suddiduniya.com

Waqf Board :ವಕ್ಫ್ ಬೋರ್ಡ್ ನ್ಯಾಯಾಧೀಕರಣ ರದ್ದು ಮಾಡಿ

Waqf Board

ಲಿಂಗಸುಗೂರು : ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ವಕ್ಫ್ ಬೋರ್ಡ್ (Waqf Board )ನ್ಯಾಯಾಧೀಕರಣ ಕೂಡಲೇ ರದ್ದುಗೊಳಿಸಬೇಕು, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Waqf Board
Waqf Board

ಈ ಪ್ರದೇಶದಲ್ಲಿ ಆಡಳಿತ ನಡೆಸಿದ ಬಹುಮನಿ ಸುಲ್ತಾನರು, ಆದೀಲ್‍ಶಾಹಿ, ನಿಜಾಮರು ಆಡಳಿತವನ್ನು ಬ್ರಿಟಿಷರ ಕಿತ್ತುಕೊಂಡು ಆಡಳಿತ ನಡೆಸಿದ್ದರು, ಬ್ರಿಟಿಷರು ದೇಶದಲ್ಲಿ ಸಂಪೂರ್ಣ ಸರ್ವೆ ಮಾಡಿ, ಇದರಲ್ಲಿ ಅರಣ್ಯ, ಕೆರೆ,ನದಿ,ಹಳ್ಳ, ಗೋಮಾಳ, ಗುಡ್ಡ, ದೇವಸ್ಥಾನ, ಮಸೀದಿ, ಚರ್ಚ ಹಾಗೂ ಕೃಷಿ ಭೂಮಿ ದಾಖಲು ಮಾಡಿದ್ದಾರೆ. ಆದರೆ ಇತ್ತೀಚಿಗೆ (Waqf Board) ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ,

ರಾಜ್ಯದಲ್ಲಿ 2017-18 ನತ್ತು 2023-24ರಲ್ಲಿ ಪದೇ ಪದೇ ಸರ್ಕಾರವು ಸಾರ್ವಜನಿಕವಾಗಿ ಆದೇಶ ನೀಡದೇ ರೈತರ ಕೃಷಿ ಭೂಮಿಯ ಕಂದಾಯ ದಾಖಲೆಗಳಾದ ಪಹಣಿಯಲ್ಲಿ ಕಲಂ 9ರಲ್ಲಿ ಮತ್ತು 11ರಲ್ಲಿ ರೈತರನ್ನು ತೆಗೆದು (Waqf Board )ವಕ್ಫ್ ಬೋರ್ಡ ಎಂದು ಹೊಸ ಎಂಆರ್ ನೀಡಿ ತಿದ್ದುಪಡಿ ಮಾಡಲಾಗಿದೆ ಇದರು ಸರ್ಕಾರ ರೈತರ ಮೇಲೆ ನಡೆಸಿದ ದೌರ್ಜನ್ಯವಾಗಿದೆ.

ದಾಖಲೆಗಳನ್ನು ತಿದ್ದಲು ಸ್ಪಷ್ಟವಾದ ದಾಖಲೆಗಳು ಇರಬೇಕೆಂಬುದು ಸಪ್ರೀಂಕೋರ್ಟನ ನಿರ್ದೇಶನ ನೀಡಿದೆ ಆದರೆ ಯಾವುದೇ ದಾಖಲೆಗಳು ಇಲ್ಲದೆ ವಕ್ಫ್ ಬೋರ್ಡ್ ರೈತ ಆಸ್ತಿ ತಿದ್ದುಪಡಿ ಮಾಡಲು ಹೊರಟಿದ್ದು ಮೂರ್ಖತನದ ಪರಮಾವಧಿಯಾಗಿದೆ. 2013ರ ಸ್ವಾದೀನ ಕಾಯಿದೆಯ ಕೆಳಗೆ ಸಾರ್ವಜನಿಕ ಉದ್ದೇಶಕ್ಕೆಂದು ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ರೈತನ ಒಪ್ಪಿಗೆ ಪಡೆಯಬೇಕೆಂದು 2013ರ ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯಿದೆ ಜಾರಿಯಲ್ಲಿರುವಾಗ ರಾಜ್ಯ ಸರ್ಕಾರ ಈಗ ನಡೆಸಿರುವ ಪ್ರಯತ್ನ ಮೂರ್ಖತನದಿಂದ ಕೂಡಿದ್ದು, ಹಳ್ಳಿ ಹಳ್ಳಿಗಳಲ್ಲಿ ಜಾತಿ ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕುವ ಹುನ್ನಾರವಾಗಿದೆ.

ರೈತನ ಪರಿಸ್ಥಿತಿ ಕೃಷಿಯು ಲಾಭವಿಲ್ಲದ ಪರಿಸ್ಥಿತಿಯಲ್ಲಿ ಕೃಷಿಯನ್ನು ಮುಂದುವರಿಸಿಕೊಂಡು ಅದು ಪಿತ್ರಾರ್ಜಿತ ಹಾಗೂ ಹಳೆಯ ದಾಖಲೆಗಳನ್ನು ಮುಂದುವರಿದಿರುವ ಸಂದರ್ಭದಲ್ಲಿ ರೈತರು ತಪ್ಪು ದಾಖಲಾತಿಯ ಸುದ್ದಿ ಕೇಳಿ ರೈತರ ಆತಂಕಕ್ಕೊಳಾಗಿದ್ದಾರೆ. ಜನರಲ್ಲಿ ಅಶಾಂತಿ ಉಂಟು ಮಾಡುವ ವಕ್ಫ್ ಬೋರ್ಡಿನ ನ್ಯಾಯಾಧೀಕರಣ ಕೂಡಲೇ ರದ್ದಾಗಬೇಕು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತರನ್ನು ಭೂಮಿಯಿಂದ ಹೊರ ಹಾಕಲು ಈಗಾಗಲೇ ಜಾರಿಗೆ ತಂದಿರುವ ವಿಷಕಾರಿ ಕಾಯ್ದೆ ತಕ್ಷಣವೇ ರದ್ದಗೊಳಿಸಬೇಕು ಮತ್ತು ( Waqf Board )ವಕ್ಫ್ ಬೋರ್ಡ್‍ ಸಂಬಂಧಪಟ್ಟಂತೆ ಕಾಯಿದೆ ತಿದ್ದುಪಡಿ ಮಾಡಿ ರೈತರನ್ನು ರಕ್ಷಿಸಿಬೇಕು. ಕೂಡಲೇ ಈ ಕಾಯಿದೆ ಹಿಂಪಡೆದು ಪಹಣಿಯ ಕಲಂ 11ರಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕಾಧ್ಯಕ್ಷ ವೈ,ದುರ್ಗಾಪ್ರಸಾದ್, ರಾಜ್ಯ ಸಮಿತಿ ಸದಸ್ಯ ಬಸವರಾಜ ಗೋಡಿಹಾಳ, ಬಸವರಾಜ ಕುಂಬಾರ,ರಂಗಪ್ಪ, ನಾಗಪ್ಪ, ಹನುಮಂತ, ಅಮರೇಶ ಮೇಟಿ ಸೇರಿದಂತೆ ಇನ್ನಿತರಿದ್ದರು.

Waqf Board

ವಕ್ಫ್‍ ಬೋರ್ಡ್ ಸಂಬಂಧಿತ 1974ರ ಗೆಜಟ್ ಡಿನೋಟಿಪೈಡ್ ಹಾಗೂ ಸರ್ಕಾದ ಸುತ್ತೋಲೆ ರದ್ದುಪಡಿಸುವಂತೆ ಆಗ್ರಹಿಸಿ ಕರುನಾಡು ವಿಜಯಸೇನೆ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಹೊರಡಿಸಿದ 1974ರ ಗೆಜಟ್‍ ಹಾಗೂ 2010ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆ ಆಧಾರಿಸಿ ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ಕೆಲ ರೈತ ಪಹಣಿಗಳಲ್ಲಿ ಆಕ್ರಮವಾಗಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದು ಖಂಡನೀಯ.

Waqf Board

ಈ ಹಿಂದೆ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ 1974-79ರ ಮಧ್ಯ ಇನಾಮು ಗೇಣಿದಾರ ಪದ್ಧತಿ, ಉಳುವವನೇ ಭೂ ಒಡೆಯ ಸೇರಿದಂತೆ ಇನ್ನಿತರ ಕಾಯ್ದೆಯಡಿಯಲ್ಲಿ ಜಮೀನು ಹಂಚಿಕೆ ಆಗಿವೆ. ಪಟ್ಟಾ ದೇಶ ಆಧರಿಸಿ ರೈತರು ತಮ್ಮ ಸಮಸ್ಯೆಗಳಿಗೆ ಕಂದಾಯ ಅಧಿಕಾರಿಗಳಿಗೆ ಪರವಾನಿಗೆ ಪಡೆದು ಮಾರಾಟ ಮಾಡಿಕೊಂಡಿದ್ದಾರೆ. ಸರ್ಕಾರ ಭೂ ಕಂದಾಯ ಕಾಯ್ದೆ, ಭೂ ನ್ಯಾಯಾಧೀಕರಣ, ಉಳುವನೆ ಭೂ ಒಡೆಯ ಕಾಯ್ದೆಯಡಿ ಜಮೀನು ಪಡೆದು ಮಾಲಿಕತ್ವ ಪಡೆದಿದ್ದಾರೆ, ಹಂತ ಹಂತವಾಗಿ ಮಾರಾಟಗೊಂಡಿದ್ದು, ಈಗ ಏಕಾಏಕಿ ಕಾಯ್ದೆ ನೀತಿ ನಿಯಮ ಉಲ್ಲಂಘಿಸಿ ರೈತರ ಆಸ್ತಿಯಲ್ಲಿ ಪಹಣಿಯಲ್ಲಿ ಯಾವುದೇ ನಿಯಮ ಅನುಸರಿಸದೇ ಸೇರ್ಪಡೆ ಮಾಡುವ ಮೂಲಕ ರೈತರಿಗೆ ಮರಣಶಾಸನ ರೂಪಿಸುತ್ತಿದ್ದಾರೆ.

1995ರ ವಕ್ಫ್ ಕಾಯ್ದೆ ಅವುಗಳ ತಿದ್ದುಪಡಿ ಆಧರಿಸಿ ಕಂದಾಯ ಅಧಿಕಾರಿಗಳು ಸರ್ವೆ ಮಾಡಿ ವಕ್ಫ್ ಆಸ್ತಿ ಪಟ್ಟಿ ತಿದ್ದುಪಡಿ ಮಾಡಿಲ್ಲ, 2013ರ ತಿದ್ದುಪಡಿ ಕಾಯ್ದೆ ಉಲ್ಲಂಘಿಸಿ 1974ರ ಗೆಜಟ್ ಹಾಗೂ 2010ರ ರಾಜ್ಯ ಸರ್ಕಾರದ ಸುತ್ತೋಲೆ ಮುಂದಿಟ್ಟು ರೈತರ ವಿಚಾರಿಸದೇ ಪಹಣಿಯಲ್ಲಿ ವಕ್ಫ್‍ ಹೆಸರು ಸೇರ್ಪಡೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತರ ಬದುಕು ನಾಶ ಮಾಡಲು ತಂದಿರುವ ವಕ್ಫ್‍ ಕಾಯ್ದೆ 1974ರ ಗೆಜಟ್‍ ಹಾಗೂ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆ ರದ್ದುಪಡಿಸಬೇಕು, ಪಹಣಿಯಲ್ಲಿ ವಕ್ಫ್‍ ಹೆಸರು ತೆಗೆದು ಹಾಕಬೇಕೆಂದು ಆಗ್ರಹಿಸಿದರು.

ಕರುನಾಡು ವಿಜಯಸೇನೆ ತಾಲೂಕಾಧ್ಯಕ್ಷ ಹನುಮಂತ ಬಡಿಗೇರ್, ರಂಗಪ್ಪ ಭೋವಿ, ಪರಶುರಾಮ ಗೋರೆಬಾಳ, ಮಹಾಂತೇಶ ತುಪ್ಪದ್,  ಹನುಮಂತ ರಾಂಪೂರು, ದುರಗಪ್ಪ, ಮಲ್ಲಪ್ಪ ಮೇಸ್ತ್ರೀ, ಸಂಗನಗೌಡ ಪಾಟೀಲ್‍, ಗೌಡಪ್ಪ ಮೂಲಿಮನಿ, ದುರಗಪ್ಪ ಮೇಗಳಮನಿ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!