suddiduniya.com

Dussehra festival:ಛಾವಣಿ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆ

ಛಾವಣಿ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆ

ಲಿಂಗಸುಗೂರಿನಲ್ಲಿ  ಭವ್ಯಶೋಭಾಯಾತ್ರೆ

ಲಿಂಗಸುಗೂರು : ಛಾವಣಿ ದಸರಾ ಉತ್ಸವ(Dussehra festival) ಸಮಿತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಛಾವಣಿ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆಳೆಯಲಾಯಿತು. ಇಂದು ಭವ್ಯಶೋಭಾ ಯಾತ್ರೆ ನಡೆಸುವ ಮೂಲಕ  ಅದ್ಧೂರಿ ದಸರಾ ಸಂಭ್ರಮಕ್ಕೆ ತೆರೆಳೆಯಲಾಯಿತು.

ಛಾವಣಿ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆ
ನಾಡದೇವಿ ಮೂರ್ತಿ ಮೆರವಣಿಗೆ

ನವರಾತ್ರಿ ಅಂಗವಾಗಿ ಪಟ್ಟಣದ ದೊಡ್ಡ ಹನುಮಂತ ದೇವರ ದೇವಸ್ಥಾನದ ಮುಂಭಾಗದಲ್ಲಿ ಪ್ರತಿದಿನವೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ಕೊನೆ ದಿನವಾಗಿದ್ದರಿಂದ ಪಟ್ಟಣದ ಬಸವಸಾಗರ ವೃತ್ತ ಬಳಿಯ ಗೋಂದಳಿ ಸಮುದಾಯ ಭವನದಿಂದ ನಾಡದೇವಿ ಮೂರ್ತಿ ಮೆರವಣಿಗೆ ಚಾಲನೆ ನೀಡಲಾಯಿತು. ನಾನಾ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಗಡಿಯಾರ ವೃತ್ತ, ಸರ್ಕಾರಿ ಪಿಯು ಕಾಲೇಜು ಮುಖಾಂತರ ಕೋರ್ಟ್ ಹತ್ತಿರ ಇರುವ ಬನ್ನಿಮಂಟಪದವರಿಗೆ ನಾಡದೇವಿ ಮೂರ್ತಿ ಮೆರವಣಿಗೆ ನಡೆಸಲಾಯಿತು.

ಕಲಾತಂಡಗಳ ಪ್ರದರ್ಶನ :

ಕೇರಳದ ಚಂಡಿ ಮೇಳ ಸೇರಿದಂತೆ ಅನೇಕ ಜಾನಪದ ಕಲಾತಂಡಗಳು ನಾಡದೇವಿ ಮೆರವಣಿಗೆ ಉದ್ದಕ್ಕೂ ನೀಡಿದ ಕಲಾಪ್ರದರ್ಶನ ನೆರೆದಿದ್ದ ಸಾರ್ವಜನಿಕರ ಮನಸೂರೆಗೊಳ್ಳುವಂತೆ ಮಾಡಿತು.ಇದರೊಂದಿಗೆ ಛಾವಣಿ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆ ಳೆಯಲಾಯಿತು.

ಈ ವೇಳೆಯಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ,ಮುಖಂಡರಾದ ಗುಂಡಪ್ಪ ನಾಯಕ, ಮಲ್ಲಣ್ಣ ವಾರದ್, ಛಾವಣಿ ದಸರಾ ಉತ್ಸವ ಸಮಿತಿ ಸಂಚಾಲಕ ಮಂಜುನಾಥ್ ಕಾಮಿನ್‍, ಸಮಿತಿ ಪ್ರಮುಖರಾದ ಅರುಣ್ ಖಂಡೇಲಾಲ್,ಸುದೀರ್ ಶ್ರೀವಾಸ್ತವ, ಶರಣಬಸವ ವಾರದ್, ಅಶೋಕ ದಿಗ್ಗಾವಿ, ಬಸವರಾಜ ಯಲಗಲದಿನ್ನಿ, ಪರಶುರಾಮ ಕೆಂಭಾವಿ, ಚೆನ್ನಬಸವ ಹಿರೇಮಠ, ರಾಜು ತಂಬಾಕೆ ಸೇರಿದಂತೆ ಅನೇಕರಿದ್ದರು.

ಛಾವಣಿ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆ

ಸಿದ್ಧರಾಮೇಶ್ವರ ಗುರುಮಠದಲ್ಲಿ ಚಂಡಿಕಾಹೋಮ :

ಸಿದ್ಧರಾಮೇಶ್ವರ ಗುರುಮಠದಲ್ಲಿ ಚಂಡಿಕಾಹೋಮ :

ತಾಲೂಕಿನ ಯರಡೋಣಾ ಸಿದ್ಧರಾಮೇಶ್ವರ ಗುರುಮಠದಲ್ಲಿ ಶ್ರೀಮಠದ ಪೀಠಾಧಿಪತಿ ಮುರುಘೇಂದ್ರ ಶಿವಯೋಗಿಗಳ ಸಾನಿಧ್ಯದಲ್ಲಿ ನವರಾತ್ರಿ ಅಂಗವಾಗಿ ಅಮರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಗಂಗಾಧರಯ್ಯ ಸ್ವಾಮಿ ನೇತ್ರತ್ವದಲ್ಲಿ ಲೋಕ ಕಲ್ಯಾಣಾರ್ಥಕವಾಗಿ ಚಂಡಿಕಾಹೋಮ ಮಾಡಲಾಯಿತು.

ಹುಲಿಗುಡ್ಡದ ಗದ್ದೆಮ್ಮ ದೇವಿ ಜಾತ್ರಾಮಹೋತ್ಸವಕ್ಕೆ ಚಾಲನೆ :

ಹುಲಿಗುಡ್ಡದ ಗದ್ದೆಮ್ಮ ದೇವಿ ಜಾತ್ರಾಮಹೋತ್ಸವಕ್ಕೆ ಚಾಲನೆ

ಲಿಂಗಸುಗೂರಿನ ಪುರಸಭೆ ವ್ಯಾಪ್ತಿಯ ಹುಲಿಗುಡ್ಡದ ಗದ್ದೆಮ್ಮ ದೇವಿಯ 22ನೇ ಜಾತ್ರಾ ಮಹೋತ್ಸವದ ಅಂಗವಾಗಿ 101 ಕುಂಭಗಳ ಮೆರವಣಿಗೆಗೆ ಖ್ಯಾತ ವೈದ್ಯರಾದ ನಾಗನಗೌಡ ಪಾಟೀಲ್ ಬಯ್ಯಾಪುರ ಚಾಲನೆ ನೀಡಿದರು.

ಲಿಂಗಸುಗೂರು ಪಟ್ಟಣದ ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಕುಂಭಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಸಾಗಿ ಹುಲಿಗುಡ್ಡದ ಗದ್ದಮ್ಮದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ಹುನಕುಂಟಿ ಶರಣಯ್ಯ ತಾತಾನವರ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ನಡೆದವು,ಈ ವೇಳೆ ಬ್ಲಾಕ್‍ಕಾಂಗ್ರೆಸ್‍ಮಾಜಿ ಅಧ್ಯಕ್ಷ ಭೂಪನಗೌಡ ಕರಡಕಲ್‍, ಮುಖಂಡರಾದ ಪಾಮಯ್ಯ ಮುರಾರಿ, ಶಶಿಧರಗೌಡ ಆಶಿಹಾಳ್, ಚೆನ್ನಾರೆಡ್ಡಿ ಬಿರಾದರ್, ಸಿದ್ದಣ್ಣ ಚನ್ನೂರ್ಕರ್ ,ಯಲ್ಲನಗೌಡ ಪಾಟೀಲ್, ಬಸವರಾಜ್ ಕರಿಗುಡ್ಡ,  ಕರಸ್ಥಳಪ್ಪ ಬಡಿಗೇರ್, ಮಹೇಂದ್ರ ಸ್ವಾಮಿ, ನಿರುಪಾದಿ ಹಿರೇಮಠ, ಸುಗುರಯ್ಯ ಸ್ವಾಮಿ,  ಶ್ರೀಕಾಂತ್ ಪಾಟೀಲ್, ನಾಗರಾಜ  ತಿಪ್ಪಣ್ಣ ಹಕ್ಕಿಹಾಳ, ಮಹಿಬೂಬ್ ಸಾಬ್, ಮುಲ್ಲಾ, ನಾಗರಾಜ್ ಹಗರಗೊಂಡ, ಶಿವಕಾಂತ್ ಹಡಪದ, ಮುತ್ತಣ್ಣ, ಅಲ್ವಿ ರಂಗಪ್ಪ ಬೋವಿ, ರವಿ ಬೋವಿ, ಕಾಳಪ್ಪ ಬಡಿಗೇರ್ , ಗದ್ದೆಮ್ಮ ದೇವಿ ದೇವಸ್ಥಾನ ಸಮಿತಿ ಸರ್ವ ಸದಸ್ಯರು ಭಾಗಿಯಾಗಿದ್ದರು.

ಜೂಲಗುಡ್ಡದಲ್ಲಿ ನವರಾತ್ರಿ ಆಚರಣೆ :

ತಾಲೂಕಿನ ಜೂಲಗುಡ್ಡದ ಜಂಬಯ್ಯತಾತನ ಮಠದ ಪೀಠಾಧಿಪತಿ ಬಸಯ್ಯತಾತ ಜೂಲಗುಡ್ಡ ಇವರು ಪ್ರತಿ ವರ್ಷದಂತೆ ನಿರಂತರ 28 ವರ್ಷಗಳಿಂದ ನವರಾತ್ರಿ ಅಂಗವಾಗಿ 9 ದಿನಗಳ ಕಾಲ ನಿರಾಹಾರವಾಗಿ ಉಪವಾಸ ವ್ರತ ಮಾಡಿ, ಶಾಂಭಾವಿ ದೇವಿ ಪುರಾಣ ಪಠಣ ಮಾಡಿ ನಾಡಿನ ಒಳಿತಿಗೆ ಪ್ರಾರ್ಥಿಸಿ, ಸಾವಿರಾರು ಭಕ್ತರ ಸಕಲ ಇಷ್ಟಾರ್ಥ ಸಿದ್ದಿಗೆ ಚಾಮುಂಡೇಶ್ವರಿ ತಾಯಿ ಬೆಳಕಾಗಲೆಂದು ನವರಾತ್ರಿ ದಿನ ಅನ್ನ ದಾಸೋಹ ನೆರವೇರಿಸಿದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!