suddiduniya.com

ಅಬ್ಬಾ..! ಇಷ್ಟೊಂದು ರೇಟಾ ಈ ಹಸುವಿಗೆ..

ಅಬ್ಬಾ..! ಇಷ್ಟೊಂದು ರೇಟಾ ಈ ಹಸುವಿಗೆ..

ಸುದ್ದಿದುನಿಯಾ ವಿಶೇಷ : ಅಬ್ಬಾ..! ಇಷ್ಟೊಂದು ರೇಟಾ ಈ ಹಸುವಿಗೆ.. ಈ ಹಸುವಿನ ಬೆಲೆ ಲಕ್ಷಾಂತರ ರೂಪಾಯಿ, ಈ ಹಸುವಿನ ಹಾಲಿಗೂ ದೊಡ್ಡ ರೇಟು.. ಹಾಗಾದರೆ ಯಾವ ಹಸು ಅದು, ಏನೀದು ಕಥೆ.

ಗೋವು ಪ್ರಾಣಿಯಲ್ಲ ಅದು ಸನಾತನ ಧರ್ಮಿಯರಿಗೆ ಅದು ಮಾತೃ ಸ್ವರೂಪಿಣಿ. ಗೋವಿನಲ್ಲಿ ಮುಕ್ಕೋಟಿ ದೇವರನ್ನು ಕಂಡು ಆರಾಧನೆ ಮಾಡಲಾಗುತ್ತಿದೆ. ಗೋವಿನ ಹಾಲನ್ನು ಅಮೃತಕ್ಕೆ ಸಮನಾದ ತಾಯಿಯ ಎದೆಹಾಲಿಗೆ ಹೋಲಿಸುತ್ತೇವೆ. ತಾಯಿಯ ಹಾಲಿನಿಂದ ವಂಚಿತರಾದ ಅದೆಷ್ಟೋ ಮಕ್ಕಳು ಗೋವಿನ ಹಾಲುಂಡು ಬೆಳೆದಿದ್ದಾರೆ. ಅಂದಿಗೂ-ಇAದಿಗೂ ಎಲ್ಲರೂ ಮನೆಗಳಲ್ಲಿ ಗೋವಿನ ಹಾಲನ್ನೇ ಬಳಸುವುದು. ಹಾಲು ಮಾತ್ರವಲ್ಲದೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಹಾಲಿನಿಂದ ತಯಾರಿಸಿದ ವಿವಿಧ ಖಾದ್ಯ ಪದಾರ್ಥಗಳನ್ನು ಸವಿಯುವುದೆಂದರೆ ಸಿಹಿತಿಂಡಿ ಪ್ರಿಯರಿಗೆ ಇಷ್ಟವೋ ಇಷ್ಟ. ಗೋವಿನ ಹಾಲಿಗೆ ಹೆಚ್ಚಿನ ಮೌಲ್ಯವಿರುತ್ತದೆ.

ಅಬ್ಬಾ..! ಇಷ್ಟೊಂದು ರೇಟಾ ಈ ಹಸುವಿಗೆ..
ಪುಂಗನೂರು ತಳಿ

ಹಸು ಮನೆಯಲ್ಲಿದ್ದರೆ ಮಂಗಳಕರವಾಗಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಗೋವುಗಳ ತಳಿಗಳಲ್ಲಿ ವೇಚೂರು, ಉಂಬಳಚೇರಿ, ತಾರ್ಪಕರ್, ಸಿರಿ, ಸಹಿವಾಲ್, ರಾಠಿ, ಪುಂಗನೂರು, ಪುಲಿಕುಳಂ, ಪೊನ್ವಾರ್, ಓಂಗೋಲ್, ನಿಮಡಿ, ನಾಗೋರಿ, ಮೋಟೂ, ಮೇವಾಟಿ, ಮಾಳವಿ, ಮಲ್ನಾಡ್ ಗಿಡ್ಡ, ಲಾಲ್ ಕಂಧಾರಿ, ಲಾಲ್ ಸಿಂಧಿ, ಕೃಷ್ಣವೆಲ್ಲಿ, ಕೊಸಲಿ, ಖಿಲ್ಲಾ, ಖಿಲ್ಲಾ ಖೇರಿಗಢ್, ಖರಿಯಾರ್, ಕೆಂಕಾಥಾ, ಕಾಂಕ್ರೇಜ್, ಕಂಗಯ0, ಹರಿಯಾನ, ಹಳ್ಳಿಕರ್, ಘುಮ್ಸಾರಿ, ಗಿರ್, ಗಾವೋಲಾವ್, ಗಂಗಾತಿರಿ, ದಂಗಿ, ದೇವೋನಿ ಅಮೃತಮಹಲ್ ಒಟ್ಟು 37ಕ್ಕೂ ಅಧಿಕ ಹಸುವಿನ ತಳಿಗಳು ದೇಶದಲ್ಲಿ ಕಂಡುಬ0ದಿವೆ.

ಜಗತ್ತಿನ ಗಿಡ್ಡ ಹಸು ಪುಂಗನೂರು ತಳಿ :

ಪುಂಗನೂರು ಹಸು ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿರುವ ಕಂಡು ಬಂದಿದ್ದರುವ ಹಸು, ಆಂದ್ರಪ್ರದೇಶವಲ್ಲದೆ ತೆಲಂಗಾಣ, ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಪುಂಗನೂರು ಹಸು ಸಾಕಾಣಿಕೆ ಮಾಡಲಾಗುತ್ತಿದೆ. ಬಿಳಿ ಮತ್ತು ತಿಳಿ ಬೂದು ಎರಡು ಬಣ್ಣಗಳಲ್ಲಿರುವ ಪುಂಗನೂರು ಹಸುವಿನ ಹಣೆ ಅಗಲ, ಕೊಂಬು ಚಿಕ್ಕದಾಗಿವೆ. ಇದು ಜಗತ್ತಿನ ಅತಿ ಗಿಡ್ಡ ಹಸು, ಚಿಕ್ಕ ಗಾತ್ರದ ಹಸು ಎಂದು ಖ್ಯಾತಿ ಪಡೆದಿದೆ. ಈ ಹಸುವಿನ ಎತ್ತರ ಕೇವಲ ಎರಡೂವರೆ ಅಡಿಗಳಷ್ಟು. ಆದರೆ ಇದು ಎತ್ತರಕ್ಕೆ ತೂಕ ಇಲ್ಲ, ಇದರ ತೂಕ ಮಾತ್ರ 115 ದಿಂದ 200 ಕೆಜಿಗಳಷ್ಟು ಇರುತ್ತದೆ. ಇದು ಪ್ರತಿದಿನ 3 ರಿಂದ 5 ಲೀಟರ್ ಹಾಲು ನೀಡುತ್ತಿದೆ. ಈ ಹಸು ದಿನಕ್ಕೆ ಸುಮಾರು 5ಕೆಜಿ ಯಷ್ಟು ಆಹಾರ ಸೇವಿಸುತ್ತಿದೆ.

ಪುಂಗನೂರು ತಳಿ

ಪುಂಗನೂರು ಹಸುವಿನ ಬೆಲೆ ಲಕ್ಷ ಲಕ್ಷ :

ಈ ಪುಂಗನೂರು ಹಸು ದೈಹಿಕ ಗಾತ್ರದಲ್ಲಿ ಗಿಡ್ಡವಿದ್ದರೂ ಬೆಲೆಯಲ್ಲಿ ಮಾತ್ರ ಎತ್ತರವಾಗಿದೆ. ಸುಂದರ ಹಾಗೂ ಅತಿ ಹೆಚ್ಚು ಔಷಧೀಯ ಗುಣವುಳ್ಳ ಹಾಲು ನೀಡುವ ಮತ್ತು ಧಾರ್ಮಿಕವಾಗಿಯೂ ಹೆಚ್ಚಿನ ಮಹತ್ವ ಹೊಂದಿರುವ ಪುಂಗನೂರು ತಳಿಯ ಕೊಂಬು ಇರುವ ಹಸುವಿನ ಬೆಲೆ 2 ರಿಂದ 2.80 ಲಕ್ಷ ರೂಪಾಯಿ ಬೆಲೆ ಇದೆ. ಕೊಂಬು ಇಲ್ಲದ ಹಸುವಿನ ಬೆಲೆ 1.50 ಲಕ್ಷ ರೂಪಾಯಿ ಇದೆ. ಈ ಹಸುವಿನ ತುಪ್ಪ  ಪ್ರತಿ ಲೀಟರ್‌ಗೆ 5 ಸಾವಿರ ರೂಪಾಯಿಗಳಾಗಿದೆ. ಸಾಮಾನ್ಯ ಹಸುವಿನ ಹಾಲಿನಲ್ಲಿ ಶೇ.3ರಿಂದ 3.5 ರಷ್ಟು ಕೊಬ್ಬಿನ ಅಂಶ ಇದ್ದರೆ ಇನ್ನೂ ಪುಂಗನೂರು ಹಸುವಿನಲ್ಲಿ ಶೇ.8ರಷ್ಟು ಕೊಬ್ಬಿನ ಅಂಶ ಇರುತ್ತದೆ.

ತಿರುಪತಿ ತಿಮ್ಮಪ್ಪನಿಗೂ ಈ ಹಾಲೇ ನೈವೇದ್ಯೆ :

ಪುರಾಣದಲ್ಲಿ ಕಾಮಧೇನುವಾಗಿ ಉಲ್ಲೇಖೀಸುತ್ತಿದ್ದ ಪುಂಗನೂರು ಹಸುವಿಗೆ ಪೂಜ್ಯನೀಯ ಸ್ಥಾನವಿದೆ. ಈಗಾಗಿ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಆಂದ್ರದ ತಿರುಮಲದ ತಿರುಪತಿ ತಿಮ್ಮಪ್ಪನಿಗೆ ನಿತ್ಯವೂ ನೈವೇಧ್ಯೆಕ್ಕೆ ಪುಂಗನೂರು ಹಸುವಿನ ಹಾಲೇ ಸಲ್ಲಿಕೆಯಾಗುತ್ತದೆ. ಇದರ ತುಪ್ಪವೂ ಶ್ರೇಷ್ಠವಾಗಿದ್ದು, ದೇವರಿಗೆ ಅಭಿಷೇಕ, ಹೋಮಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಹಸುವಿನ ಮೂತ್ರವನ್ನೂ ಸಹ ಮಾರಾಟ ಮಾಡಲಾಗುತ್ತದೆ. ಇದನ್ನು ರೈತರು ತಮ್ಮ ಹೊಲಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಕೀಟನಾಶಕವಾಗಿ ಬಳಕೆ ಮಾಡುತ್ತಾರೆ ಎನ್ನಲಾಗಿದೆ. ಪುಂಗನೂರು ಹಸುವಿನ ಹಾಲು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈಗಾಗಿ ಇದರ ಹಾಲಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಪುಂಗನೂರು ತಳಿ
ಅಳವಿನಂಚಿನಲ್ಲಿವೆ ಹಸು :

ಅತ್ಯಂತ ಅಪರೂಪ ತಳಿಯಾದ ಪುಂಗನೂರು ತಳಿ ಅಳವಿನಂಚಿನಲ್ಲಿವೆ. 2019 ರಲ್ಲಿ ನಡೆಸಿದ 20 ನೇ ಜಾನುವಾರು ಗಣತಿಯ ಪ್ರಕಾರ, ಪುಂಗನೂರಿನ ಹಸುಗಳು 13,275 ಎಂದು ದಾಖಲಿಸಲಾಗಿದೆ, ಇದರಲ್ಲಿ 9,876 ಶುದ್ಧ ಮತ್ತು 3,399 ದರ್ಜೆಯ ಹಸುಗಳು ಇವೆ. ತಳಿ ಹುಟ್ಟಿರುವ ಆಂದ್ರಪ್ರದೇಶದಲ್ಲಿ ಇದರ ಸಂಖ್ಯೆ ಗಣಿನೀಯವಾಗಿ ಕುಸಿತುತ್ತಿದೆ.  ಈ ತಳಿ ಸಂರಕ್ಷಣೆ ಕೆಲಸವನ್ನು ಆಂದ್ರ ಸರಕಾರ ಆರ್ಥಿಕ ನೆರವು ನೀಡುತ್ತಿದೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯೂ ಕೂಡಾ ಪ್ರಯತ್ನ ನಡೆಸಿದೆ. ಇದಕ್ಕಾಗಿ ಸಂಘ-ಸಂಸ್ಥೆಗಳು ಕೈಜೋಡಿಸುವ ಮೂಲಕ ಅಳವಿನಂಚಿನಲ್ಲಿರುವ ಈ ಪುಂಗನೂರು ಹಸುಗಳ ಸಂರಕ್ಷಣೆ ಮಾಡುವ ಕೆಲಸವಾಗಬೇಕಾಗಿದೆ.  

ಮನೆಯೊಳಗೆ ಸಾಕಾಣಿಕೆಗೆ ಯೋಗ್ಯ :

ಇತರೆ ತಳಿಗಳ ಹಸುಗಳು ಎತ್ತರವಾಗಿರುತ್ತವೆ ಮನೆಯೊಳಗೆ ಸಾಕಾಣಕೆಗಿಂತ ಮನೆ ಹೊರಗಡೆ ಕೊಟ್ಟಿಗೆ ಮಾಡಿ ಅಲ್ಲಿ ಹಸುಗಳ ಲಾಲನೆ ಪಾಲನೆ ಮಾಡಲಾಗುತ್ತಿದೆ. ಆದರೆ ಎರಡೂವರೆ ಅಡಿ ಎತ್ತರ ಇರುವ ಪುಂಗನೂರು ಹಸು ಮನೆಯೊಳಗೆ ಸಾಕಲು ಯೋಗ್ಯವಾಗಿದೆ. ಈಗಾಗಿ ಆಂದ್ರಪ್ರದೇಶ ಇತರೆ ಕಡೆಗಳಲ್ಲಿ ಈ ಪುಂಗನೂರು ಹಸುವನ್ನು ಕೊಟ್ಟಿಗೆ ಒಳಗೆ ಸಾಕದೇ ಮನೆಯೊಳಗೆ ಸಾಕುತ್ತಿದ್ದಾರೆ ಮನೆಯಲ್ಲಿ ಸದಸ್ಯರಂತೆ ಓಡಾಕೊಂಡು ಬೆಳೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ನಾಯಿಮರಿಗಳನ್ನು ಸಾಕುವ ಟ್ರೆಂಡ್ ಜೋರಾಗಿ ನಡೆದಿದೆ. ನಾಯಿಗಳಿಂದ ಅನುಕೂಲಗಿಂತ ಅನಾಕೂಲಗಳೇ ಹೆಚ್ಚಾಗಿರುತ್ತದೆ ಆದರೆ ಚಿಕ್ಕದಾಗಿ ಸುಂದರವಾಗಿರುವ ಪುಂಗನೂರು ಹಸುವನ್ನು ಮನೆಯಲ್ಲಿ ಸಾಕುವುದು ಮಂಗಳಕರ ಹಾಗೂ ವಾಸ್ತುಕರವಾಗಿದೆ ಎಂದು ಹೇಳಲಾಗುತ್ತಿದೆ.

ಪುಂಗನೂರು ತಳಿ

ಮೋದಿ ನಿವಾಸದಲ್ಲೂ ಈ ಹಸು :

ನವದೆಹಲಿಯಲ್ಲಿರುವ ಪ್ರಧಾನಿಮಂತ್ರಿ ಅಧಿಕೃತ ನಿವಾಸದಲ್ಲಿ ಪುಂಗನೂರು ತಳಿಯ ನಾಲ್ಕೈದು ಹಸುಗಳು ಸಾಕಾಣಿಕೆ ಮಾಡಲಾಗಿದೆ. ಪುಂಗನೂರು ಹಸುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಜನವರಿ 14 ರಂದು ಸಂಕ್ರಾತಿ ಹಬ್ಬದಂದು ಆಹಾರ ತಿನ್ನಿಸುತ್ತಿರುವ ಹಾಗೂ ಮುದ್ದಾಡುತ್ತಿರುವ ಪೋಟೋ ಎಲ್ಲಡೆ ವೈರಲ್ ಆಗಿತ್ತು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!