suddiduniya.com

Surrender to suicide :ಬೆದರಿಸಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಸಿದ್ದಕ್ಕೆ ಆತ್ಮಹತ್ಯೆಗೆ ಶರಣು…!!

ದೇವರಭೂಪುರ ಗ್ರಾ.ಪಂ

ಲಿಂಗಸುಗೂರು : ಬೆದರಿಕೆ ಹಾಕಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಸಿದ್ದಕ್ಕೆ ಮನನೊಂದು ನೇಣಿಗೆ (Surrender to suicide )ಶರಣಾದ ಘಟನೆ ತಾಲೂಕಿನ ದೇವರಭೂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದಭಾವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

oppo_0

ದ್ಯಾವಣ್ಣ ಸೋಮಲಿಂಗಪ್ಪ ಜುಗಲೇರ್ (Surrender to suicide )ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ದ್ಯಾವಣ್ಣ ಸೋಮಲಿಂಗಪ್ಪ ಅವರು 2023ರಲ್ಲಿ ದೇವರಭೂಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. ಆದರೆ ಅಧ್ಯಕ್ಷರಾಗಿ 15 ತಿಂಗಳು ಆಗಿವೆ, ನೀನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿಂಗಪ್ಪ ಕನ್ನೇರಿ, ಅಮರೇಶ ಹುಬ್ಬಳ್ಳಿ, ಅಯ್ಯಾಳಪ್ಪ ಬರ್ನಾಳ, ನಾಗಪ್ಪ ಅಡವಿಭಾವಿದೊಡ್ಡಿ, ಹನುಮಂತ ಎಣ್ಣೆರ್, ಸೋಮಲಿಂಗಪ್ಪ ಜಗುಲಿ ಈ ಎಲ್ಲರೂ ಒತ್ತಾಯ ಮಾಡಿದ್ದರಿಂದ ನಾನೇಕೆ ರಾಜೀನಾಮೆ ನೀಡಲಿ, ಇನ್ನೂ ಅಧ್ಯಕ್ಷ ಅವಧಿ ಮುಗಿದಿಲ್ಲ, ನಿಮಗೆ ಬೇಕಾದ ಸರ್ಕಾರದ ಸೌಲಭ್ಯಗಳನ್ನು ನೀಡಿದ್ದೇನೆ ಎಂದು ಗ್ರಾ.ಪಂ ಅಧ್ಯಕ್ಷ ದ್ಯಾವಣ್ಣ ಹೇಳಿದ್ದರಿಂದ ನೀನು ರಾಜೀನಾಮೆ ಕೊಡದಿದ್ದರೆ ನಿನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರಿಂದ ಕೊನಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು 2024 ಅಕ್ಟೋಬರ್ 24ರಂದು ಅಧ್ಯಕ್ಷ ಸ್ಥಾನಕ್ಕೆ ದ್ಯಾವಣ್ಣ ರಾಜೀನಾಮೆ ನೀಡಿದ್ದರು.

https://suddiduniya.com/storage/2024/10/VID-20200412-WA0090.mp4

ರಾಜೀನಾಮೆ ನೀಡಿದರೂ ನಿಲ್ಲದ ಬೆದರಿಕೆ :

ಅಕ್ಟೋಬರ್ 26ರಂದು ಸಂಜೆ 6ಕ್ಕೆ ಅಮರೇಶ ಹುಬ್ಬಳ್ಳಿ ತಮ್ಮ ಮನೆಗೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದ್ಯಾವಣ್ಣನನ್ನು ಮನೆಗೆ ಕರೆಯಿಸಿ, ನೀನು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ಸು ಪಡೆಯಬಾರದು, ನಮ್ಮ ಜೊತೆಗೆ ಬರಬೇಕು ಎಂದು ಹೇಳಿದ್ದರಿಂದ ಇದಕ್ಕೆ ಒಪ್ಪದ ದ್ಯಾವಣ್ಣ ಮತ್ತು ಅಮರೇಶ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಆಗಿರುವ ಅವಮಾನ ಮನನೊಂದು ದ್ಯಾವಣ್ಣ ತನ್ನ ಸಂಬಂಧಿಕರ ಜಮೀನಿನಲ್ಲಿದ್ದ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಸಾವುನ್ನಪ್ಪಿದ್ದಾನೆ. ತನ್ನ ತಂದೆ ಸಾವಿಗೆ ಆರು ಜನರೇ ಕಾರಣ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ದ್ಯಾವಣ್ಣ ಮಗ ಸೋಮಲಿಂಗಪ್ಪ ನೀಡಿದ ದೂರಿನ್ವಯ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಿಸಲಾಗಿದೆ.

Suddiduniya.com

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!
Exit mobile version