suddiduniya.com

Unauthorized flex :ಬಲಿಗಾಗಿ ಕಾದಿರುವ ಫ್ಲೆಕ್ಸ್, ಬ್ಯಾನರ್ .!!

ಲಿಂಗಸುಗೂರು : ಇದು ಜನನಿಬಿಡ ಪ್ರದೇಶ, ವಾಹನಗಳ ಓಡಾಟ ಹೆಚ್ಚು, ವಾಹನಗಳ ಚಾಲಕರಿಗೆ ರಸ್ತೆ ಕಾಣದಂತೆ ಪ್ಲೆಕ್ಸ್ ಹಾಕಿ (Unauthorized flex ) ವಾಹನ ಸವಾರರ ಹಾಗೂ ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಇದು ಪಟ್ಟಣದ ಪ್ರಮುಖ ವೃತ್ತ ಬಸ್ ನಿಲ್ದಾಣ ವೃತ್ತದ ದುಸ್ಥಿತಿ.

ಪಟ್ಟಣದ ಬಸ್ ನಿಲ್ದಾಣ ವೃತ್ತದ ಮೂಲಕ ಕಲುಬುರಗಿ, ರಾಯಚೂರು, ಬೆಂಗಳೂರು, ಮಂಗಳೂರು, ಬಾಗಲಕೋಟ ಮಾರ್ಗಗಳಿಗೆ ತೆರಳಲು ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಇದಲ್ಲದೆ ವೃತ್ತದ ನಾಲ್ಕು ಮಾರ್ಗಗಳಲ್ಲಿರುವ ವಿವಿಧ ಕಾಲೂನಿಗಳ ಜನರು ಇದೇ ವೃತ್ತದ ಮೂಲಕವೇ ತಿರುಗಾಡುತ್ತಿದ್ದಾರೆ.

Unauthorized flex

ಬಸ್ ನಿಲ್ದಾಣ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 150ಎ ಹಾದು ಹೋಗಿದ್ದರಿಂದ ಈ ಹೆದ್ದಾರಿ ಅಭಿವೃದ್ಧಿ ಪಡಿಸಿದ್ದರಿಂದ ಬಸ್ ನಿಲ್ದಾಣ ವೃತ್ತದಲ್ಲಿ ನಾಲ್ಕು ದಿಕ್ಕುಗಳಲ್ಲಿ ಸರ್ವಿಸ್ ರಸ್ತೆಗಾಗಿ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಆದರೆ ರಸ್ತೆ ವಿಭಜಕ ವಾಹನ ಸವಾರರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ವೃತ್ತದಲ್ಲಿ ನಾಲ್ಕು ವಿಭಜಕಗಳಲ್ಲಿ ಬೃಹತ್ ಆಕಾರದ ಪ್ಲೆಕ್ಸ್ ಗಳನ್ನು ಹಾಕಲಾಗುತ್ತಿದೆ. ಫ್ಲೆಕ್ಸ್ ಗಳನ್ನು ತಿಂಗಳಾನುಗಟ್ಟಲೆ ಹಾಕುತ್ತಿದ್ದರಿಂದ ವಾಹನ ಸವಾರರಿಗೆ ಮುಂದಿನ ದಾರಿ ಕಾಣದಂತೆ ಮಾಡುತ್ತಿದ್ದಾರೆ. ಬಸ್ ನಿಲ್ದಾಣ ವೃತ್ತದಲ್ಲಿ ಪ್ಲೆಕ್ಸ್, ಬ್ಯಾನರ್‍ಗಳನ್ನು ಅಡ್ಡಲಾಗಿ ಹಾಕುತ್ತಿದ್ದರಿಂದ ಅಪಘಾತಗಳಿಗೆ ಕಾರಣವಾಗಿದೆ.

ಪುರಸಭೆವತಿಯಿಂದ ಪರವಾನಿಗೆ ತೆಗೆದುಕೊಳ್ಳದೇ ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್  ಗಳನ್ನು (Unauthorized flex ) ಹಾಕಲಾಗುತ್ತಿದೆ.ಪರವಾನಿಗೆ ತೆಗೆದುಕೊಳ್ಳದೇ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿದರೂ ಇದಕ್ಕೆ ಪುರಸಭೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ, ಇದರಿಂದ ಯಾವುದೇ ಭಯವಿಲ್ಲದೆ ಫ್ಲೆಕ್ಸ್ ಗಳನ್ನು (Unauthorized flex) ಹಾಕುವ ಪದ್ಧತಿ ಎಗ್ಗಿಲ್ಲದೆ ಸಾಗುತ್ತಿದೆ. ಪುರಸಭೆ ಸಾಮಾನ್ಯ ಸಭೆಯಲ್ಲಿ ಫ್ಲೆಕ್ಸ್ ಹಾಕಲು ಇಂತಿಷ್ಟು ಶುಲ್ಕು ನಿಗದಿ ಪಡಿಸಿ ಅನುಮತಿ ನೀಡುವ ಬಗ್ಗೆ ಸಾಕಷ್ಟು ಭಾರಿ ಚರ್ಚೆ ನಡೆದರೂ ಅದು ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ, ಇದರಿಂದ ಫ್ಲೆಕ್ಸ್ ಅಳವಡಿಕೆದಾರರಿಗೆ ಯಾವುದೇ ಭೀತಿ ಇಲ್ಲದಂತಾಗಿದೆ. ಈ ಬಗ್ಗೆ ಪುರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗಿದೆ. ಮರ, ವಿದ್ಯುತ್ ಕಂಬ, ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುವ ರೀತಿಯಲ್ಲಿ ಬ್ಯಾನರ್ ಗಳನ್ನು ಅಳವಡಿಸುವಂತಿಲ್ಲ, ಆದರೆ ವಿದ್ಯುತ್ ಕಂಬಗಳಿಗೆ ಹೆಚ್ಚು ಫ್ಲೆಕ್ಸ್ ಕಟ್ಟುತ್ತಿದ್ದಾರೆ.

ಪಟ್ಟಣದ ಬಸ್ ನಿಲ್ದಾಣ ವೃತ್ತ, ಬಸವಸಾಗರ ವೃತ್ತ, ಗುಡದನಾಳ ಕ್ರಾಸ್, ಅಂಚೆ ಕಚೇರಿ ವೃತ್ತ, ಗಡಿಯಾರ ವೃತ್ತದಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸುವುದರಿಂದ ಸಾರ್ವಜನಿಕರಿಗೆ ಮತ್ತು ಸುಗಮ ಸಂಚಾರಕ್ಕೆ ವಾಹನ ಸವಾರ ಸಾಕಷ್ಟು ತೊಂದರೆ ಪಡುವಂತಾಗಿದೆ. ಈ ವೃತ್ತಗಳಲ್ಲಿ ಪ್ಲೆಕ್ಸ್‍ ಗಳನ್ನು ಅಳವಡಿಸದಂತೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಇನ್ನುಳಿದ ಕಡೆಗಳಲ್ಲಿ ಪ್ಲೆಕ್ಸ್‍ ಅಳವಡಿಸಲು ಅನುಮತಿ ನೀಡಬೇಕು.

ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ರಸ್ತೆಗಳಲ್ಲಿ ತಳ್ಳುವ ಬಂಡಿಗಳು ರಸ್ತೆಗೆ ಹೊಂದಿಕೊಂಡೇ ವ್ಯಾಪಾರ ಮಾಡುತ್ತಿದ್ದರಿಂದ ಖರೀದಿಗಾಗಿ ಬಂಡಿಗಳ ಮುಂದೆ ಬೈಕ್‍ ಗಳನ್ನು ನಿಲುಗಡೆ ಮಾಡುತ್ತಿದ್ದರಿಂದ ಸುಗಮ ಸಂಚಾರಕ್ಕೆ ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಪೊಲೀಸ್ ರು ಬೆಳಿಗ್ಗೆ ತರಕಾರಿ-ಸೊಪ್ಪು ಮಾರಾಟಗಾರರನ್ನು ತೆರವುಗೊಳಿಸಿದಂತೆ ಬೆಳಿಗ್ಗೆಯಿಂದ ಸಂಜೆವರಿಗೆ  ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ತಳ್ಳುವ ಬಂಡಿಗಳ ವ್ಯಾಪಾರಸ್ಥರಿಗೆ ತಾಕೀತು ಮಾಡಬೇಕಾಗಿದೆ.

ಬಸ್ ನಿಲ್ದಾಣ ವೃತ್ತ ಹಾಗೂ ಬಸವಸಾಗರ ವೃತ್ತದಲ್ಲಿ ಸುಗಮ ಹಾಗೂ ಶಿಸ್ತು ಬದ್ಧ ಸಂಚಾರ ಹಾಗೂ ಅಪಘಾತ ಸಂಖ್ಯೆ ಕಡಿಮೆಗೊಳಿಸುವ ಹಿನ್ನಲೆಯಲ್ಲಿ ಟ್ರ್ಯಾಫಿಕ್ ಸಿಗ್ನಲ್ ಅಳವಡಿಸುವ ಬಗ್ಗೆ ಇಲ್ಲಿನ ನಾಗರಿಕರು ಬಹುದಿನಗಳಿಂದ ಒತ್ತಾಯ ಮಾಡಿದರೂ ಈ ಬಗ್ಗೆ ಪೊಲೀಸ್ ಇಲಾಖೆ ಮುಂದಾಗುತ್ತಿಲ್ಲ ಇದರಿಂದ ಬಸ್ ನಿಲ್ದಾಣ ವೃತ್ತದಲ್ಲಿ ಎರ್ರಾಬಿರ್ರೀ ಸಂಚಾರದಿಂದ ಪಾದಚಾರಿಗಳು ಜೀವವನ್ನೇ ಕೈಯಲ್ಲಿ ಇಟ್ಟುಕೊಂಡೇ ತಿರುಗಾಡಬೇಕಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಟ್ರ್ಯಾಫಿಕ್ ಸಿಗ್ನಲ್ ಅಳವಡಿಸಲು ಮುಂದಾಗಬೇಕಾಗಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.

Suddiduniya.com

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!
Exit mobile version