suddiduniya.com

Waqf Gazette :ವಕ್ಫ್ ಬೋರ್ಡ್ ಗೆಜೆಟ್ ರದ್ದತಿಗಾಗಿ ಪ್ರತಿಭಟನೆ

Waqf Gazette

ಲಿಂಗಸುಗೂರು : ವಕ್ಫ್ ಬೋರ್ಡ್ ನ ಸಂಬಂಧಿಸಿದಂತೆ 1974ರ ಗೆಜೆಟ್ ( Waqf Gazette ) ರದ್ದು ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Waqf Gazette

ರಾಜ್ಯ ಸರ್ಕಾರ ಹೊರಡಿಸಿದ 1974ರ ಗೆಜೆಟಿಯರ್ (Waqf Gazette ) ನಿಯಮ ಬಾಹಿರವಾಗಿದೆ, 2013ರಲ್ಲಿ ತಿದ್ದುಪಡಿಯಾದ ವಕ್ಫ್ ಕಾಯ್ದೆಯಡಿ ಪುನರ್ ಸರ್ವೆ ಮಾಡಿ ವಕ್ಫ್ ಆಸ್ತಿ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಕ್ಫ್ ಕಾಯ್ದೆ 1995 ಕಲಂ 3 ಮುಂದಿಟ್ಟುಕೊಂಡು ಒಂದು ಆಸ್ತಿ ವಕ್ಫ್ ಅಂತ ಒಮ್ಮೆ ಗುರುತಿಸಿದರೆ ಅದು ಅಂತಿಮ ವಕ್ಫ್ ಆಸ್ತಿ ಎಂದು ಹೇಳಿಕೊಂಡು ವಕ್ಫ್ ಕಾಯ್ದೆ ಕಲಂ ಪಾಲನೆ ಮಾಡದೇ ರೈತರ ಆಸ್ತಿ ಪಹಣಿಯಲ್ಲಿ ಮಾಲಿಕರ ಗಮನಕ್ಕೆ ತರದೇ ಏಪಕ್ಷೀಯವಾಗಿ ಸೇರ್ಪಡೆ ಮಾಡುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ.

ವಕ್ಫ್ ಕಾಯ್ದೆ 2013ರ ತಿದ್ದುಪಡಿ ಅನುಸರಿಸಿದ ಹಳೆಯ 1974ರ ಗೆಜೆಟ್ ಮುಂದಿಟ್ಟುಕೊಂಡು 2010ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಸುತ್ತೋಲೆ ಆಧಾರಿಸಿ ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ರೈತರ ಪಹಣಿಗಳಲ್ಲಿ ಆಕ್ರಮವಾಗಿ ವಕ್ಫ್ ಹೆಸರು ಸೇರ್ಪಡೆ ಮಾಡಿರುವುದು ಖಂಡನೀಯವಾಗಿದೆ.

ಈ ಹಿಂದೆ ಸ್ವಾತಂತ್ರ್ಯ ಪೂರ್ವ ನಡುವೆ ನಿಜಮಾಶಾಹಿ ಮತ್ತು ಬ್ರಿಟಿಷ್ ಆಡಳಿತ ಮತ್ತು ನಂತರದ 1974-79ರ ಮಧ್ಯೆ ಇನಾಮು, ಗೇಣಿದಾರ ಪದ್ಧತಿ, ಊಳುವವನೇ ಭೂ ಒಡೆಯ ಹಾಗೂ ಇತ್ಯಾದಿ ಕಾಯ್ದೆಯಡಿ ಜಮೀನು ಹಂಚಿಕೆಯಾಗಿವೆ. ಪಟ್ಟಾ ಆದೇಶ ಆಧರಿಸಿ ರೈತರು ತಮ್ಮ ಕೌಟುಂಬಿಕ ಸಮಸ್ಯೆಗೆ ಕಂದಾಯ ಅಧಿಕಾರಿಗಳ ಪರವಾನಿಗೆ ಪಡೆದು ಮಾರಾಟ ಮಾಡಿಕೊಂಡಿದ್ದಾರೆ.

ಸರ್ಕಾರದ ಭೂ ಕಂದಾಯ ಕಾಯ್ದೆ, ಭೂ ನ್ಯಾಯಾಧೀಕರಣ, ಉಳುವವನೇ ಒಡೆಯ ಕಾಯ್ದೆಯಡಿ ಜಮೀನು ಪಡೆದು ಮಾಲಿಕತ್ವ ಪಡೆದಿದ್ದಾರೆ. ಹಂತ ಹಂತವಾಗಿ ಮಾರಾಟಗೊಂಡಿದ್ದು, ಈಗ ಏಕಾ ಏಕಿ ಕಾಯ್ದೆ ನೀತಿ ನಿಯಮ ಉಲ್ಲಂಘಿಸಿ ರೈತರ ಆಸ್ತಿ ಪಹಣಿಯಲ್ಲಿ ಯಾವುದೇ ನಿಯಮ ಅನುಸರಿಸದೇ ಸೇರ್ಪಡೆ ಮಾಡುವ ಮೂಲಕ ಸರ್ಕಾರವು ಸಮಾಜದಲ್ಲಿ ಆಶಾಂತಿ ಹುಟ್ಟು ಹಾಕಿದೆ. ಈ ಹಿನ್ನಲೆಯಲ್ಲಿ 1995ರ ವಕ್ಫ್ ಕಾಯ್ದೆ, ಅವುಗಳ ತಿದ್ದುಪಡಿ ಆಧರಿಸಿ ಕಂದಾಯ ಅಧಿಕಾರಿಗಳು ಸರ್ವೆ ಮಾಡಿ ವಕ್ಫ್ ಆಸ್ತಿ ಪಟ್ಟಿ ಸಿದ್ಧಪಡಿಸಿಲ್ಲ, 2013 ತಿದ್ದುಪಡಿ ಕಾಯ್ದೆ ಉಲ್ಲಂಘಿಸಿ 1974ರ ಗೆಜೆಟ್ ( Waqf Gazette )ಹಾಗೂ 2010ರ ರಾಜ್ಯ ಸರ್ಕಾರದ ಸುತ್ತೋಲೆ ಮುಂದಿಟ್ಟು ರೈತರ ಆಸ್ತಿ ಪಹಣಿ ಮಾಲಿಕರ ವಿಚಾರಣೆ ನಡೆಸದೇ ವಕ್ಫ್ ಹೆಸರು ಸೇರ್ಪಡೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು,ರೈತರಿಗೆ ಮಾರಕ ಹಾಗೂ ವಿರೋಧಿ ( Waqf Gazette ) ಗೆಜೆಟ್ ಮತ್ತು 2010ರ ಮುಖ್ಯ ಕಾರ್ಯದರ್ಶಿ ಸುತ್ತೋಲೆ ರದ್ದುಪಡಿಸಬೇಕು. ಪಹಣಿಯಲ್ಲಿ ಮಾಲಿಕರ ಗಮನಕ್ಕೆ ತರದೇ ಸೇರಿಸಿರುವ ವಕ್ಫ್ ಹೆಸರನ್ನು ತೆಗೆದು ಹಾಕಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಎಸಿಯವರಿಗೆ ಸಲ್ಲಿಸಲಾಯಿತು.

ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗುರುಬಾಯಿ ಹಿರೇಮಠ, ಬಸಮ್ಮ ಹಿರೇಮಠ, ಅಮರಮ್ಮ ಮರೆಪ್ಪ, ಮುದಕಮ್ಮ, ಶಶಿಕಲಾ ಹಿರೇಮಠ, ಶ್ವೇತಾ ಲಾಲಗುಂದಿ, ಗದ್ದೆಮ್ಮ, ಯಮನಮ್ಮ ರಾಮಣ್ಣ, ಮಹಾದೇವಮ್ಮ, ಅಂಬುಜಾ ಬಯ್ಯಾಪುರ, ಬಸನಗೌಡ ಹಿರೇಹೆಸರೂರು, ಸಂಗನಗೌಡ ಹೊಸೂರು, ಖಾಜಾವಲಿ, ಸದಾನಂದ ಮಡಿವಾಳ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!