ವಿನಾಕಾರಣ ಕಿರುಕುಳ ನೀಡಿದ ವ್ಯವಸ್ಥಾಪಕರ ವಿರುದ್ಧ ಆಕ್ರೋಶ
ಲಿಂಗಸುಗೂರು : ಸ್ಥಳೀಯ ಸಾರಿಗೆ ಘಟಕದ ಸಿಬ್ಬಂದಿಗಳಿಗೆ ವಿನಾಕಾರಣ ನೋಟಿಸ್ ನೀಡಿ, ಅಮಾನತ್ ಮಾಡುತ್ತಾ ಸಿಬ್ಬಂದಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ರಾಹುಲ್ ವನಸೂರೆ ಅವರನ್ನು ಸೇವೆಯಿಂದ ಅಮಾನತ್ ಮಾಡಬೇಕೆಂದು (Suspend demand) ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಚಿವ ಎನ್.ಎಸ್.ಬೋಸ್‍ರಾಜ್ ಅವರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಸಾರಿಗೆ ಘಟಕದ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ ಘಟಕದ ವ್ಯವಸ್ಥಾಪಕರು ಸರ್ವಾಧಿಕಾರಿ ಧೋರಣೆ ನೀತಿ ಅನುಸರಿಯುತ್ತಿದ್ದಾರೆ. ಸಣ್ಣ ಪುಟ್ಟ ಕಾರಣಗಳಿಗೆ ಸಿಬ್ಬಂದಿಗಳಿಗೆ ನೋಟಿಸ್ ನೀಡಿ ಅವರನ್ನು ಅಮಾನತ್ ಮಾಡುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಮಾನಸಿಕ ಕಿರುಕುಳ ನೀಡುವ ಪರಂಪರೆ ಮುಂದುವರಿಸಿಕೊಂಡು ಹೊರಟಿದ್ದಾರೆ.
25 ಸಿಬ್ಬಂದಿಗಳನ್ನು ಅಮಾನತ್ ಮಾಡಿದ ವ್ಯವಸ್ಥಾಪಕ :
ರಾಹುಲ್ ವನಸೂರೆ ಘಟಕದ ವ್ಯವಸ್ಥಾಪಕರಾಗಿ ಇಲ್ಲಿಗೆ ಬಂದಾಗಿನಿಂದ ಇಲ್ಲಿವರಿಗೂ 25 ಕ್ಕೂ ಅಧಿಕ ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಅವರನ್ನು ಸೇವೆಯಿಂದ ಅಮಾನತ್ ಮಾಡಿಸಿದ ಕೀರ್ತಿ ಇವರಿಗೆ ಸಲ್ಲಿಸುತ್ತದೆ..!!, ತಮ್ಮ ಹಂತದಲ್ಲಿಯೇ ಸಮಸ್ಯೆ ಪರಿಹರಿಸಿಕೊಳ್ಳದೇ ಏಕಾಏಕಿಯಾಗಿ ಅಮಾನತ್ ಗೆ (Suspend demand) ಶಿಫಾರಸ್ಸು ಮಾಡುವ ಮೂಲಕ ಸಿಬ್ಬಂದಿಗಳ ಮಾನಸಿಕ ನೆಮ್ಮದಿಗೆ ಭಂಗ ತರುವ ಕೆಲಸ ನಿರಂತರವಾಗಿದೆ ಮಾಡುತ್ತಾ ಬಂದಿದ್ದಾರೆ.
ಹಿಂಬಾಗಿಲಿನಿಂದ ಹಣ ವಸೂಲಿ :
ಸಿಬ್ಬಂದಿಗಳು ಪುನಾಃ ಕೆಲಸಕ್ಕೆ ಹಾಜರಾಗಲು ಮೇಲಾಧಿಕಾರಿಗಳು ಹಾಗೂ ಘಟಕದ ವ್ಯವಸ್ಥಾಪಕರಿಗೆ ಇಂತಿಷ್ಟು ಹಣ ನೀಡಲೇಬೇಕಾಗುತ್ತಿದೆ. ಸಿಬ್ಬಂದಿಗಳನ್ನು ಅಮಾನತ್ ಮಾಡುವುದು ಹಾಗೂ ಅಮಾನತ್ ರದ್ದುಗೊಳಿಸುವದಕ್ಕೂ ಮತ್ತು ಇದೇ ಡಿಪೋಕ್ಕೆ ಮತ್ತೆ ಆರ್ಡರ್ ಹಾಕಬೇಕಾದರೆ ಪ್ರತ್ಯೇಕವಾಗಿ ಹಣ ಪಡೆಯುತ್ತಾರೆ. ಇದರಲ್ಲಿ ಮೇಲಾಧಿಕಾರಿ ಹಾಗೂ ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕರ ನಡುವೆ ಶೇರು ಹಂಚಿಕೆಯಾಗುತ್ತಿದೆ ಎಂದು ಕರವೇ ಅಧ್ಯಕ್ಷ ಜಿಲಾನಿ ಪಾಶಾ ಆರೋಪಿಸಿದ್ದಾರೆ.
ಗುಜರಿ ಗಾಡಿಗಳಿಂದ ಕೆಎಂಪಿಎಲ್ ತರಲು ಒತ್ತಡ :
ಘಟಕದಲ್ಲಿ ಗುಜರಿಗೆ ಹಾಕಬೇಕಾದ ಬಸ್‍ಗಳನ್ನು ಇನ್ನೂ ಓಡಿಸಲಾಗುತ್ತಿದೆ. ಎಲ್ಲಿಂದರಲ್ಲಿ ಕೆಟ್ಟು ನಿಲ್ಲುವ ಬಸ್‍ಗಳನ್ನು ಓಡಿಸಿ ಕೆಎಂಪಿಎಲ್ ಹೆಚ್ಚು ತರುವಂತೆ ಒತ್ತಡ ಚಾಲಕರಿಗೆ ಒತ್ತಡ ತರುವುದು, ತರದಿದ್ದರೆ ಅವರಿಗೆ ನೋಟಿಸ್ ನೀಡಿ ಅಮಾನತ್ ಮಾಡಿ ಚಾಲಕ ಹಾಗೂ ಆತನ ಕುಟಂಬಕ್ಕೆ ಮಾನಸಿಕ ಹಿಂಸೆ ನೀಡುತ್ತಿರುವ ಘಟಕದ ವ್ಯವಸ್ಥಾಪಕ ರಾಹುಲ್ ಅವರನ್ನು ಸೇವೆಯಿಂದ ಅಮಾನತ್ ಮಾಡಿ ಇಲ್ಲವೇ ಬೇರೆಡೆ ವರ್ಗ ಮಾಡುವಂತೆ ಆಗ್ರಹಿಸಿದರು.
ಸಾರಿಗೆ ಘಟಕದ ಸಿಬ್ಬಂದಿಗಳಿಗೆ ಕಿರುಕುಳ ನೀಡದೇ ವಿಶ್ವಾಸಗಳಿಸಿ ಕೆಲಸ ಮಾಡುವ ಅಧಿಕಾರಿಯನ್ನು ಈ ಘಟಕಕ್ಕೆ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
:ಈ ಸುದ್ದಿನೂ ಓದಿ
https://suddiduniya.com/manager-harassment/ ಮ್ಯಾನೇಜರ್ ಕಿರುಕುಳ, ಡಿಪೋ ಎದುರೇ ಆತ್ಮಹತ್ಯೆಗೆ ಯತ್ನ
ಹೂಲಗೇರಿಗೂ ಮನವಿ
ಸಾರಿಗೆ ಘಟಕದ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಘಟಕದ ವ್ಯವಸ್ಥಾಪಕ ರಾಹುಲ್ ಅವರನ್ನು ಅಮಾನತ್ ಮಾಡುವಂತೆ ಸಾರಿಗೆ ಸಚಿವರಿಗೆ ಒತ್ತಡ ಹಾಕುವಂತೆ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಕರವೇ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ, ಹನುಮಂತ ನಾಯಕ, ಅಜೀಜ್ ಪಾಶಾ, ಸೇರಿದಂತೆ ಅನೇಕರಿದ್ದರು.