ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಲಿಂಗಸುಗೂರು : ಉರ್ದು ಭಾಷೆ (Urdu Language)ಜೊತೆಗೆ ಇತರೆ ಭಾಷೆ ಕಲಿಯಲು ಆಸಕ್ತಿ ತೋರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಬಿಆರ್‌ಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಉರ್ದು ಮಾಧ್ಯಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು, ಮಕ್ಕಳು ಚೆನ್ನಾಗಿ ಉರ್ದು ಭಾಷೆಯನ್ನ ಕಲಿಯುವ ಜೊತೆಗೆ ಕನ್ನಡ,ಹಿಂದಿ,ಇ0ಗ್ಲಿಷ್ ಭಾಷೆಯನ್ನು ಕಲಿಯಬೇಕು. ಇಷ್ಟು ಭಾಷೆಯನ್ನ ಕಲಿತರೆ ದೇಶದ ಯಾವುದೇ ಭಾಗದಲ್ಲೂ ಹೋಗಿ ಮುಂದೆ ಜೀವನ ಸಾಗಿಸಬಹುದು ಎಂದರು.
5 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರೀಯೆ :
ಈ ಭಾಗದಲ್ಲಿ ಉರ್ದು ಶಿಕ್ಷಕರ ಕೊರತೆ ಇದ್ದು ಇದರಿಂದಾಗಿ ಬೇರೆ ಕಡೆಗಳಿಂದ ಶಿಕ್ಷಕರನ್ನು ನೆಚ್ಚಿಕೊಳ್ಳಬೇಕಾಗಿದೆ. ಉರ್ದು ಭಾಷೆ ಸೇರಿ 5 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರೀಯೆ ನಡೆಯುತ್ತಿದೆ. ಇದರಿಂದ ಶೇ.80 ರಷ್ಟು ಅನುಕೂಲ ಈ ಭಾಗಕ್ಕೆ ಆಗುತ್ತದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಉರ್ದು ಕ್ಲಸ್ಟರ್ ಮಟ್ಟದ ಉರ್ದು ಪ್ರತಿಭಾ ಕಾರಂಜಿ ಕಾರ್ಯಕ್ರಮ ಮುಂದಿನದಿನದಲ್ಲಿ ಎಲ್ಲಾ ಉರ್ದು ಶಾಲೆಯಲ್ಲೂ ಮಾಡಬೇಕು ಮಕ್ಕಳನ್ನು ಪ್ರೋತ್ಸಾಯಿಸಬೇಕು ಎಂದರು.
ಈ ವೇಳೆ ಪುರಸಭೆ ಸದಸ್ಯರಾದ ಮಹ್ಮದ್ ರಫಿ, ರೌಫ್ ಗ್ಯಾರಂಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಉರ್ದು ಶಾಲೆ ಮುಖ್ಯ ಶಿಕ್ಷಕ ಮಹ್ಮದ್ ಮಹಿಬೂಬು, ಮಹಮ್ಮದ್ ಕೆಎಫ್‌ಸಿ, ಯೂನುಸ್ ಮುಫ್ತಿ, ಸಿಆರ್‌ಪಿ ಷೇಕ್ ಅಜಿಮ್,ಬಾಬಾ ಖಾಜಿ, ಫಯಾಜ್ ಮನಿಯಾರ್, ಇಬ್ರಾಹಿಂ ಸೇರಿದಂತೆ ಇನ್ನು ಅನೇಕರಿದ್ದರು