suddiduniya.com

Waqf property : ಆನಾಹೊಸೂರು ರೈತರ ಮೇಲೆ ಬಿತ್ತು ವಕ್ಫ್ ವಕ್ರ ದೃಷ್ಠಿ     

Waqf property

ಲಿಂಗಸುಗೂರು : ರಾಜ್ಯದಲ್ಲಿ ಪ್ರಸ್ತುತ ಸುದ್ದಿಯಲ್ಲಿರುವ ವಕ್ಫ್ ಆಸ್ತಿ ವಿಚಾರ, ಈಗ ಲಿಂಗಸುಗೂರು ತಾಲೂಕಿಗೆ ಕಾಲಿಟ್ಟಿದ್ದು, ತಾಲೂಕಿನ ಆನಾಹೊಸೂರು ಗ್ರಾಮದ ರೈತರ ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ( Waqf property )ಎಂದು ನಮೂದಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Waqf property

ತಾಲೂಕಿನ ಆನಾಹೊಸೂರು ಗ್ರಾಮದಲ್ಲಿ ಅನೇಕ ವರ್ಷಗಳಿಂದ ಉಳಿಮೆ ಮಾಡುತ್ತಿದ್ದ ರೈತರ ಜಮೀನಿನ ಪಹಣಿಯ 11ನೇ ಕಾಲಂನಲ್ಲಿ ವಕ್ಫ್ ಆಸ್ತಿ (Waqf property )ನಮೂದಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.  

ಆನಾಹೊಸೂರು ಗ್ರಾಮದ ರೈತರಾದ ದುರಗಮ್ಮ ಗಂಡ ಬಸಪ್ಪ ಸರ್ವೆ ನಂಬರ್ 454* ರ 2 ಎಕರೆ 08 ಗುಂಟೆ, ಗಿರಿಗೌಡ ಸಂಗನಗೌಡ ಅವರ 483*2 ರ 4.03 ಎಕರೆ ಜಮೀನು, ರಾಯಪ್ಪ ಪೂಜಾರಿ 483 *1 ಸರ್ವೆ ನಂಬರಿನ 7.11 ಎಕರೆ, ದುರಗಮ್ಮ ಗಂಡ ಬಸಪ್ಪ 437* ಸರ್ವೆ ನಂಬರರಿನ 1.02 ಎಕರೆ ಜಮೀನಿ ಹಾಗೂ  ಮಹ್ಮದ್ ಗೌಸ್ ಪಾಶಾ ಸರ್ವೆ ನಂಬರ್ 3*1 ಹಾಗೂ ರಜೀಅಹ್ಮದ್ ಸಾಬ ಸರ್ವೆ ನಂಬರ್ 3*2 ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿರುವುದು ರೈತರು ಕಂಗಾಲಾಗಿದ್ದಾರೆ. ಇದು ಕೇವಲ ಆರೇಳು ರೈತರ ಜಮೀನಿನ ಪಹಣಿ ಚೆಕ್ ಮಾಡಿದಾಗ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ 500ಕ್ಕೂ ಅಧಿಕ ಸರ್ವೆ ನಂಬರ್ ಇರುವುದರಿಂದ ಇನ್ನೂ ರೈತರು ಪಹಣಿ ಚೆಕ್ ಮಾಡಿದರೆ ವಕ್ಫ್ ಆಸ್ತಿ (Waqf property ) ಎಂದು ನಮೂದಾಗಿರುವ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.

ಆನಾಹೊಸೂರು ಗ್ರಾಮದ ವಕ್ಫ್ ಆಸ್ತಿ ನಮೂದಾಗಿರುವ ರೈತರ ಹಿಂದಿನ ವರ್ಷದ ಪಹಣಿ ಪರಿಶೀಲಿಸಿದಾಗ 2016ರಿಂದ ಇಲ್ಲಿವರಿಗೆ ಪಹಣಿಯ ಕಾಲಂ ನಂಬರ್ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಆದರೆ ರೈತರು ಯಾಕೆ ಸುಮ್ಮನೆ ಕುಳಿತಿದ್ದಾರೆಂದು ತಿಳಿಯದಾಗಿದೆ.

ಆನಾಹೊಸೂರು ಅಲ್ಲದೆ ತಾಲೂಕಿನ ಚಿತ್ತಾಪುರ, ಗುರುಗುಂಟಾ, ಹಟ್ಟಿ ಭಾಗದ ಕೆಲ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಿಂದ ರೈತರು ಎಚ್ಚತ್ತೆಗೊಳ್ಳಬೇಕು.ಅನೇಕ ವರ್ಷಗಳಿಂದ ಉಳಿಮೆ ಮಾಡುತ್ತಿದ್ದ ರೈತರ ಭೂಮಿ ಕಸಿಯುವ ಹುನ್ನಾರ ನಡೆದಿದೆ. ಈ ಬಗ್ಗೆ ತಾಲೂಕಿನ ರೈತರಿಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಶೀಘ್ರವೇ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ರೈತ ಸಂಘದ ತಾಲೂಕಾಧ್ಯಕ್ಷ ಪ್ರಸಾದರೆಡ್ಡಿ ತಿಳಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!