suddiduniya.com

TMC GB Meeting : ವಾರ್ಡಿನ ಸಮಸ್ಯೆ ಹೇಳಿದ ಸದಸ್ಯರ ನಂಬರನ್ನೇ ಬ್ಲಾಕ್ ಲಿಸ್ಟ್ ಗೆ ಹಾಕಿದ ಸಿಬ್ಬಂದಿ..!!

TMC GB Meeting

ಲಿಂಗಸುಗೂರು : ತಮ್ಮ ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೇಳಿದ ಪುರಸಭೆ ಸದಸ್ಯೆಯರ ಪೋನ್ ನಂಬರನ್ನೇ ಬ್ಲಾಕ್ ಲಿಸ್ಟ್ ಗೆ ಹಾಕಿ ಚುನಾಯಿತ ಸದಸ್ಯರಿಗೆ ಅಗೌರವ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯರು ಒಕ್ಕೂಲರದ ಕೂಗು ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ  (TMC GB Meeting )ಕೇಳಿಬಂತು.

TMC GB Meeting

ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ( TMC GB Meeting )18ನೇ ವಾರ್ಡಿನ ಸದಸ್ಯೆ ಸುನಿತಾ ಕೆಂಭಾವಿ, ನಾನು ಕೂಡಾ ಈ ಹಿಂದಿನ ಅವಧಿಯಲ್ಲಿ ಪುರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ನನ್ನ ಆಡಳಿತದ ಅವಧಿಯಲ್ಲಿ ಎರಡ್ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಿದ್ದೇನೆ ಆದರೆ ಈಗ ನಮ್ಮ ವಾರ್ಡಿನಲ್ಲಿ ನಾಲ್ಕೈದು  ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತೆ, 8 ದಿನಕ್ಕೊಮ್ಮೆ ಕಸ ವಿಲೇವಾರಿ ವಾಹನ ಸಂಚಾರ ಮಾಡುತ್ತೆ, ಪುರಸಭೆ ಅಧ್ಯಕ್ಷರು ಸೂಚನೆ ನೀಡಿದ ಮೇಲೆ ಕೆಲಸ ಮಾಡಬೇಕಾದ ಕರ್ತವ್ಯ ಸಿಬ್ಬಂದಿಗಳದ್ದು, ಕೆಲಸನೇ ಮಾಡದೇ ಇದ್ದರೆ ಸಭೆ ಮಾಡಲು ಅರ್ಥವೇ ಇಲ್ಲ, ನೀರು ಪೂರೈಕೆ ಮಾಡಲು ಆಗದಿದ್ದರೆ ಪುರಸಭೆವತಿಯಿಂದ ಮನೆಗೊಂದು ಬೋರವೆಲ್ ಹಾಕಿಸಿ ಎಂದು ಆಡಳಿತದ ವಿರುದ್ಧ ಗರಂ ಆದರು.

ಸಮಸ್ಯೆಗಳ ಬಗ್ಗೆ ನಾವೇನಾದರೂ ಸಿಬ್ಬಂದಿಗಳಿಗೆ ಪೋನ್ ಮಾಡಿ ಸಮಸ್ಯೆಗಳು ಹೇಳಿದರೆ ಅವರು ಪೋನ್ ರಿಸೀವ್ ಮಾಡೋಲ್ಲ, ಎರಡ್ಮೂರು ಬಾರಿ ಕಾಲ್ ಮಾಡಿದರೆ ನಮ್ಮ ನಂಬರ್ ನ್ನೇ ಬ್ಲಾಕ್ ಲಿಸ್ಟ್ ಗೆ ಹಾಕುತ್ತಾರೆ. ನಾವು ಜನರಿಂದ ಆಯ್ಕೆಯಾದವರು ವಾರ್ಡಿನ ಸಮಸ್ಯೆಗಳಿಗೆ ಜನರಿಗೆ ನಾವು ಉತ್ತರ ನೀಡಬೇಕೇ ವಿನಾಃ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಅಲ್ಲ ಎಂದು ಮುಖ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿ ಹಿರಿಯ ಸದಸ್ಯ ಮಹ್ಮದ್ ರಫಿ, ದೊಡ್ಡನಗೌಡ ಹೊಸಮನಿ ಚುನಾಯಿತ ಸದಸ್ಯರ ಪೋನ್ ನಂಬರ್ ಬ್ಲಾಕ್ ಲಿಸ್ಟ್ ಹಾಕಿದ್ದು ಸರಿಯಲ್ಲ, ಸದಸ್ಯರ ಹೇಳುವ ಕೆಲಸಕ್ಕೆ ಕೂಡಲೇ ಸ್ಪಂದಿಸಬೇಕು, ಬ್ಲಾಕ್ ಲಿಸ್ಟ್ ಗೆ ಹಾಕಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

TMC GB Meeting

ಸಭೆಯಲ್ಲಿ ಸದಸ್ಯ ರುದ್ರಪ್ಪ ಬ್ಯಾಗಿ, ಪಟ್ಟಣದ ಬಸ್ ನಿಲ್ದಾಣದ ಬಳಿ ಮತ್ತು ಪುರಸಭೆ ಕಚೇರಿ ಎದುರು, ಪಕ್ಕದಲ್ಲಿ ಪುರಸಭೆವತಿಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಹರಾಜು ಮಾಡದೇ ಹತ್ತಾರು ವರ್ಷಗಳೇ ಕಳೆದಿವೆ. ಕಡಿಮೆ ದರಕ್ಕೆ ಬಾಡಿಗೆ ನೀಡಲಾಗಿದೆ ಇದರಿಂದ ಪುರಸಭೆ ಆದಾಯಕ್ಕೆ ಕೊಕ್ಕೆ ಬೀಳುವಂತೆ ಆಗಿದೆ.ಮೊದಲು ಖಾಲಿ ಮಾಡಿಸಿ ನಂತರ ದುರಸ್ಥಿ ಮಾಡಿದ ನಂತರವೇ ಮಳಿಗೆಗಳ ಬಾಡಿಗೆ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಬಾಡಿಗೆದಾರರು ನ್ಯಾಯಲಯದಲ್ಲಿ ಟೆಂಡರ್ ಕರೆಯಲು ತಡೆಯಾಜ್ಞೆ ತಂದಿದ್ದರಿಂದ ನ್ಯಾಯಲಯದಲ್ಲಿ ವಿಚಾರಣೆ ನಡೆದು ಪುರಸಭೆ ಪರ ತೀರ್ಪು ಬಂದಿದೆ. ಹರಾಜು ಮಾಡಲು ನೋಟಿಫಿಕೇಶನ್ ಮಾಡುವವರಿಗೆ ಬಾಡಿಗೆದಾರರನ್ನು ತೆರವುಗೊಳಿಸಬಾರದು ಎಂದು ತೀರ್ಪು ನೀಡಿದೆ. ಈಗಾಗಿ ಈ ಮಾರ್ಚ ಅಂತ್ಯದೊಳಗೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರೀಯೆ ಮುಗಿಸಬೇಕಾಗಿದೆ.ಅಷ್ಟರೊಳಗೆ ನೋಟಿಫೀಕೇಶನ್ ಹೊರಡಿಸಿ ಮಳಿಗೆಗಳನ್ನು ಖಾಲಿ ಮಾಡಿಸಿ ಸಣ್ಣಪುಟ್ಟ ದುರಸ್ಥಿ ಮಾಡಿದ ನಂತರವೇ ಹರಾಜು ಪ್ರಕ್ರೀಯೆ ಪೂರ್ಣಗೊಳಿಸುವೆ ಎಂದು ಸಭೆಗೆ ತಿಳಿಸಿದರು.

ಪುರಸಭೆಯ ವಿವಿಧ ವಿಭಾಗದ ಸಿಬ್ಬಂದಿಗಳು ಕರೆ ಸ್ವೀಕರಿಸೋಲ್ಲ, ನೆಟ್ ವರ್ಕ ಸಮಸ್ಯೆಗಳು, ಸೇರಿದಂತೆ ಹಲವು ದೂರುಗಳ ಬಂದ ಹಿನ್ನಲೆಯಲ್ಲಿ ಸಿಬ್ಬಂದಿಗಳಿಗೆ ವಾಕಿ-ಟಾಕಿ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಸಭೆ ಗಮನಕ್ಕೆ ತಂದರು.

ಸಭೆಯಲ್ಲಿ ಸದಸ್ಯ ದೊಡ್ಡನಗೌಡ ಹೊಸಮನಿ, ವಿದ್ಯುತ್ ಸಾಮಾಗ್ರಿಗಳ ಖರೀದಿಯಲ್ಲಿ 58650 ರೂಪಾಯಿಗೆ ಸಿಗುವ ಸಾಮಾಗ್ರಿಗಳನ್ನು 99403 ರೂಪಾಯಿಗೆ ಖರೀದಿಸಲಾಗಿದೆ. ಅಂದರೆ ಸುಮಾರು 40 ಸಾವಿರ ರೂಪಾಯಿಗಳ ಸಿಬ್ಬಂದಿಗಳು ಬ್ರಷ್ಟಾಚಾರ ಮಾಡಿದ್ದಾರೆ ಎಂಬುದು ಕೋಟೆಶನ್ ಗಮನಿಸಿದರೆ ಕಾಣುತ್ತೆ, ಯಾವುದೇ ಕಾರಣಕ್ಕೂ ಈ ಬಿಲ್ ಮಾಡಬಾರದು ಎಂದು ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ದ್ವನಿಗೂಡಿಸಿದ ಸದಸ್ಯ  ಮಹ್ಮದ್ ರಫಿ, ಸಿಬ್ಬಂದಿಗಳು ವಿದ್ಯುತ್ ಖರೀದಿಯಲ್ಲಿ ನಮಗೆ 20 ಸಾವಿರ ರೂಪಾಯಿ ಉಳಿಸಿಕೊಳ್ಳುವ ಬಗ್ಗೆ ಹೆಚ್ಚಿಗೆ ಬಿಲ್ ಹಾಕಿಸಲಾಗಿದೆ ಈ ಕುರಿತು ಕೆಲವರೊಂದಿಗೆ ಸಿಬ್ಬಂದಿಗಳು ಮಾತನಾಡಿರುವ ಕಾಲ್ ರೆಕಾರ್ಡ್ ದಾಖಲೆ ನನ್ನ ಬಳಿಯಿದೆ.ಬಿಲ್ ತಡೆಹಿಡಿದು ಸಿಬ್ಬಂದಿಗಳ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿದರು.

TMC GB Meeting

2004ರಲ್ಲಿ ಪಟ್ಟಣ ಪಂಚಾಯತನ್ನು ಪುರಸಭೆಗೆ ಮೇಲ್ದರ್ಜೆಗೇರಿಸಲಾಗಿತ್ತು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಬಯ ಸದನಗಳಲ್ಲಿ ನಗರಸಭೆ ಮೇಲ್ದರ್ಜೆಗೇರಿಸುವಂತೆ ಚರ್ಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಪುರಸಭೆವತಿಯಿಂದ ನಗರಸಭೆ ಮೇಲ್ದರ್ಜೆಗೇರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಕುರಿತು ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು. ಪುರಸಭೆ ಹಳೆಯ ಕಚೇರಿ ಕಟ್ಟಡ ನವೀಕರಣ, ವಾರದ ಮಾರುಕಟ್ಟೆ ಹರಾಜು ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕುರಿತು, ಬಸ್ ನಿಲ್ದಾಣ ವೃತ್ತ ಹಾಗೂ ಬಸವಸಾಗರ ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ, ಜನಬೀಡು ಪ್ರದೇಶಗಳಲ್ಲಿ ಮೂತ್ರಾಲಯ ನಿರ್ಮಾಣ ಕುರಿತು, 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಪುರಸಭೆವತಿಯಿಂದ ಎರಡು ಲಕ್ಷ ರೂ ಆರ್ಥಿಕ ಸಹಾಯ ನೀಡಲು, ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡಗಳಿಗೆ ನಾಮಫಲಕ ಹಾಕಲು, (TMC GB Meeting )ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ, ಸದಸ್ಯರು ಹಾಗೂ ಸಿಬ್ಬಂದಿಗಳಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!