ಸಣ್ಣ ವಿಚಾರಕ್ಕೂ ನೋಟಿಸ್ ನೀಡಿ ಮಾನಸಿಕ ಹಿಂಸೆ
ಲಿಂಗಸುಗೂರು : ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕರು (Manager Harassment )ಸಣ್ಣ ಸಣ್ಣ ವಿಚಾರಕ್ಕೂ ನೋಟಿಸ್ ನೀಡಿ, ಮೇಲಾಧಿಕಾರಿಗಳಿಗೆ ವರದಿ ನೀಡುವುದು, ಈ ವರದಿಯನ್ನೇ ಆಧರಿಸಿ ಮೇಲಾಧಿಕಾರಿಗಳ ಸಿಬ್ಬಂದಿಯನ್ನು ಅಮಾನತ್ ಮಾಡುವುದು ಇದರಿಂದ ಮಾನಸಿಕ ಹಿಂಸೆ ಅನುಭವಿಸಿದ ಸಿಬ್ಬಂದಿಯೊಬ್ಬರು ಸಾರಿಗೆ ಘಟಕದ ಎದುರೇ ಕುಟಂಬ ಸಮೇತ ಆತ್ಮಹತ್ಯೆಗೆ ಯತ್ನ ನಡೆಸಿದ ಘಟನೆ ನಡೆದಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸ್ಥಳೀಯ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್ ರಫೀ ಅವರು ಡಿಸೆಂಬರ್ 2ರಂದು ಕಿ.ಮೀ ಅಪೂರ್ಣ ಮಾಡಿಕೊಂಡು ಬಂದು ಕೆಎಂಪಿಎಲ್ ಕಡಿಮೆ ತಂದಿದ್ದಿರುವ ವಿಚಾರದ ಕುರಿತು ಚಾಲಕ ಹಾಗೂ ಘಟಕದ ವ್ಯವಸ್ಥಾಪಕರ ನಡುವೆ ವಾಗ್ವಾದ ನಡೆದಿದೆ. ಇದನ್ನೇ ಮುಂದಿಟ್ಟುಕೊಂಡು ವ್ಯವಸ್ಥಾಪಕರು ಚಾಲಕರಿಗೆ ನೋಟಿಸ್ ನೀಡಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ವರದಿ ನೀಡಿದ್ದಾರೆ, ಆ ವರದಿಯ ಆಧಾರದ ಮೇಲೆ ಡಿಸೆಂಬರ್ 6ರಂದು ಘಟಕದ ವ್ಯವಸ್ಥಾಪಕರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆಂದು ಚಾಲಕ ಅಬ್ದುಲ್ ರಫಿ ಅವರನ್ನು ಸೇವೆ ಅಮಾನತ್ ಮಾಡಿ ಆದೇಶ ಹೊರಡಿಸಿದ್ದಾರೆ.
ಕುಟಂಬ ಸಮೇತ ಆತ್ಮಹತ್ಯೆಗೆ ಯತ್ನ :
ಅಮಾನತ್ ಆಗಿರುವ ಆದೇಶ ಪ್ರತಿ ನೋಡಿದ ಚಾಲಕ ಅಬ್ದುಲ್ ರಫಿ ಆಘಾತಕ್ಕೊಳಗಾಗಿ ತನ್ನ ಇಡೀ ಕುಟಂಬವನ್ನು ಕರೆದುಕೊಂಡು ಬಂದು ವಿಷದ ಬಾಟಲ್ ತಂದು ಸಾರಿಗೆ ಘಟಕದ ಎದುರು ಧರಣಿ ಆರಂಭಿಸಿದ್ದಾನೆ. (Manager Harassment )ಘಟಕದ ವ್ಯವಸ್ಥಾಪಕರು ಕೆಎಂಪಿಲ್ ಕಡಿಮೆ ಬಂದಿದೆ ಹಾಗೂ ಇತರೆ ಸಣ್ಣ ಸಣ್ಣ ವಿಚಾರಕ್ಕೂ ಪದೇ ಪದೇ ನೋಟಿಸ್ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದರಿಂದ ಹೇಗೇ ಕರ್ತವ್ಯ ಮಾಡಲು ಸಾಧ್ಯ, ನಾವು ಮನುಷ್ಯರೇ ಇಷ್ಟು ಒತ್ತಡ ಹಾಕಿದರೆ ಕೆಲಸ ಮಾಡಲು ಹೇಗೆ ಸಾಧ್ಯ. 25 ಸಿಬ್ಬಂದಿಗಳಿಗೆ ಇದೇ ರೀತಿ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದರು.
ಡಿಸಿ ಬರೋವರಿಗೂ ಧರಣಿ :
ಸಣ್ಣ ಪುಟ್ಟ ವಿಚಾರಗಳನ್ನು ಸ್ಥಳೀಯ ಹಂತದಲ್ಲಿ ಪರಿಹರಿಸಬಹುದು ಆದರೆ ಸಣ್ಣ ಸಣ್ಣ ವಿಚಾರಕ್ಕೂ ನೋಟಿಸ್ ನೀಡಿ ಅಮಾನತ್ ಮಾಡುವಂತೆ ಮೇಲಾಧಿಕಾರಿಗಳಿಗೆ ವರದಿ ನೀಡುವುದು, ಮೇಲಾಧಿಕಾರಿಗಳಿಗೆ ಕೈಕಾಲು ಮುಗಿದು ತಪ್ಪಾಗಿದೆ ಎಂದು ಕ್ಷಮೆ ಕೇಳಿ ಮತ್ತೆ ಕೆಲಸ ಮಾಡಬೇಕಾದ ಪರಿಸ್ಥಿತಿ ಈಗಿನ ಘಟಕದ ವ್ಯವಸ್ಥಾಪಕರು ತಂದಿದ್ದಾರೆ. ಗುಜರಿಗೆ ಹಾಕುವ ಹಳೆಯ ಬಸ್ ನೀಡುತ್ತಾರೆ. ದೇವರ ಮೇಲೆ ಭಾರ ಹಾಕಿ ನಾವು ಹಳೆಯ ಬಸ್ ಓಡಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತೇವೆ. ಇದರ ನಡುವೆ ಕೆಎಂಪಿಎಲ್ ತರಬೇಕು ತರದಿದ್ದರೆ ಮ್ಯಾನೇಜರ್ ನೋಟಿಸ್ ನೀಡಿ ಅಮಾನತ್ ಮಾಡುತ್ತಾರೆ ಇದರಿಂದ ಚಾಲಕರು ಹಾಗೂ ನಿರ್ವಾಹಕರು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಾರೆ (Manager Harassment )ನಮಗೆ ನ್ಯಾಯ ಸಿಗಬೇಕು, ಈ ಘಟಕದ ವ್ಯವಸ್ಥಾಪಕರು ಬೇರೆಡೆ ವರ್ಗಾವಾಗಬೇಕು ಇಲ್ಲವೇ ನಾವು ಜೀವ ಬಿಡುತ್ತೇವೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಥಳಕ್ಕೆ ಬರೋವರಿಗೂ ಧರಣಿ ವಾಪಸ್ಸು ಪಡೆಯೋಲ್ಲ ಎಂದು ಅಮಾನತ್ ಗೊಂಡಿರುವ ಚಾಲಕ ಅಬ್ದುಲ್ ರಫಿ ತಿಳಿಸಿದ್ದಾರೆ.
ವಿಷದ ಬಾಟಲ್ ಕಸಿದುಕೊಂಡ ಸಿಬ್ಬಂದಿ :
ಮಾನಸಿಕ ಹಿಂಸೆಯಿಂದ ನೊಂದಿರುವ ಚಾಲಕ ಅಬ್ದುಲ್ ರಫಿ ತನ್ನ ಕುಟಂಬದೊಂದಿಗೆ ಸಾರಿಗೆ ಘಟಕದ ಎದುರು ವಿಷ ಕುಡಿಯಲು ಯತ್ನಿಸಿದ್ದರು ಆದರೆ ಸಾರಿಗೆ ಘಟಕದ ಭದ್ರತಾ ಸಿಬ್ಬಂದಿ ಅದನ್ನು ಕಸಿದುಕೊಂಡು ಮಾತಿನ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಾರಿಗೆ ಘಟಕದ ಸಿಬ್ಬಂದಿಗಳಿಗೆ ವಿನಾಕಾರಣ ನೋಟಿಸ್ ನೀಡಿ ಅಮಾನತ್ ಮಾಡುತ್ತಾ ಕುಳಿತರೆ ಸಾರಿಗೆ ಘಟಕ ಹೇಗೆ ಮುನ್ನಡೆಸಲು ಸಾಧ್ಯ, ಕೂಡಲೇ ಸಾರಿಗೆ ಘಟಕದ ವ್ಯವಸ್ಥಾಪಕರನ್ನು ಬೇರೆಡೆ ವರ್ಗ ಮಾಡಬೇಕು. ಚಾಲಕ ಅಬ್ದುಲ್ ರಫಿ ಅವರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಇರುತ್ತದೆ ಎಂದು ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ ತಿಳಿಸಿದ್ದಾರೆ.
One thought on “Manager Harassment :ಮ್ಯಾನೇಜರ್ ಕಿರುಕುಳ, ಡಿಪೋ ಎದುರೇ ಆತ್ಮಹತ್ಯೆಗೆ ಯತ್ನ…!! ”