suddiduniya.com

ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾಲಂಭಿಗಳಾಗಿ : ಶಾಸಕ ವಜ್ಜಲ್

ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾಲಂಭಿಗಳಾಗಿ

ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಲಿಂಗಸುಗೂರು : ಮಹಿಳೆಯರಿಗೆ ಸರ್ಕಾರ ಕರಕುಶಲ( Handicrafts) ಹಾಗೂ ಇನ್ನಿತರ ಕೌಶಲ್ಯತೆ ತರಬೇತಿ( skill training) ನೀಡುತ್ತಿದೆ ಆ ತರಭೇತಿ ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾಲಂಭಿಗಳಾಗಿ ಬದುಕು ಸಾಗಿಸಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಕರೆ ನೀಡಿದರು.

ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾಲಂಭಿಗಳಾಗಿ : ಶಾಸಕ ವಜ್ಜಲ್

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಆಯ್ಕೆಯಾದ 39 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾಲಂಭಿ ಜೀವನ ಸಾಗಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮನೆಯಲ್ಲಿಯೇ ಗುಡಿ ಕೈಗಾರಿಕೆ, ಟೈಲರಿಂಗ್,ಮುತ್ತಿನ ಹಾರ ತಯಾರಿಕೆ ಸೇರಿದಂತೆ ಇನ್ನಿತರ ಸ್ವಯಂ ಉದ್ಯೋಗಕ್ಕಾಗಿ ಸರ್ಕಾರ ಸಹಾಯಧನ ನೀಡುತ್ತಿದೆ. ಮಹಿಳೆಯರಿಗೆ ಕೌಶಲ್ಯ ತರಭೇತಿ ನೀಡುತ್ತಿದೆ, ತರಭೇತಿ ಪಡೆದ ಮಹಿಳೆಯರು ಗುಡಿ ಕೈಗಾರಿಕೆ ನಡೆಸಿ ಇನ್ನಿತರ ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ ಇಂತಹ ಮಹಿಳೆಯರನ್ನು ಆದರ್ಶವಾಗಿಸಿಕೊಂಡು ಪ್ರತಿಯೊಬ್ಬರೂ ಸ್ವಾಲಂಭಿಗಳಾಗಬೇಕು.

39 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗದ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಮೂಲಕ ಜೀವನ ರೂಪಿಸಿಕೊಳ್ಳಲು ಸರ್ಕಾರ ನೀಡುವ ಇಂತಹ ಉಪಕರಣಗಳು ಅತಿ ಉಪಯುಕ್ತವಾಗಿದೆ. ಹೊಲಿಗೆ ಯಂತ್ರ ಪಡೆದ ಫಲಾನುಭವಿಗಳು ಯಂತ್ರಗಳನ್ನು ಸದ್ಬಳಕೆಯಿಂದ ಸ್ವಾಲಂಭಿಗಳಾಗಬೇಕು. ಮಹಿಳೆಯರು ಹೊಲಿಗೆ ಕಾಯಕದ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಮಹಿಳೆಯರು ಯಾರನ್ನೂ ಅವಲಂಬಿಸಬಾರದು. ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾಲಂಭಿಗಳಾಗಿ : ಶಾಸಕ ವಜ್ಜಲ್ ಕರೆ ನೀಡಿದರು

ಈ ವೇಳೆ ಎಂಎಲ್ಸಿ ಶರಣಗೌಡ ಬಯ್ಯಾಪುರ, ಬಿಜೆಪಿ ಮಂಡಲ ಅಧ್ಯಕ್ಷರಾದ ಅಯ್ಯಪ್ಪ ಮಾಳೂರು, ಹುಲ್ಲೇಶ ಸಾಹುಕಾರ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್,ನಾಗಭೂಷಣ, ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ, ಅಭಿವೃದ್ಧಿ ಅಧಿಕಾರಿ ಕಾಂತಣ್ಣ, ರಮೇಶ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!