suddiduniya.com

Women’s equality :ಬಸವಾದಿ ಶರಣರು ಮಹಿಳೆಯರಿಗೆ ನೀಡಿದ ಸಮಾನತೆ ವಿಶ್ವಮಾನ್ಯವಾಗಿದೆ

ಲಿಂಗಸುಗೂರು : 12ನೇ ಶತಮಾನದಲ್ಲಿ ಬಸವಾದಿ ಶರಣರು ಪುರಷರಷ್ಟೇ ಸಮಾನಾದ ಸಮಾನತೆ ಮಹಿಳೆಯರಿಗೆ ( Women’s equality ) ನೀಡಿದ್ದರು, ಆ ಸಮಾನತೆ ತತ್ವ ವಿಶ್ವಮಾನ್ಯವಾಗಿದೆ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Women's equality

ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ನಡೆದ ಲಿಂ.ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 113ನೇ  ಸಂಸ್ಮರಣೋತ್ಸವದ ಅಂಗವಾಗಿ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ವಿಶ್ವ ಬಸವಧರ್ಮ ಸಮಾವೇಶ ಸಮಾರಂಭದಲ್ಲಿ ನಡೆದ ಮಹಿಳಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಮಹಿಳೆಯರಿಗೆ ಧಾರ್ಮಿಕ, ಸಮಾಜಿಕ ಸ್ವಾತಂತ್ರ್ಯ ಇಲ್ಲದನ್ನು ಅರಿತ  ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಿ ಅವರಿಗೆ ಪೂಜ್ಯನೀಯ ಸ್ಥಾನ ನೀಡಿದ್ದರು, ಕೆಳವರ್ಗದ ಮಹಿಳೆಯರು ಧಾರ್ಮಿಕ ಸ್ವಾತಂತ್ರ್ಯ ಸದುಪಯೋಗ ಪಡಿಸಿಕೊಂಡು ಅನುಭಾವಿಗಳಾಗಿ ಎತ್ತರಕ್ಕೆ ಬೆಳೆದಿದ್ದರು ಎಂದರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಮಹಿಳೆಯರಿಗೆ ಸಮಾನತೆ ( Women’s equality )ನೀಡಿದ್ದು, ಈ ದಿನದ ಕೀರ್ತಿ ಅವರಿಗೆ ಸಲ್ಲುತ್ತದೆ. ಅನುಭವ ಮಂಟಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರಬೇಕೆಂದು ಬಸವಣ್ಣ ಆಗ ಬಯಸಿದ್ದರು. ಅದರ ಪರಿಣಾಮ ಅಕ್ಕ ಮಹಾದೇವಿ, ಸಂಕವ್ವ, ಬಾಳವ್ವ ಇತರೆ ಅನೇಕ ವಚನಗಾರ್ತಿಯರು, ಸಾಹಿತಿಗಳು ಅಂದು ಕ್ರಾಂತಿ ಮಾಡಿದರು. ಇವೆಲ್ಲವುಗಳ ಪರಿಣಾಮ ಇಂದು ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಶೇ.33ರಷ್ಟು ಮೀಸಲಾತಿ ಪಡೆದಿದ್ದಾಳೆ. ಬಸವಣ್ಣನ ಕನಸು ನನಸಾಗುತ್ತಿದೆ ಎಂದರು.

Women's equality
Women’s equality

ಸಮಾರಂಭದಲ್ಲಿ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಸಮಾಜದಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಬಸವಣ್ಣನವರು ಹೋರಾಡಿ ಸಮಾನತೆ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಶ್ರಮವಹಿಸಿದ್ದರು, ಅಂದು ಕಟ್ಟಿದ ಅನುಭವ ಮಂಟದ ಮಾದರಿಯಲ್ಲಿಯೇ ಇಂದು ಸಂಸತ್ ಭವನ ಇದೆ. ಮಹಿಳೆಯರಿಗೂ ರಾಜಕೀಯವಾಗಿ ಶೇ.33 ರಷ್ಟು ಮೀಸಲಾತಿ ನೀಡುವ ಮೂಲಕ ಮಹಿಳಾ ಸಬಲೀಕರಣ ನಡೆದಿದೆ. ಬಸವಾದಿ ಶರಣರ ತತ್ವಗಳು ಆದರ್ಶಗಳು ನಮಗೆ ದಾರಿದೀಪವಾಗಿದೆ ಎಂದರು.

ಸಮಾರಂಭದಲ್ಲಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆವತಿಯಿಂದ ಪ್ರರ್ದಶಿಸಿದ ಕಲ್ಯಾಣ ಕ್ರಾಂತಿ ಕಿಡಿ ರೂಪಕ ಪ್ರದರ್ಶನ ನೆರದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ  ಸೌಜನ್ಯ ನರಕಲದಿನ್ನಿ ಹಾಗೂ ಸೌಭಾಗ್ಯ ಚಕ್ರಸಾಲಿ ಅವರಿಂದ ವಚನ ನೃತ್ಯ ನಡೆಯಿತು. ಮಹಿಳಾ ಗೋಷ್ಠಿಯಲ್ಲಿ ವಿಶ್ರಾಂತ ಪ್ರಾಧ್ಯಪಕಿ ಜಯಶ್ರೀ ದಂಡೆ ಅನುಭಾವ ನೀಡಿದರು.

ಬುಧವಾರ ಬೆಳಿಗ್ಗೆ 11ರಿಂದ ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಪಟದಿಂದ ಪಟ್ಟಣದ ಬಸವಸಾಗರ ವೃತ್ತ, ಗಡಿಯಾರ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ವಚನ ಗ್ರಂಥ ತಾಡೋಲೆ ಕಟ್ಟಿನ, ವಿಶ್ವಗುರು ಬವಸಣ್ಣನವರ, ಲಿಂ.ಮಹಾಂತ ಶಿವಯೋಗಿಗಳ ಭಾವಚಿತ್ರ ಇರುವ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನ ನೀಡಿದವು.  

ಇಲಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಶಿರೂರು-ಸತ್ತಿ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಮನಗೂಳಿ ವಿರಕ್ತ ಸಂಸ್ಥಾನದ ಮಠದ ವಿರತಿಶಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಬಸವರಾಜಪ್ಪ ಸಿರಗುಪ್ಪ, ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಬಿಜೆಪಿ ಯುವ ಮುಖಂಡ ಈಶ್ವರ ವಜ್ಜಲ್‍, ಸೇರಿದಂತೆ ಅನೇಕರಿದ್ದರು.

Suddiduniya.com

2 thoughts on “Women’s equality :ಬಸವಾದಿ ಶರಣರು ಮಹಿಳೆಯರಿಗೆ ನೀಡಿದ ಸಮಾನತೆ ವಿಶ್ವಮಾನ್ಯವಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!