suddiduniya.com

Drop Drip irrigation ಹನಿ ನೀರಾವರಿ ಬಿಟ್ಟು ಹರಿ ನೀರಾವರಿ ಜಾರಿಗೊಳಿಸಿ

Drop Drip irrigation

ಲಿಂಗಸುಗೂರು : ಕೃಷ್ಣಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ನಂದವಾಡಗಿ ಏತ ನೀರಾವರಿ ಯೋಜನಾ ಪ್ರದೇಶದ ಜಮೀನುಗಳಿಗೆ ಹನಿ (Drip) (Drop Drip irrigation )ನೀರಾವರಿ ಬದಲಾಗಿ ಪೈಪ ಮೂಲಕ ಹರಿ (flow) ನೀರಾವರಿ ಒದಗಿಸುವಂತೆ ಆಗ್ರಹಿಸಿ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಮುಖಂಡರು  ಬೆಳಗಾವಿಯ ಸುವರ್ಣಸೌಧದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.

Drop Drip irrigation

ಈ ಭಾಗದ ರೈತರ ಹೋರಾಟದ ಫಲವಾಗಿ ನಂದವಾಡಗಿ ಏತ ನೀರಾವರಿ ಯೋಜನೆಗೆ 2017 ಜೂನ್ 14ರಂದು ಸಿಎಂ ಸಿದ್ಧರಾಮಯ್ಯನವರು ಚಾಲನೆ ನೀಡಿದ್ದರು. 2100 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಟೆಂಡರ ಕರೆದು ಕೆಲಸ ಆರಂಭಿಸಿ, 2020- 21 ರ ವೇಳೆಗೆ ರೈತರಿಗೆ ನೀರು ತಲುಪಿಸುವ ಸಂಕಲ್ಪ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇಲ್ಲಿಯವರೆಗೂ ರೈತರ ಜಮೀನುಗಳಿಗೆ ನೀರು ಕೊಡದೇ ಇರುವದು ದುರದುಷ್ಟಕರ ಸಂಗತಿಯಾಗಿದೆ.

ನಂದವಾಡಗಿ ಯೋಜನೆ ಈಗಾಗಲೇ 90% ರಷ್ಟು ಕಾಮಗಾರಿ ಪೂರ್ಣಗೊಂಡರು ನೀರು ಕೊಡುವ ಹಂತಕ್ಕೆ ಮುಟ್ಟದಿರುವುದು ವಿಷಾದ ಸಂಗತಿ. ರಾಜ್ಯದ ಇತರ ಪ್ರದೇಶ ವ್ಯಾಪ್ತಿಯಲ್ಲಿ ಕೈಗೊಂಡ ಹನಿ ನೀರಾವರಿ ಯೋಜನೆಗಳಾದ ಮರೋಳ, ಶಿಗ್ಗಾವಿ ಹಾಗೂ ಮುಳವಾಡ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿ ರೈತರ ನೀರಾವರಿ ಕನಸು ಛಿದ್ರವಾಗಿರುವದು ಕಟುಸತ್ಯವಾಗಿದೆ.

Drop Drip irrigation

ಈ ಭಾಗದ ರೈತರು ಹನಿ( Drip) ನೀರಾವರಿಯನ್ನು (Drop Drip irrigation )ಒಪ್ಪುವುದಿಲ್ಲ ಬದಲಾಗಿ ಪೈಪ ಮೂಲಕ ಹರಿ(flow) ನೀರಾವರಿಯಾಗಿ ಪರಿರ್ವತಿಸಿ ವಿನೂತನ ಮಾದರಿಯಲ್ಲಿ ರೈತರಿಗೆ 1 ಹೆಕ್ಷರ ಒಂದಕ್ಕೆ ತೂಬ ಮೂಲಕ ಕೊಟ್ಟು, ಕೃಷಿಹೊಂಡ ನಿರ್ಮಿಸಿ, ಸೋಲಾರ ಪಂಪಸೆಟ್ಟುಗಳನ್ನು ಒದಗಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದರೆ ಈ ಭಾಗದ ರೈತರ ನೀರಾವರಿ ಕನಸು ನನಸಾಗಲಿದ್ದು ಮತ್ತು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತಿದೆ.

ಈ ಸುದ್ದಿನೂ ಓದಿ : https://suddiduniya.com/flow-irrigation/

ಪ್ರತಿ ರೈತರಿಗೆ ಪ್ರತ್ಯೇಕವಾಗಿ ನೀರಿನ ತೂಬು ( ಔಟಲೇಟ)ನ್ನು ಕೊಟ್ಟು ಅವರ ಸಂಪೂರ್ಣ ಭೂಮಿಗೆ ಅಗತ್ಯ ನೀರನ್ನು ಒದಗಿಸುವುದು. ಕೃಷಿ ಭೂಮಿಗೆ ಅಗತ್ಯಕ್ಕೆ ತಕ್ಕಂತೆ ಕೃಷಿಹೊಂಡ ನಿರ್ಮಾಣ ಮಾಡಲು ಆಯಾ ರೈತರಿಗೆ ಹೊಣೆ ನೀಡಿ ವೆಚ್ಚವನ್ನು ನಿಗಮದಿಂದ ಭರಿಸುವುದು. ಕೃಷಿ ಹೊಂಡದಲ್ಲಿ ಸಂಗ್ರಹಗೊಂಡ ನೀರನ್ನು ರೈತರು ಬಳಸಿಕೊಳ್ಳಲು ಸೋಲಾರ ಪಂಪ್‌ ಸೆಟ್ಟುಗಳ ಅವಶ್ಯಕತೆ ಇದ್ದು ನಿಗಮದಿಂದ ಒದಗಿಸಬೇಕಾಗುತ್ತದೆ. ಪ್ರಸ್ತುತ ಯೋಜನೆಯಲ್ಲಿರುವ (Drop Drip irrigation )ಹನಿ( Drip) ನೀರಾವರಿ ರದ್ದುಪಡಿಸಿದ್ದರಿಂದ ಉಳಿತಾಯವಾಗಬಹುದಾದ ಹಣದಲ್ಲಿಯೇ ಈ ಬೇಡಿಕೆಗಳನ್ನು ಈಡೇರಿಸಲು ಅವಕಾಶವಿದೆ ಎನ್ನಲಾಗಿದೆ. ಈ ರೀತಿ ಯೋಜನೆ ರೂಪಿಸುವುದರಿಂದ ದೇಶದಲ್ಲಿಯೇ ಮಾದರಿ ನೀರಾವರಿ ಯೋಜನೆಯಾಗುವದರಲ್ಲಿ ಅನುಮಾನವಿಲ್ಲ. ಕೂಡಲೇ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಈ ವೇಳೆ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಪುರ, ಬಸನಗೌಡ ಬಾದರ್ಲಿ ಸಿಂಧನೂರು, ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ, ಪ್ರಧಾನ ಕಾರ್ಯದರ್ಶಿ ಎಚ್.ಬಿ ಮುರಾರಿ, ಮಲ್ಲೇಶಗೌಡ ಮಟ್ಟೂರ,  ಶರಣಗೌಡ ಬಸಾಪುರ, ರಮೇಶ ಶಾಸ್ತ್ರೀ, ಮಹಿಬೂಬಸಾಬ ಬಡೇಗಾರ, ಗುರುನಾಥರೆಡ್ಡಿ ದೇಸಾಯಿ  ಸೇರಿದಂತೆ ಹೋರಾಟ ಸಮಿತಿ ಸದಸ್ಯರು ರೈತರು ಇದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!