಮ ಭಂಡಾರಿ, ಮಾರುತಿ ಗೋಸ್ಲೆ, ಹುಲಗಪ್ಪ, ಶ್ರೀನಾಥ ಭಂಡಾರಿ, ದೇವೇಂದ್ರ, ಸಂಜಯ ಗೋಸ್ಲೆ, ಆನಂದ , ಅಮರೇಶ ಮ್ಯಾಗೇರಿ, ತಿಮ್ಮಣ್ಣ, ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!