suddiduniya.com

Division Level Tournament : ಮಾನಸಿಕ,ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

ಮಾನಸಿಕ,ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

ಕಲುಬುರಗಿ ವಿಭಾಗ ಮಟ್ಟದ ಪಂದ್ಯಾವಳಿ

ಲಿ0ಗಸುಗೂರು : ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆಗಳು (Sports) ಸಹಕಾರಿಯಾಗುವುದರ ಜತೆಗೆ ಎಲ್ಲರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಮಾನಸಿಕ,ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲುಬುರಗಿ ವಿಭಾಗ ಮಟ್ಟದ(Division Level Tournament) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಹಾಗೂ ಬಾಲಕಿಯರ ಕ್ರಿಕೆಟ್ ಮತ್ತು ಬಾಲ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯ ಜೊತೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು ಅಂದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಸಾಧ್ಯವಾಗುತ್ತಿದೆ. ಲಿಂಗಸುಗೂರು ತಾಲೂಕಿಗೆ ವಿಭಾಗಮಟ್ಟದ ಪಂದ್ಯಾವಳಿ ನಡೆಸಲು ಅವಕಾಶ ಬಂದಿರುವುದು ಶಾಘ್ಲನೀಯವಾಗಿದೆ. ದೇಶ, ವಿದೇಶಗಳಲ್ಲಿ ಕ್ರಿಕೆಟ್, ಹಾಕಿ, ಪುಟ್‌ಬಾಲ್, ಅಥ್ಲೆಟ್ಸ್, ಬಾಕ್ಸಿಂಗ್ ಹೀಗೆ ನಾನಾ ಕ್ರೀಡೆಗಳು ನಡೆಯುತ್ತವೆ. ಇದರಿಂದ ದೇಶ-ವಿದೇಶಗಳ ವಿಶೇಷತೆಯನ್ನು ತಿಳಿದುಕೊಳ್ಳುವುದರ ಜತೆಗೆ, ಜ್ಞಾನ ವಿಕಸನಕ್ಕೆ ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ದೇಶ ಉತ್ತಮ ಸಾಧನೆ ಮಾಡುತ್ತಿದೆ. ಅನೇಕ ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಿದ್ದಾರೆ. ಯುವಜನರು ಹಾಕಿ, ಕ್ರಿಕೆಟ್ ಸೇರಿದಂತೆ ಅಥ್ಲೆಟಿಕ್ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಸೋಲು-ಗೆಲುವನ್ನು ಸ್ವೀಕರಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ದುಶ್ಚಟಗಳಿಗೆ ಬಲಿಯಾಗಬೇಡಿ :

ಯುವಕರು ನಾನಾ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯವನ್ನೇ ಹಾಳು ಮಾಡಿಕೊಳ್ಳದೇ ಸದೃಢ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಯಾಗಲಿದೆ. ಕ್ರೀಡಾಪಟುಗಳು ಆಶಾ ಭಾವನೆಯೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ತಾವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಹ ಛಲ ಹೊಂದಬೇಕು. ಆಗ ಮಾತ್ರ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಿಳೆಯರು ಕೂಡ ಪುರುಷರ ಸರಿಸಮವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿ ತರಬೇಕು. ಕ್ರೀಡೆಯಲ್ಲಿ ಒಮ್ಮೆ ಸೋತ ತಕ್ಷಣ ಹಿಂದೆ ಸರಿಯಬಾರದು. ಮತ್ತೆ ಸ್ಪರ್ಧೆ ಮಾಡಬೇಕು. ಆಗ ಮಾತ್ರ ಗೆಲುವು ಪಡೆಯಲು ಸಾಧ್ಯ. ಸೋಲು ಗೆಲುವಿನ ಮೊದಲ ಮೆಟ್ಟಿಲು ಎಂದು ಕರೆ ನೀಡಿದರು.

ಮಾನಸಿಕ,ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

500 ವಿದ್ಯಾರ್ಥಿಗಳು ಭಾಗಿ :


ಡಿಡಿಪಿಐ ಕೆ.ಡಿ ಬಡಿಗೇರ್ ಮಾತನಾಡಿ, ಕಲುಬುರಗಿ ವಿಭಾಗಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕ್ರಿಕೆಟ್ ಮತ್ತು ಬಾಲ ಬ್ಯಾಡ್ಮಿಂಟನ್ ಪಂದ್ಯಾವಳಿ ಲಿಂಗಸುಗೂರಿನಲ್ಲಿ ನಡೆಸಲು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ಇಲ್ಲಿ ಆಯೋಜನೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಆಂಗ್ಲಿಷ್ಟ ಶಾಲೆಯಲ್ಲಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ 500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ತಾಲೂಕಿನ ಶಿಕ್ಷಕರು ಮಕ್ಕಳ ವಸತಿ ಹಾಗೂ ಊಟದ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದಾರೆ ಏಳು ಜಿಲ್ಲೆಯ ಮಕ್ಕಳು ಹಾಗೂ ಶಿಕ್ಷಕರ ಮನಸ್ಸು ಗೆದ್ದಿದ್ದಾರೆ. ದಸರಾ ಹಬ್ಬ ಮುಗಿಯುವದೊರಳಗೆ ಮುಗಿಸಬೇಕಾಗಿದ್ದರಿಂದ ಇಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ವಿಭಾಗಮಟ್ಟದಲ್ಲಿ ಗೆದ್ದ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿವೆ. ಅಕ್ಟೋಬರ್ 17 ರಂದು ಚಿಕ್ಕೋಡಿಯಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ನಡೆಯಲಿದೆ.ವಿದ್ಯಾರ್ಥಿಗಳು ತಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿವೆ ಇದನ್ನು ಅರ್ಥೈಸಿಕೊಂಡು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಈ ವೇಳೆ ಬಿಇಒ ಹುಂಬಣ್ಣ ರಾಠೋಡ್, ಬಿಆರ್‌ಸಿ ಹನುಮಂತಪ್ಪ ಕುಳಗೇರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಚೆನ್ನಬಸವರಾಜ ಮೇಟಿ, ಕೆ.ರಂಗಸ್ವಾಮಿ, ಮಲ್ಲಿಕಾರ್ಜುನ ಗೌಡರ್, ಗಂಗಮ್ಮ , ಬಸಪ್ಪ ಹ0ದ್ರಾಳ, ಬಸವರಾಜ ಕರಡಿ, ಪ್ರಭುಲಿಂಗ ಗದ್ದಿ,ಪ್ರತಾಪರೆಡ್ಡಿ ಮುನ್ನೂರು ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!