ಸ್ವಚ್ಛ ಲಿಂಗಸುಗೂರಿಗೆ ಸಂಕಲ್ಪ ಅಗತ್ಯ : ನ್ಯಾ.ಮಂಜುಳಾ
ಲಿ0ಗಸುಗೂರು : ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕಿ ಪರಿಸರ ಹಾಳುವುದುನ್ನು ಬಿಟ್ಟು ಸ್ವಚ್ಛ ಲಿಂಗಸುಗೂರು ಮಾಡುವ ಬಗ್ಗೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಸ್ಥಳೀಯ ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಉಂಡಿ ಮಂಜುಳಾ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರಾಷ್ಟಿಯ ಸ್ವಚ್ಛತಾ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದ ಅವರು, ಸ್ವಚ್ಛತೆ ಕಾಪಾಡುವುದು ಕೇವಲ ಪೌರ ಕಾರ್ಮಿಕರ ಕೆಲಸವಲ್ಲ, ಕಸ ಸಂಗ್ರಹಣೆಗಾಗಿ ಮನೆ ಮನೆಗೆ ಸ್ಥಳೀಯ ಪುರಸಭೆಯಿಂದ ವಾಹನ ತಿರುಗಾಡುತ್ತಿವೆ, ಆದರೆ ವಾಹನ ಬಂದಾಗ ಕಸ ಹಾಕದೇ ವಾಹನ ಹೋದ ಮೇಲೆ ರಸ್ತೆ ಮೇಲೆ ಕಸ ಹಾಕುವ ಕೆಟ್ಟ ಪದ್ಧತಿ ಬಿಡುಬೇಕು. ಮನೆ ಸ್ವಚ್ಛ ಇಡಬೇಕು ಮನೆ ನಂತರ ಸುತ್ತಮುತ್ತಲಿನ ಪರಿಸರ ಸ್ವಚ್ಛ ಇಡಬೇಕು ಸಹಕಾರ ನೀಡಬೇಕು. ಸ್ವಚ್ಛತೆ ಅಲ್ಲಿ ಸದೃಢ ಆರೋಗ್ಯ ಇರುತ್ತೆ, ಕೊರೊನಾ ಬಂದ ಸಂದರ್ಭದಲ್ಲಿ ಸ್ಯಾನಿಟೈಸರ್ ಹಾಕಿ ಕೈ ತೊಳೆದುಕೊಂಡು ನಾವೆಲ್ಲರೂ ಆರೋಗ್ಯ ಕಾಪಾಡುವ ಕೆಲಸ ಮಾಡಿದ್ದೇವೆ, ಅದೇ ರೀತಿ ಕಸದ ವಾಹನಗಳಿಗೆ ಕಸ ಹಾಕಿ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗಾಗಿ ಪೌರ ಕಾರ್ಮಿಕರಿಗೆ ಸಹಕಾರ ನೀಡಬೇಕು. ಸ್ಥಳೀಯ ಪುರಸಭೆ ಪೌರ ಕಾರ್ಮಿಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆ ಎನ್ನುವುದು ಸೇವೆ ಎಂದು ಭಾವಿಸಿ ಸ್ವಚ್ಛ ಲಿಂಗಸುಗೂರಿಗೆ ಸಂಕಲ್ಪ ಅಗತ್ಯವಾಗಿ(Swachh lingasugura sankalpa is necessary) ಮಾಡಬೇಕೆಂದರು.
ಸ್ವಚ ಭಾರತ ಅಭಿಯಾನ
ಜಾಗೃತಿ ಜಾಥಾ :
ಸ್ವಚ್ಛತಾ ಅಭಿಯಾನ ಅಂಗವಾಗಿ ಪಟ್ಟಣದ ಕೋರ್ಟ್ನಿಂದ ಆರಂಭಗೊ0ಡ ಜಾಗೃತಿ ಜಾಥಾ, ಐಎಂಎ ಹಾಲ್,ಬಸ್ ನಿಲ್ದಾಣ ವೃತ್ತ ಹಾಗೂ ಬಸ್ ನಿಲ್ದಾಣದಲ್ಲಿ ಜಾಥಾ ನಡೆಸಲಾಯಿತು. ಬಸ್ ನಿಲ್ದಾಣದಲ್ಲಿ ಅಸ್ವಚ್ಛತೆ ಕಂಡ ನ್ಯಾಯಾಧೀಶೆ ಉಂಡಿ ಮಂಜುಳಾ ಅಲ್ಲಿದ್ದ ಪ್ರಯಾಣಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೆ ಬಸ್ ನಿಲ್ದಾಣ, ರಸ್ತೆ, ಆಸ್ಪತ್ರೆ, ಉದ್ಯಾನವನ ಸೇರಿದಂತೆ ಇನ್ನಿತರ ಸ್ಥಳಗಳು ಸಾರ್ವಜನಿಕರು ಹೆಚ್ಚು ಬಳಸುವ ಸ್ಥಳವಾಗಿದೆ ಸಾರ್ವಜನಿಕರು ತ್ಯಾಜ್ಯಗಳನ್ನು ಹಾಕದೇ ಸ್ವಚ್ಛತೆ ಕಾಪಾಡಬೇಕೆಂದರು.