ಲಿಂಗಸುಗೂರಿನಲ್ಲಿ ಬೀಕರ ದುರಂತ :
ಲಿಂಗಸುಗೂರು : ಹೊಲದ ಬದುವಿನಲ್ಲಿ ಹಾಕಲಾಗಿದ್ದ ಬೃಹತ್ ಬಂಡೆ ( stone fall ) ಒಂದೇ ಕುಟಂಬದ ಮೂವರು ದುರ್ಮರಣಕ್ಕೀಡಾದ ಘೋರ ದುರಂತ ತಾಲೂಕಿನ ಗೌಡೂರು ತಾಂಡದಲ್ಲಿ ಇಂದು ಸಂಜೆ ನಡೆದಿದೆ.
ತಾಲೂಕಿನ ಗೌಡೂರು ತಾಂಡದಲ್ಲಿ ತಮ್ಮ ಜಮೀನಿನಲ್ಲಿ ಬದುವಿನಲ್ಲಿ ಹಾಕಲಾಗಿದ್ದ ಕಲ್ಲುಗಳ ಮೇಲೆ ಕುಳಿತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ (stone fall )ಕಲ್ಲುಗಳು ಉರುಳಿ ಬಿದ್ದು ಮಂಜುನಾಥ,(9) ವೈಶಾಲಿ (6) ಸ್ಥಳದಲ್ಲಿಯೇ ಸಾವುನಪ್ಪಿದ್ದಾರೆ. ರಾಘವೇಂದ್ರ ಮಾನಪ್ಪ (23) ಲಿಂಗಸುಗೂರು ಆಸ್ಪತ್ರೆಯಲ್ಲಿ ಸಾವುನ್ನಪ್ಪಿದ್ದಾನೆ.
ಯಮನಾಗಿ ಬಂದ ಕಲ್ಲುಗಳು :
ಶಾಲೆಗಳಿಗೆ ರಜೆ ಇರುವುದರಿಂದ ಅಣ್ಣ ತಂಗಿಯಾದ ಮಂಜುನಾಥ, ವೈಶಾಲಿ ಹೊಲದಲ್ಲಿ ಹಾಕಿದ್ದ ಬಂಡೆಗಳ ಮೇಲೆ ಎಂದಿನಂತೆ ಆಟವಾಡುತ್ತಿದ್ದರು ಹಾಗೂ ಸಹೋದರ ಸಂಬಂಧಿ ರಾಘವೇಂದ್ರ ಮೊಬೈಲ್ ನೋಡುತ್ತಾ ಕುಳಿತಿದ್ದ ಸಂದರ್ಭದಲ್ಲಿ ಮಳೆಬಂದಿದ್ದರಿಂದ ಕಲ್ಲುಗಳ ಬುಡದಲ್ಲಿ ಮಣ್ಣು ಹಸಿಯಾಗಿ ಬಂಡೆಗಳು ಏಕಾಏಕಿಯಾಗಿ (stone fall ) ಉರುಳಿ ಬಿದ್ದು ಮಕ್ಕಳ ಜೀರಾಟ, ಹಾರಾಟ ಕೇಳಿ ಅಲ್ಲಿಯೇ ಇದ್ದ ಪೋಷಕರು ಓಡೋಡಿ ಬಂದು ನೋಡುವರಷ್ಟರಲ್ಲಿ ಸ್ಥಳದಲ್ಲಿಯೇ ಇಬ್ಬರ ಮಕ್ಕಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ರಾಘವೇಂದ್ರವನ್ನು ಹೇಗಾದರೆ ಕಲ್ಲುಗಳಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ ಕಲ್ಲುಗಳು ಬಿದ್ದು ಗಂಭೀರವಾಗಿ ಪೆಟ್ಟುಬಿದ್ದರಿಂದ ಆಸ್ಪತ್ರೆಯಲ್ಲಿ ಸಾವುನ್ನಪ್ಪಿದ್ದಾನೆ.
ಕಲ್ಲಲ್ಲಿ ಕಮರಿ ಹೋದ ಭಾವಿ ಸೈನಿಕನ ಕನಸು :
ರಾಘವೇಂದ್ರ ತಂದೆ ಮಾನಪ್ಪ ರಾಠೋಡ್ ಇತ್ತೀಚಿಗೆ ಬಾರತೀಯ ಸೇನೆಗೆ ಆಯ್ಕೆಯಾಗಿದ್ದ, ಇನ್ನೇನು ಸೇನೆಗೆ ನೇಮಕಾತಿ ಆದೇಶ ಪ್ರತಿ ಕೈಗೆ ಬರುವ ಮೊದಲೇ ಯಮನಸ್ವರೂಪದಲ್ಲಿ ಬಂದ ಕಲ್ಲುಗಳು ಆತನ ಹಾಗೂ ಆತನ ದೇಶ ಸೇವೆ ಮಾಡುವ ಕನಸುಗಳ ಮೇಲೆ ಬಿದ್ದು ಕೊನೆಗಾಣಿಸಿದಂತಾಗಿದೆ. ಮೂವರು ದುರ್ಮರಣ
ಮುಗಿಲು ಮುಟ್ಟಿದ ಆಕ್ರಂದನ :
ಆಟವಾಡುತ್ತಿದ್ದ ಮಕ್ಕಳು ಕಣ್ಣೆದರು ಸಾವುನ್ನಪ್ಪಿದ್ದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಚಿಕ್ಕ ವಯಸ್ಸಿನ ಮಕ್ಕಳನ್ನು ಸಾವುನ್ನಪ್ಪಿದ ಘಟನೆಯಿಂದಾಗಿ ಇಡೀ ಗೌಡೂರು ತಾಂಡವೇ ಸಶ್ಮಾನ ಮೌನ ಆವರಿಸಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕದಳ :
ಸುದ್ದಿ ತಿಳಿಯುತ್ತಿದ್ದಂತೆ ಲಿಂಗಸುಗೂರು ಅಗ್ನಿ ಶಾಮುಕದಳದ ಸಿಬ್ಬಂದಿಗಳು ಹಾಗೂ ಹಟ್ಟಿ ಸಿಪಿಐ ಗೌಡೂರು ತಾಂಡಕ್ಕೆ ದೌಡಾಯಿಸಿ ಮಕ್ಕಳ ಮೇಲೆ ಬಿದ್ದು ಕಲ್ಲುಗಳ ತೆರವುಗೊಳಿಸಿದ್ದಾರೆ.