suddiduniya.com

Waqf Notice :ಸಿದ್ಧರಾಮಯ್ಯನವರ ಕುಮ್ಮಕ್ಕಿನಿಂದಲೇ ರೈತರಿಗೆ ವಕ್ಫ್ ನೋಟಿಸ್‍

Waqf Notice

ಲಿಂಗಸುಗೂರು : ಸಿದ್ಧರಾಮಯ್ಯನವರ ಕುಮ್ಮಕ್ಕಿನಿಂದಲೇ ಸಚಿವ ಜಮೀರ್ ಅಹ್ಮದ್ ಎಲ್ಲಾ ಜಿಲ್ಲಾಧಿಕಾರಿಗಳನ್ನು ಬೆದರಿಸಿ ರಾಜ್ಯದಲ್ಲಿರುವ ಮಠ,ಮಾನ್ಯಗಳಿಗೆ, ರೈತರಿಗೆ ವಕ್ಫ್ ನೋಟಿಸ್ ನೀಡಿ (Waqf Notice )ಅವರ ಆಸ್ತಿ ಕಸಿಯುವ ಪ್ರಯತ್ನ ನಡೆದಿದೆ, ಸರಕಾರದ ಪ್ರಯತ್ನ ಯಾವತ್ತೂ ಸಫಲವಾಗಲು ಬಿಜೆಪಿ ಬಿಡೋಲ್ಲ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಪಟ್ಟಣದ ದೊಡ್ಡ ಹನುಮಂತ ದೇವರ ದೇವಸ್ಥಾನದ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ವಕ್ಫ್ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನ ಉದ್ದೇಶಿಸಿ ಮಾತನಾಡಿದ ಅವರು, ಸಿದ್ಧರಾಮಯ್ಯನವರಿಗೆ ರಾಜ್ಯದ ರೈತರ, ಬಡವರ ಹಿತ ಬೇಕಾಗಿಲ್ಲ ಅವರಿಗೆ ಎಷ್ಟು ದಿನ ಸಿಎಂ ಆಗಿ ಅಧಿಕಾರದಲ್ಲಿರುತ್ತೇನೆ ಎಂಬುದು ಮುಖ್ಯ. ರಾಜ್ಯದಲ್ಲಿ (Waqf Notice )ವಕ್ಫ್ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಮುಸ್ಲಿಂ ಮತಗಳಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭ್ರಮೆಯಲ್ಲಿರುವ ಸಿದ್ಧರಾಮಯ್ಯನವರು ರಾಯಚೂರು ಜಿಲ್ಲೆಯಲ್ಲಿಯೇ 7500 ಎಕರೆ ರೈತರ ಭೂಮಿಗೆ ವಕ್ಫ್ ನೋಟಿಸ್ ನೀಡಿಸಿದ್ದಾರೆ. ರೈತರ ಒಂದಿಚ್ಚು ಭೂಮಿ ವಕ್ಫ್ ಗೆ ನೀಡಲು ನಾವು ಬಿಡೋಲ್ಲ, ಸಿದ್ಧರಾಮಯ್ಯನವರಿಗೆ ನಿಜವಾಗಿ ರೈತರ ಪರ ಕಾಳಜಿ ಇದ್ದರೆ  1973-74ರಲ್ಲಿ ಆದಂತಹ ವಕ್ಫ್ ಗೆಜಟ್ ಹಿಂಪಡೆಯಬೇಕು, ಹಿಂಪಡೆಯುವರಿಗೂ ಬಿಜೆಪಿ ಹೋರಾಟ ಮಾಡುತ್ತೆ ಎಂದರು.

ವಕ್ಫ್ ಕಾಯ್ದೆಗೆ ( Waqf Notice )ತಿದ್ದುಪಡಿ ತರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಂಟಿ ಸಂಸದೀಯ ಸಮಿತಿ ರಚನೆ ಮಾಡಿದ್ದರೆ ರಾಜ್ಯದಲ್ಲಿ ಸಿದ್ಧರಾಮಯ್ಯನವರಿಗೆ ಆತಂಕಗೊಂಡು ರಾತ್ರೋರಾತ್ರಿ ಸಚಿವ ಜಮೀರ್ ಅಹ್ಮದ್ ನ್ನನ್ನು ಜಿಲ್ಲೆ ಜಿಲ್ಲೆಗೆ ಕಳುಹಿಸಿ ಜಿಲ್ಲಾಧಿಕಾರಿಗಳಿಗೆ ಹೆದರಿಸಿ ಬೆದರಿಸಿ ದೇವಸ್ಥಾನ, ಮಠಮಾನ್ಯಗಳಿಗೆ, ರೈತರ ಆಸ್ತಿಗಳ ಪಹಣಿಯಲ್ಲಿ ( Waqf Notice )ವಕ್ಫ್ ಹೆಸರು ಸೇರಿಸಿ ನೋಟಿಸ್ ಕೊಡಿಸಿದ್ದಾರೆ. ಮಾನವೀಯತೆ ಇಲ್ಲದ ಸಿಎಂ ಇದ್ದರೆ ಅದು ಸಿದ್ಧರಾಮಯ್ಯನವರು ಎಂದು ಆರೋಪಿಸಿದರು.

ಕಾಂಗ್ರೆಸ್‍ ಸರಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಒಂದೇ ಒಂದು ಕಲ್ಯಾಣ ಯೋಜನೆ ನೀಡದ ದರಿದ್ರ ಸರಕಾರವಾಗಿದೆ. ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬಂದ ಕೂಡಲೇ ಯಡಿಯೂರಪ್ಪನವರ ಸರಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್, ಭಾಗ್ಯಲಕ್ಷ್ಮೀ ಯೋಜನೆ ರದ್ದು ಪಡಿಸಿದರು. ಬರ ಪರಿಹಾರ, ತೊಗರಿ ಬೆಳೆ ನಾಶವಾಗಿ ರೈತರಿಗೆ ಪರಿಹಾರ ನೀಡಬೇಕೆಂದರೆ ಸಿದ್ಧರಾಮಯ್ಯನವರು ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದರೆ ನೀವು ಯಾವಾ ಪುರುಷಾರ್ಥಕ್ಕೆ ಸಿಎಂ ಆಗಿರಬೇಕು. ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಂಡಿರುವುದು ಯಾವಾ ಪುರುಷಾರ್ಥಕ್ಕೆ ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂದೋಲನದಲ್ಲಿ ಗಂಗಾವತಿ ಶಾಸಕ ಜೆ.ಜನಾರ್ಧನರೆಡ್ಡಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯನವರು 420 ಜಮೀರ್ ಅಹ್ಮದ್ ಅವರನ್ನು ಮುಂದಿಟ್ಟುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದಾರೆ. ಮುಸ್ಲಿಂ ಮತಗಳ ಓಲೈಕೆಗಾಗಿ ಸಿದ್ಧರಾಮಯ್ಯನವರು ಮಾಡುತ್ತಿರುವ ಕರ್ಮ ಸುಮ್ಮನೆ ಬಿಡೋಲ್ಲ, ಅಂತ್ಯಕಾಲ ಬಂದಿದೆ. ಮುಡಾ ಹಗರಣದಲ್ಲಿ ಸಿದ್ಧರಾಮಯ್ಯನವರ ಇಡೀ ಕುಟಂಬವೇ ಭಾಗಿಯಾಗಿದೆ ಎಂದು ಇಡಿ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದರು.

ಈ ವೇಳೆ ಶಾಸಕ ಮಾನಪ್ಪ ವಜ್ಜಲ್‍ ಮಾತನಾಡಿ, ವಕ್ಫ್ ನಿಂದ ರಾಜ್ಯದಲ್ಲಿ ಗೊಂದಲ ಸೃಷ್ಠಿಯಾಗಿದೆ. ಸ್ವತಃ ನನ್ನ ಜಮೀನು, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‍ರ ಅಷ್ಟೇ ಅಲ್ಲದೆ ಈ ಭಾಗದ ಪ್ರತಿಷ್ಠಿತ ಮಠವಾಗಿರುವ ಅಂಕಲಿಮಠದ ಆಸ್ತಿಗೂ ವಕ್ಫ್ ಆಸ್ತಿ ಎಂದು ಹೆಸರು ಸೇರ್ಪಡೆಯಾಗಿದೆ. ಇನ್ನೂ ಸಾಮಾನ್ಯ ರೈತರ ಗತಿ ಏನು..? ವಕ್ಫ್‍ ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಡಾ.ಶಿವರಾಜ್ ಪಾಟೀಲ್, ಶಾಸಕರಾದ ಬೈರತಿ ಬಸವರಾಜ, ದೊಡ್ಡನಗೌಡ ಪಾಟೀಲ್, ಶ್ರೈಲೇಂದ್ರ, ಬೈಲ್ದಾಳ್, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕರಾದ ರೇಣುಕಾಚಾರ್ಯ, ಪ್ರತಾಪಗೌಡ ಪಾಟೀಲ್, ಶಿವನಗೌಡ ನಾಯಕ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ,ರುದ್ರೇಶ, ಕೆ.ಬಸವರಾಜ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!