suddiduniya.com

Veerashaiva Jangam : ಜಂಗಮ ತತ್ವಗಳ ಬಗ್ಗೆ ಅರಿವು ಮೂಡಿಸಿದರೆ ಧರ್ಮ ಜಾಗೃತಿ ಸಾಧ್ಯ

Veerashaiva Jangam

ಲಿಂಗಸುಗೂರು : ಜಂಗಮ ಸಮಾಜದ ಮೂಲ ತತ್ವಗಳಾದ ಭಕ್ತಿ, ಜ್ಞಾನ, ವಿರಕ್ತಿ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಟ್ಟರೆ ಮಾತ್ರ ಧರ್ಮ ಜಾಗೃತಿಯಾಗಲು ಸಾಧ್ಯವೆಂದು ತಾಲೂಕಿನ ಯರಡೋಣಾ ಸಿದ್ಧರಾಮೇಶ್ವರ ಗುರುಮಠದ ಪೀಠಾಧಿಪತಿ ಮುರುಘೇಂದ್ರ ಶಿವಯೋಗಿಗಳು ಕರೆ ನೀಡಿದರು.

Veerashaiva Jangam
Veerashaiva Jangam

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವೀರಶೈವ ಜಂಗಮ ಸಮಾಜದ (Veerashaiva Jangam ) ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವೀರಶೈವರು ಎಂದರೆ ಯಾರಿಂದಲೂ ವಿರೋಧ ರಹಿತ ಶೈವರು ಎಂದರ್ಥ. ಭಕ್ತಿ ಮತ್ತು ವಿರಕ್ತಿಗಳ ಸಂಗಮವೇ ಜಂಗಮ. ಜಂಗಮ ಸಮಾಜದ ಹಿನ್ನಲೆ ಹಾಗೂ ಅದರ ತತ್ವಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಜಂಗಮ ಸಮಾಜದಲ್ಲಿ ಭಕ್ತಿಯೇ ಪ್ರಧಾನವಾಗಿರುತ್ತದೆ. ಜಂಗಮದ ಮೂಲ ತತ್ವಗಳ ಬಗ್ಗೆ ಮಕ್ಕಳಿಗೆ ಭಾಲ್ಯದಿಂದಲೇ ಅರಿವು ಮೂಡಿಸಬೇಕು ಮಗುವಿನ ಮನಸ್ಸು ಸದ್ವಿಚಾರ, ಸದಾಚಾರಗಳತ್ತ ವಾಲುವಂತೆ ಮಾಡಬೇಕು ಅದಕ್ಕೆ ಪೂರಕವಾದ ವಾತಾವರಣ, ಸಂಸ್ಕಾರಗಳು ಸಮಾಜ ಹಾಗೂ ಕುಟುಂಬದಿಂದ ದೊರೆಯಬೇಕಿದೆ. ಅಂದಾಗ ಧರ್ಮನಿಷ್ಠವಾದ ಸಮಾಜ ರೂಪುಗೊಳ್ಳುತ್ತದೆ ಎಂದರು. ಶ್ರಮವಿಲ್ಲದೇ ಏನೂ ಸಾಧನೆ ಮಾಡಲು ಆಗೋಲ್ಲ, ಕಷ್ಟ, ಕಠಿಣ ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ. ಸಾಧಕರಿಗೆ ಗೌರವ ಸತ್ಕಾರ ಮಾಡಿದರೆ ಅದರಿಂದ ಅವರಿಗೆ ಜವಬ್ದಾರಿ ಹೆಚ್ಚಾಗುತ್ತದೆ, ಉತ್ತಮ ದಾರಿಯತ್ತ ಸಾಗಬೇಕು.ಉತ್ತಮನಾಗು ಉಪಕಾರಿಯಾಗು ಎಂಬ ಮಾತಿನಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.

ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಮಾತನಾಡಿ, ಮಕ್ಕಳಲ್ಲಿರುವ ಕಲ್ಮಶ ಹೋಗಲಾಡಿಸಿ ಅವರಲ್ಲಿ ಉನ್ನತ ಗುರಿ ಹಾಗೂ ಉನ್ನತ ಕನಸು ಬಿತ್ತಿ ಅದನ್ನು ಈಡೇರಿಸಿಕೊಳ್ಳಲು ಪ್ರೋತ್ಸಾಹ ನೀಡುವ ಕೆಲಸವನ್ನು ತಂದೆ ತಾಯಿಗಳು ಮಾಡಬೇಕಾಗಿದೆ. ಜಂಗಮ ಸಮಾಜ ಎಲ್ಲಾ ಸಮಾಜಕ್ಕೆ ಮಾದರಿಯಾಗಿ ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಎಲ್ಲಾ ಸಮಾಜಗಳನ್ನು ಮುನ್ನೆಡಸುವ ಸಮಾಜವಾಗಿದೆ. ಜಂಗಮ ಸಮಾಜಕ್ಕೆ ಸಮಾಜದಲ್ಲಿ ಉನ್ನತ ಸ್ಥಾನ ಇದೆ. ಜಂಗಮ ಸಮಾಜದವರಿಗೆ ಜ್ಞಾನ ರಕ್ತಗತವಾಗಿ ಬಂದಿರುತ್ತದೆ. ಆ ಜ್ಞಾನವನ್ನು ಮುಂದಿನ ಪೀಳಿಗೆಗೆ ಧಾರೆಳೆದು ಅವರಲ್ಲಿ ಧರ್ಮ ಜಾಗೃತಿ ಮಾಡಬೇಕಾಗಿದೆ. ಜಂಗಮ ಸಮಾಜದವರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದರೂ ಹಿಂದುಳಿದಂತೆ ಬದುಕು ನಡೆಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕೆಲಸ ಜಂಗಮ ಸಮಾಜದಲ್ಲಿ ನಿರಂತರವಾಗಿ ನಡೆಯಬೇಕು ಎಂದರು.

Veerashaiva Jangam

ವೀರಶೈವ ಜಂಗಮ ಸಮಾಜದ ತಾಲೂಕಾಧ್ಯಕ್ಷ ಪ್ರಭುಸ್ವಾಮಿ ಅತ್ನೂರು ಮಾತನಾಡಿ, ಜಂಗಮ ಸಮಾಜ ಮೀಸಲಾತಿ ಇಲ್ಲದ ಸಮಾಜವಾಗಿದೆ. ಮೀಸಲಾತಿ ಇಲ್ಲದೆ ಸಮಾಜದ ಪ್ರತಿಭಾವಂತರು ಉತ್ತಮ ಸಾಧನೆ ಮಾಡಿದ್ದಾರೆ, ಅಂತಹ ಸಾಧಕರಿಗೆ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಜಂಗಮ ಸಮಾಜ ಸಂಘಟಿತರಾಗಬೇಕಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಟ್ಟಾಗಬೇಕಾಗಿದೆ. ಜಂಗಮ ಸಮಾಜಕ್ಕೆ ಪುರಸಭೆವತಿಯಿಂದ ಲಿಂಗಸುಗೂರಿನಲ್ಲಿ ನಿವೇಶನ ನೀಡಿದೆ. ರೇಣುಕಾಚಾರ್ಯ ಭವನ ನಿರ್ಮಾಣಕ್ಕೆ ಸಮಾಜದವರು ಸಹಕಾರ ನೀಡಬೇಕೆಂದರು.

Veerashaiva Jangam

ಇದೇ ವೇಳೆ ಶೈಕ್ಷಣಿಕ, ಸಮಾಜಿಕ, ರಾಜಕೀಯ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಂಗಮ ಸಮಾಜದ ಸಾಧಕರಿಗೆ  ವೀರಶೈವ ಜಂಗಮ ಸಮಾಜದವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಸಮಾಜದ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯಸ್ವಾಮಿ ಯಲಗಲದಿನ್ನಿ, ಜಂಬಯ್ಯಸ್ವಾಮಿ, ಮಹೇಶ ನಂದಿಕೋಲಮಠ, ರಮೇಶ ಶಾಸ್ತ್ರಿ, ವಿರುಪಾಕ್ಷಯ್ಯ, ಶರಣಯ್ಯ ಹೊನ್ನಹಳ್ಳಿ, ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!